ಭಟ್ಕಳ(Bhatkal): ಇಂದು ದೇಶದಾದ್ಯಂತ “ಘರ್ ಘರ್ ತಿರಂಗ” ಅಭಿಯಾನ ನಡೆಯುತ್ತಿದೆ. ತ್ರಿವರ್ಣ ಧ್ವಜ (tricolour flag) ಈ ದೇಶದ ಹೆಮ್ಮೆ. ಇದು ನಿರಂತರ ಆಕಾಶದೆತ್ತರಕ್ಕೆ ಹಾರಬೇಕು. ಆದರೆ ತಿರಂಗದ (tricolour flag) ಜೊತೆಗೆ ಪ್ರತಿ ಮನೆಗೂ ಉದ್ಯೋಗದ ಭರವಸೆ ಸಿಗಬೇಕು ಎಂದು ವೆಲ್ಫೇರ್ ಸೊಸೈಟಿಯ ಚೇರಮನ್ ಖಾದಿರ್ ಮೀರಾ ಪಟೇಲ್ ಹೇಳಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅವರು ಹೆಬಳೆ ಪಂಚಾಯತ್ ವ್ಯಾಪ್ತಿಯ ಜಾಮಿಯಾಬಾದ್ ರಸ್ತೆಯಲ್ಲಿರುವ ನ್ಯೂ ಶಮ್ಸ್ ಶಾಲೆಯಲ್ಲಿ ನಡೆದ ೭೮ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಅತ್ಯಂತ ಖೇದಕರ ಸಂಗತಿ ಎಂದರೆ ಇಂದು ನಮ್ಮ ದೇಶದಲ್ಲಿ ದ್ವೇಷದ ವಿಷ ಬೀಜವನ್ನು ಬಿತ್ತಲಾಗುತ್ತಿದೆ. ಕೆಲ ವರ್ಷಗಳ ಹಿಂದೆ ಇಂತಹ ಪರಿಸ್ಥಿತಿ ಇದ್ದಿಲ್ಲ. ಸ್ವಾತಂತ್ರ್ಯೋತ್ಸವದ ಭಾಷಣಗಳಲ್ಲಿ ಇಂತಹ ವಿಷಯಗಳು ಇರುತ್ತಿರಲಿಲ್ಲ. ಅದರೆ ಬಹಳ ದುಃಖದಿಂದ ಇಂದು ಇದನ್ನೆಲ್ಲ ಹೇಳಬೇಕಾಗಿ ಬಂದಿದೆ. ದ್ವೇಷದ ವ್ಯಾಪಾರ ನಿಲ್ಲಬೇಕು, ಪ್ರೀತಿ ಪ್ರೇಮದ ಅಂಗಡಿಗಳು ತೆರೆದುಕೊಂಡಾಗ ಮಾತ್ರ ದೇಶ ಅಭಿವೃದ್ಧಿ ಕಾಣಲು ಸಾಧ್ಯ ಎಂದರು.
ಇದನ್ನೂ ಓದಿ : ಪ್ರಥಮ ಚಿಕಿತ್ಸೆ, ಸುರಕ್ಷತಾ ನಿಯಮ ಕುರಿತ ಕಾರ್ಯಗಾರ ಯಶಸ್ವಿ
ದಮ್ಮಾಮ್ ನ ಭಟ್ಕಳ ಮುಸ್ಲಿಮ್ ಜಮಾತ್ ನ ಉಪಾಧ್ಯಕ್ಷ ಇಸಾ ಶಾಬಂದ್ರಿ ಧ್ವಜಾರೋಹಣ ನೆರವೇರಿಸಿದರು. ತರಬಿಯತ್ ಎಜ್ಯುಕೇಶನ್ ಸೂಸೈಟಿ ಮಾಜಿ ಅಧ್ಯಕ್ಷ ಅಬ್ದುಲ್ ಖಾದಿರ್ ಬಾಷಾ ರುಕ್ನುದ್ದಿನ್, ಪ್ರಾಂಶುಪಾಲ ಲಿಯಾಖತ್ ಅಲಿ ಮಾತನಾಡಿದರು.
ವಿಡಿಯೋ ಸಹಿತ ಇದನ್ನೂ ಓದಿ : celebration/ ಭಟ್ಕಳದಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ
ತರಬಿಯತ್ ಎಜ್ಯುಕೇಶನ್ ಸೂಸೈಟಿ ಅಧ್ಯಕ್ಷ ಮುಹಮ್ಮದ್ ಇಸ್ಮಾಯಿಲ್ ಮೊಹತೆಶಮ್, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ನಝೀರ್ ಆಹ್ಮದ್ ಖಾಝಿ, ಅಝೀಝುರ್ರಹ್ಮಾನ್ ರುಕ್ನುದ್ದೀನ್ ನದ್ವಿ, ಸೈಯ್ಯದ್ ಖುತುಬ್ ಬರ್ಮಾವರ್ ನದ್ವಿ, ಸೈಯ್ಯದ್ ಯಾಸಿರ್ ಬರ್ಮಾವರ್ ನದ್ವಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.