ಭಟ್ಕಳ(Bhatkal): ಜಾಲಿ ಪಟ್ಟಣ ಪಂಚಾಯತನ (Town Panchayat)ನೂತನ ಅಧ್ಯಕ್ಷರಾಗಿ ತಂಜೀಮ್ (Tanzeem) ಬೆಂಬಲಿತ ಅಫ್ಶ್ಯಾ ಕಾಜಿಯಾ ಹಾಗೂ ಉಪಾಧ್ಯಕ್ಷರಾಗಿ ಇಮ್ರಾನ್ ಲಂಕಾ ಬುಧುವಾರದಂದು ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿ ತಹಶೀಲ್ದಾರ್ ನಾಗರಾಜ ನಾಯ್ಕಡ್ ಅಧ್ಯಕ್ಷತೆಯಲ್ಲಿ ಚುನಾವಣಾ ಪ್ರಕ್ರಿಯೆ ನಡೆದಿದ್ದು ಅಧ್ಯಕ್ಷ ಉಪಾಧ್ಯಕ್ಷರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಜಾಲಿ ಪಟ್ಟಣ ಪಂಚಾಯತ (Town Panchayat) ಸದಸ್ಯರ ಚುನಾವಣೆ ನಡೆದು ಈಗಾಗಲೇ 2 ವರ್ಷ 7 ತಿಂಗಳು ಕಳೆದಿದೆ. ಏಳು ಜನರು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 13 ಸ್ಥಾನಗಳಿಗಾಗಿ ಮತದಾನ ನಡೆದಿತ್ತು. ಮೊದಲ ಅವಧಿಯಲ್ಲಿ ಸಮೀಮ್ ಬಾನು ಅಧ್ಯಕ್ಷೆ, ಫರಾನ್ ಇರ್ಷಾದ ಇಕ್ಕೇರಿ ಉಪಾಧ್ಯಕ್ಷರಾಗಿದ್ದರು. ಒಟ್ಟು 20 ಸದಸ್ಯರಿರುವ ಜಾಲಿ ಪಟ್ಟಣ ಪಂಚಾಯಿತಿಯಲ್ಲಿ 13 ತಂಜೀಂ ಬೆಂಬಲಿತರು, ಕಾಂಗ್ರೆಸಿನಿಂದ ಐವರು, ಬಿಜೆಪಿಯಿಂದ ಇಬ್ಬರು ಸದಸ್ಯರಿದ್ದಾರೆ.
ಇದನ್ನೂ ಓದಿ : ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತರಿಂದ ಸಿಎಂಗೆ ಮನವಿ
ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗ ಮಹಿಳೆ ಮೀಸಲಾತಿ ಇರುವುದರಿಂದಾಗಿ ಅಫ್ಶಾ ಕಾಜಿಯಾ ಅಧ್ಯಕ್ಷ ರಾಗಿ ಆಯ್ಕೆಯಾಗಿದ್ದು. ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಅ ಮೀಸಲಾತಿ ಇರುವುದರಿಂದ ಇಮ್ರಾನ್ ಲಂಕಾ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷ ಹುದ್ದೆಗೆ ಕಾಂಗ್ರೆಸ್ ಪಕ್ಷದ ರಮೇಶ ನಾಯ್ಕ ಹೆಸರು ಈಗಾಗಲೇ ಕೇಳಿ ಬರುತ್ತಿತ್ತು ಆದರೆ ಅಂತಿಮವಾಗಿ ತಂಜೀಮ್ ಬೆಂಬಲಿತ ಸದಸ್ಯ ಇಮ್ರಾನ್ ಲಂಕಾ ಉಪಾಧ್ಯಕ್ಷ ರಾಗಿ ಆಯ್ಕೆಯಾಗಿದ್ದಾರೆ.