ಹುಬ್ಬಳ್ಳಿ (Hubballi) : ಹೆಂಡತಿ ಕಿರುಕುಳ ತಾಳಲಾರದೆ ಗಂಡ ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿಯ (Hubballi) ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಚಾಮುಂಡೇಶ್ವರಿ ನಗರದಲ್ಲಿ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಪೀಟರ್ ಆತ್ಮಹತ್ಯೆ ಮಾಡಿಕೊಂಡವರಾಗಿದ್ದು, ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ. ಡ್ಯಾಡಿ ಆಯಮ್ ಸಾರಿ, ನನ್ನ ಹೆಂಡತಿ ಪಿಂಕಿ ಈಸ್ ಕಿಲ್ಲಿಂಗ್ ಮೀ ಸೀ ವಾಂಟ್ ಮೈ ಡೆಥ್ ಎಂದು ಡೆತ್ ನೋಟ್ ಬರೆದು, ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೀಟರ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಕೆಲ ದಿನಗಳಿಂದ ಗಂಡ ಹೆಂಡತಿ ಮಧ್ಯ ಜಗಳ ಆಗುತ್ತಿತ್ತು. ಹೆಂಡತಿ ಟಾರ್ಚರ್ ನಿಂದ ನಾನು ಸಾಯ್ತಿದಿನಿ ಎಂದು ಡೆಥ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ : Book Release/ ಉಮೇಶ ಮುಂಡಳ್ಳಿಯ ತಿಂಗಳ ಬೆಳಕು ಮರುಮುದ್ರಣ
ವಿಚ್ಛೇದನಕ್ಕೆ ಅರ್ಜಿ: ಪೀಟರ್ ಪತ್ನಿ ಪಿಂಕಿ ಗಂಡನಿಂದ ಡೈವೋರ್ಸ್ ಗಾಗಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ವಿಚ್ಛೇದನ ಕೋರಿ ಜೀವನಾಂಶಕ್ಕಾಗಿ ೨೦ ಲಕ್ಷ ಕೊಡುವಂತೆ ಗಂಡನಿಗೆ ಪತ್ನಿ ಪಿಂಕಿ ಪೀಡಿಸುತ್ತಿದ್ದಳು ಎಂಬ ಆರೋಪ ಕೇಳಿಬಂದಿದೆ. ಕಳೆದ ಏಳೆಂಟು ತಿಂಗಳುಗಳಿಂದ ಪತಿ ಪತ್ನಿ ಇಬ್ಬರೂ ದೂರವಾಗಿದ್ದರು. ಅನೈತಿಕ ಸಂಬಂಧ ಹಿನ್ನೆಲೆ ದೂರವಾಗಿದ್ದಾಗಿ ಪೀಟರ್ ಕುಟುಂಬಸ್ಥರು ಆರೋಪಿಸಿದ್ದಾರೆ.
ಇದನ್ನೂ ಓದಿ : weather forecast / ಕರಾವಳಿ ಸಹಿತ ಹಲವೆಡೆ ಮಳೆ
ಪತ್ನಿ ಪಿಂಕಿ ಬೇರೊಬ್ಬನ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಗಿ ಆರೋಪಿಸಿದ್ದಾರೆ. ಈ ಹಿನ್ನೆಲೆ ಪ್ರಶ್ನಿಸಿದ್ದಕ್ಕೆ ದಂಪತಿ ನಿತ್ಯ ಜಗಳವಾಡುತ್ತಿದ್ದರು. ಗಂಡನಿಂದ ದೂರವಾಗಿದ್ದ ಪತ್ನಿ ಪಿಂಕಿ ಜೀವನಾಂಶಕ್ಕಾಗಿ ಕಿರುಕುಳ ನೀಡುತ್ತಿದ್ದಳು. ಇದರಿಂದಾಗಿಯೇ ಮನನೊಂದು ಪೀಟರ್ ನೇಣಿಗೆ ಶರಣಾಗಿರುವುದಾಗಿ ಪೀಟರ್ ಕುಟುಂಬಸ್ಥರು ಆರೋಪಿಸಿದ್ದಾರೆ.
ಇದನ್ನೂ ಓದಿ : Namadhari/ ಫೆ.೨ರಿಂದ ೫ರವರೆಗೆ ನಾಮಧಾರಿ ಗುರುಮಠದಲ್ಲಿ ವರ್ಧಂತಿ ಮಹೋತ್ಸವ
ಡೆತ್ ನೋಟ್‌ನಲ್ಲಿ ವಿಚಿತ್ರ ಬೇಡಿಕೆ : ಸಾವಿಗೂ ಮುನ್ನ ಡೆತ್ ನೋಟ್ ನಲ್ಲಿ ತನ್ನ ಶವದ ಪೆಟ್ಟಿಗೆ ಮೇಲೆ ಹೆಂಡತಿಯ ಕಿರುಕುಳವೇ ಸಾವಿಗೆ ಕಾರಣ ಎಂದು ಬರೆಯುವಂತೆ ಮೃತ ಪೀಟರ್ ಮನವಿ ಮಾಡಿದ್ದರು. ಶವದ ಪೆಟ್ಟಿಗೆ ಮೇಲೆ ನನ್ನ ಹೆಂಡತಿಯ ಕಾಟ ತಾಳಲಾರದೇ ಸತ್ತೆನು ಎಂದು ಬರೆಯುವಂತೆ ಪೀಟರ್ ಮನವಿ ಮಾಡಿಕೊಂಡಿದ್ದ. ಅದರಂತೆ, ಪೀಟರ್ ಕುಟುಂಬಸ್ಥರು ಶವದ ಪೆಟ್ಟಿಗೆ ಮೇಲೆ ಸ್ಟಿಕರ್ ಅಂಟಿಸಿದ್ದಾರೆ.
ಇದನ್ನೂ ಓದಿ : weather forecast / ಕರಾವಳಿ ಸಹಿತ ಹಲವೆಡೆ ಮಳೆ