ಮಂಗಳೂರು: ಕಾರ್ಕಳ (Karkala)–ಮೂಡುಬಿದಿರೆ (Mudubidre) ರಾಷ್ಟ್ರೀಯ ಹೆದ್ದಾರಿಯ ಬೆಳುವಾಯಿ ಸಮೀಪ ವಾಕರಸಾ ಸಂಸ್ಥೆಯ (NWKRTC) ಬಸ್ಸೊಂದು ಗೂಡ್ಸ್ ಮಿನಿ ಟೆಂಪೋಗೆ ಡಿಕ್ಕಿ ಹೊಡೆದ (bus accident) ಪರಿಣಾಮ ಟೆಂಪೋ ಚಾಲಕ ಬಂಟ್ವಾಳ (Bantwal) ತಾಲೂಕು ಕೆಲಿಂಜೆ ನಿವಾಸಿ ಲೆಸ್ಟರ್ ಡೇವಿಡ್ ಡಿ’ಸೋಜ (30 ) ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಭವಿಸಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮೂಡುಬಿದಿರೆಯಿಂದ ಕಾರ್ಕಳ ಮೂಲಕ ಭಟ್ಕಳಕ್ಕೆ (Bhatkal) ಸಾಗುತ್ತಿದ್ದ ವಾಕರಸಾ ಸಂಸ್ಥೆಯ ಬಸ್ ವಿರುದ್ಧ ದಿಕ್ಕಿನಲ್ಲಿ ಬಂದು ಕಾರ್ಕಳ ಕಡೆಯಿಂದ ಮೂಡುಬಿದಿರೆ ಕಡೆಗೆ ಬರುತ್ತಿದ್ದ ಮಿನಿ ಗೂಡ್ಸ್ ಟೆಂಪೋಗೆ ಡಿಕ್ಕಿ ಹೊಡೆದಿದೆ (bus accident) ಎಂದು ಆರೋಪಿಸಲಾಗಿದೆ. ಡಿಕ್ಕಿಯ ತೀವ್ರತೆಗೆ ಟೆಂಪೋ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Memorandum/ ಮಾರಿಕಾಂಬಾ ದೇವಸ್ಥಾನದ ಎದುರು ರಂಜಾನ್ ಅಂಗಡಿ ಹಾಕದಿರಲು ಮನವಿ
ಇದೀಗ ರಾಷ್ಟ್ರೀಯ ಹೆದ್ದಾರಿ (National Highway) ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಸೂಕ್ತ ರೀತಿಯಲ್ಲಿ ರಸ್ತೆ ಡೈವರ್ಷನ್ ವ್ಯವಸ್ಥೆ ಮಾಡದೇ ಇರುವುದರಿಂದ ಈ ಭಾಗದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನೆಯ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.



