ಭಟ್ಕಳ : ಮೈಸೂರು ವಿಭಾಗದ ಪಶ್ಚಿಮಘಟ್ಟದಲ್ಲಿ ಗುಡ್ಡಕುಸಿತದಿಂದ ಹೊರಡಿಸಿದ್ದ ರೈಲು ಸಂಚಾರ ನಿಷೇಧವನ್ನು(train cancelled) ಇನ್ನೆರಡು ದಿನ ಮುಂದುವರಿಸಲಾಗಿದೆ. ಹೀಗಾಗಿ ಕಾರವಾರ ಮತ್ತು ಬೆಂಗಳೂರು ನಡುವೆ ಮಂಗಳವಾರದವರೆಗೆ ರೈಲು ಸಂಚರಿಸದು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಭಾರೀ ಮಳೆಯು ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆ ವಿಭಾಗದಲ್ಲಿ ಮಣ್ಣಿನ ಸವೆತ/ಭೂಕುಸಿತಕ್ಕೆ ಕಾರಣವಾಗಿದೆ. ಈ ಭಾಗದಲ್ಲಿ ಶನಿವಾರದಿಂದ ದುರಸ್ತಿ ಕಾರ್ಯ ನಡೆಯುತ್ತಿದೆ. ಈವರೆಗೆ ಪೂರ್ಣವಾಗದೆ ಇನ್ನೂ ಎರಡು ದಿನ ದುರಸ್ತಿ ಕಾರ್ಯ ನಡೆಯುವ ಸಾಧ್ಯತೆಯಿದೆ.
ಇದನ್ನೂ ಓದಿ : ರಕ್ಷಣಾ ಕಾರ್ಯ ನಿಲ್ಲದು : ಸಚಿವ ಮಂಕಾಳ
ತೀವ್ರ ಮಳೆಯಿಂದಾಗಿ ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆ ವಿಭಾಗದಲ್ಲಿ ಯಡಕುಮೇರಿ ಮತ್ತು ಕಡಗರವಳ್ಳಿ ನಿಲ್ದಾಣಗಳ ನಡುವೆ ಗಮನಾರ್ಹವಾದ ಮಣ್ಣಿನ ಸವೆತ ಮತ್ತು ಭೂಕುಸಿತ ಸಂಭವಿಸಿದೆ. ಹಾನಿಯ ಪ್ರಮಾಣದಿಂದಾಗಿ ಮುಂದಿನ ಸೂಚನೆ ಬರುವವರೆಗೆ ಈ ಪ್ರದೇಶದಲ್ಲಿ ಎಲ್ಲಾ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ (train cancelled).
ರದ್ದಾದ ರೈಲುಗಳ ವಿವರ ಕೆಳಗಿನಂತಿದೆ: