ಕಾರವಾರ (Karwar): ವಿಶ್ವ ಶೌಚಾಲಯ ದಿನಾಚರಣೆ (Toilet Day) ಪ್ರಯಕ್ತ ‘ನಮ್ಮ ಶೌಚಾಲಯ ನಮ್ಮ ಗೌರವ’ ಎಂಬ ವಿಶೇಷ ಆಂದೋಲನದಲ್ಲಿ ಉತ್ತಮ ಕಾರ್ಯನಿರ್ವಹಣೆ ತೋರಿರುವ ಸಮುದಾಯ ಶೌಚಾಲಯ, ವೈಯಕ್ತಿಕ ಗೃಹ ಶೌಚಾಲಯ ಹಾಗೂ ಸ್ವಚ್ಛತಾಗಾರರಿಗೆ ಪ್ರಶಸ್ತಿಯನ್ನು ಸೋಮವಾರ ಕುಮಟಾ (Kumta) ತಾಲೂಕು ಪಂಚಾಯತ ಸಭಾಭವನದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕಾಂದೂ ವಿತರಿಸಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ವಿಶ್ವ ಶೌಚಾಲಯ ದಿನಾಚರಣೆ (Toilet Day) ಪ್ರಯಕ್ತ ಜಿಲ್ಲೆಯಲ್ಲಿ (Uttara Kannada) ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಅಧ್ಯಕ್ಷತೆಯಲ್ಲಿ ನ.೧೯ ರಿಂದ ಡಿ.೧೦ರವರೆಗೆ “ನಮ್ಮ ಶೌಚಾಲಯ ನಮ್ಮ ಗೌರವ” ಎಂಬ ಶೀರ್ಷಿಕೆ ಹಾಗೂ “ಅಂದದ ಶೌಚಾಲಯ ಆನಂದದ ಜೀವನ” ಎಂಬ ಘೋಷವಾಕ್ಯದೊಂದಿಗೆ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಸಮುದಾಯ ಶೌಚಾಲಯ ನಿರ್ಮಾಣಗೊಂಡು ಉತ್ತಮವಾಗಿ ಕಾರ್ಯಾಚರಣೆಯಲ್ಲಿರುವ ಸಮುದಾಯ ಶೌಚಾಲಯಗಳಿಗೆ ಪ್ರಶಸ್ತಿ ನೀಡಲಾಗಿದೆ.  ಶಿರಸಿ (Sirsi) ತಾಲೂಕಿನ ಸೊಂದಾ ಗ್ರಾಮ ಪಂಚಾಯತ್‌ಯ ಜೈನ ಮಠ, ಯಲ್ಲಾಪುರ (Yallapur) ತಾಲೂಕಿನ ಆನಗೋಡ ಗ್ರಾಮ ಪಂಚಾಯತಿಯ ಗೋಪಾಲಕೃಷ್ಣ ದೇವಸ್ಥಾನ, ಕುಮಟಾ (Kumta) ತಾಲೂಕಿನ ಗೋಕರ್ಣ (Gokarna) ಗ್ರಾಮ ಪಂಚಾಯತಿಯ ಮುಖ್ಯ ಕಡಲತೀರದ ಸಮುದಾಯ ಶೌಚಾಲಯಗಳಿಗೆ ಪ್ರಶಸ್ತಿ ನೀಡಲಾಯಿತು.

ಇದನ್ನೂ ಓದಿ : ಭಟ್ಕಳದಲ್ಲಿ ಮೂವರಿಂದ ಕಾರ್ಮಿಕನ ಮೇಲೆ ಹಲ್ಲೆ

bhaira naik

ಭೈರಾ ನಾಯ್ಕ

ಅದೇ ರೀತಿ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ವೈಯಕ್ತಿಕ ಗೃಹ ಶೌಚಾಲಯ ನಿರ್ಮಾಣಗೊಂಡ ಹಾಗೂ ಉತ್ತಮವಾಗಿ ಕಾರ್ಯಾಚರಣೆಯಲ್ಲಿರುವ ಜಿಲ್ಲೆಯ ಅಂಕೋಲಾ (Ankola) ತಾಲೂಕಿನ ಅವರ್ಸ ಗ್ರಾಮ ಪಂಚಾಯತಿಯ ನಯನಾ ಸುಭಾಸ್ ನಾಯ್ಕ, ಕುಮಟಾ ತಾಲೂಕಿನ ಕಾಗಾಲ ಗ್ರಾಮ ಪಂಚಾಯತಿಯ ಅಘನಾಶಿನಿ ಗ್ರಾಮದ ಗೌರಿ ನಾರಾಯಣ ಪಟಗಾರ, ಭಟ್ಕಳ (Bhatkal) ತಾಲೂಕಿನ ಕಾಯ್ಕಿಣಿ ಗ್ರಾಮ ಪಂಚಾಯತಿಯ ಕಾಯ್ಕಿಣಿ ಗ್ರಾಮದ ಭೈರಾ ಸೋಮಯ್ಯಾ ನಾಯ್ಕ, ಶಿರಸಿ ತಾಲೂಕಿನ ದೊಡ್ನಳ್ಳಿ ಗ್ರಾಮ ಪಂಚಾಯತಿಯ ದೊಡ್ನಳ್ಳಿ ಗ್ರಾಮದ ಕುಮುದಾ ಸತ್ಯನಾರಾಯಣ ಹೆಗಡೆ, ಯಲ್ಲಾಪುರ ತಾಲೂಕಿನ ಮಂಚಿಕೇರಿ ಗ್ರಾಮ ಪಂಚಾಯತ್ ಕಂಪ್ಲಿ ಗ್ರಾಮದ ಶಾಂತಾ ಹನುಮಂತ ಭೋವಿ ವಡ್ಡರ ಅವರಿಗೆ ಪ್ರಶಸ್ತಿ ನೀಡಲಾಯಿತು.

ಇದನ್ನೂ ಓದಿ : ಸೀರೆಯಿಂದ ನೇಣು ಬಿಗಿದುಕೊಂಡ ಭಟ್ಕಳದ ಮಹಿಳೆ

ನೈರ್ಮಲ್ಯ ಕ್ಷೇತ್ರದಲ್ಲಿ ಕಸ ಸಂಗ್ರಹಣೆ, ವಿಂಗಡಣೆ ಹಾಗೂ ವಾಹನ ಚಾಲನೆ ಕಾರ್ಯದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಕುಮಟಾ ತಾಲೂಕಿನ ದಿವಗಿ ಗ್ರಾಮ ಪಂಚಾಯತ ಶ್ಯಾಮಲಾ ಅಂಬಿಗ (ಸ್ವಚ್ಛ ವಾಹಿನಿ ಚಾಲಕಿ), ಯಲ್ಲಾಪುರ ತಾಲೂಕಿನ ಉಮ್ಮಚಗಿ ಗ್ರಾಮ ಪಂಚಾಯತಿಯ ಮಣಿಕಂಠವ್ವ ಲಿಂಗಪ್ಪ ವಡ್ಡರ (ಸ್ವಚ್ಛ ವಾಹಿನಿ ಚಾಲಕಿ), ಅಂಕೋಲಾ ತಾಲೂಕಿನ ಬೆಳಸೆ ಗ್ರಾಮ ಪಂಚಾಯತಿಯ ಅಮಿತಾ ಹೇಮಂತ ಆಗೇರ (ಕಸ ವಿಂಗಡಣೆಯಲ್ಲಿ ಕಾರ್ಯನಿರ್ವಹಣೆ) ಅವರನ್ನು ಗುರುತಿಸಿ ಸನ್ಮಾನಿಸಲಾಯಿತು.

ಇದನ್ನೂ ಓದಿ : ಸಮುದ್ರ ಪಾಲಾದ ಭಟ್ಕಳದ ಯುವಕ

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ (ಆಡಳಿತ) ನಾಗೇಶ ರಾಯ್ಕರ, ಅಭಿವೃದ್ಧಿ ಶಾಖೆಯ ಉಪ ಕಾರ್ಯದರ್ಶಿ ಪ್ರಕಾಶ ಹಾಲಮ್ಮನವರ, ಮುಖ್ಯ ಲೆಕ್ಕಾಧಿಕಾರಿ ಆನಂದಸಾ ಹಬೀಬ, ಮುಖ್ಯ ಯೋಜನಾಧಿಕಾರಿ ವಿನೋದ ಅಣ್ವೇಕರ, ಯೋಜನಾ ನಿರ್ದೇಶಕ ಕರೀಂ ಅಸಾದಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ರಾಜೀವ ನಾಯ್ಕ, ಆಡಳಿತ ವಿಭಾಗದ ಸಹಾಯಕ ಕಾರ್ಯದರ್ಶಿ ಸುನೀಲ ನಾಯ್ಕ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಎಲ್ಲ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು ಮತ್ತು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರು, ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಇದನ್ನೂ ಓದಿ : ಶಾಲಾ ವಿದ್ಯಾರ್ಥಿಗಳಿದ್ದ ಬಸ್‌ ಪಲ್ಟಿ