ಬೆಂಗಳೂರು(Bengaluru): ಇಲ್ಲಿನ ನಾಯಂಡಹಳ್ಳಿ ಬಳಿಯ ನಂದಿ ಲಿಂಕ್ ಗ್ರೌಂಡ್​ನಲ್ಲಿ ಮೂರು ದಿನಗಳ ಕಾಲ ಪ್ರಾಪರ್ಟಿ ಎಕ್ಸ್​ಪೋ (TV9 Property Expo) ನಡೆಯಲಿದೆ. ಟಿವಿ9 ಕನ್ನಡ ಸ್ವೀಟ್ ಹೋಮ್​ನಿಂದ ನವೆಂಬರ್ 15ರಿಂದ 17ರವರೆಗೆ ರಿಯಲ್ ಎಸ್ಟೇಟ್ ಎಕ್ಸ್​ಪೋ ಆಯೋಜನೆ ಮಾಡಲಾಗುತ್ತಿದೆ. ಬೆಂಗಳೂರಿನ ಪ್ರಮುಖ ಲ್ಯಾಂಡ್ ಡೆವಲಪರ್​ಗಳ ವಿವಿಧ ಪ್ರಾಜೆಕ್ಟ್​ಗಳನ್ನು ಒಂದೇ ವೇದಿಕೆಯಲ್ಲಿ ಕಾಣಬಹುದು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮನೆ ಅಥವಾ ಸೈಟ್ ಖರೀದಿಸಬೇಕು ಎನ್ನುವ ಆಸೆ ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತದೆ. ಬೆಂಗಳೂರಿನಂಥ ನಗರಗಳಲ್ಲಿ ಚಿರಾಸ್ತಿ ಹೊಂದುವುದು ಜೀವಮಾನದ ಸಾಧನೆ ಎಂಬಂತಾಗಿದೆ. ಥರಹೇವಾರಿ ಬಿಸಿನೆಸ್​ಗಳಿಗೆ ಪೋಷಕವಾಗಿರುವ ಬೆಂಗಳೂರು ನಗರದಲ್ಲಿ ಭೂಮಿ ಬೆಲೆ ರಾಕೆಟ್​ನಂತೆ ಮೇಲೇರುತ್ತಲೇ ಇದೆ. ಎಲ್ಲಾ ವರ್ಗದ ಜನರ ಆಸೆ, ಅಗತ್ಯಗಳಿಗೆ ತಕ್ಕಂತೆ ಮನೆ, ನಿವೇಶನಗಳು ಲಭ್ಯ ಇವೆ. ಆದರೆ, ಅವುಗಳನ್ನು ಹುಡುಕಲು ಸಂಯಮ ಬೇಕು. ಅಷ್ಟು ವ್ಯವಧಾನ, ಸಮಯ ಇರುವವರ ಸಂಖ್ಯೆ ಕಡಿಮೆ. ಹೀಗಾಗಿ, ದುರಾಸೆಯ ಬ್ರೋಕರ್​ಗಳ ಜಾಲಕ್ಕೆ ಬೀಳುವುವರೇ ಹೆಚ್ಚು. ಇಂಥವರಿಗೆ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್​ಪೋ ಉತ್ತಮ ಮಾರ್ಗೋಪಾಯ ನೀಡಿದೆ. ನಗರದ ಪ್ರಮುಖ ಲ್ಯಾಂಡ್ ಡೆವಲಪರ್​ಗಳು ಈ ಎಕ್ಸ್​ಪೋದಲ್ಲಿ (TV9 Property Expo) ಒಂದೆಡೆ ಲಭ್ಯ ಇರುತ್ತಾರೆ. ಇವರ ವಿವಿಧ ರೆಸಿಡೆನ್ಷಿಯಲ್ ಮತ್ತು ಕಮರ್ಷಿಯಲ್ ಪ್ರಾಪರ್ಟಿಗಳ ಬಗ್ಗೆ ಒಂದೇ ವೇದಿಕೆಯಲ್ಲಿ ಮಾಹಿತಿ ಪಡೆಯಬಹುದು.

ವಿಡಿಯೋ ಸಹಿತ ಇದನ್ನೂ ಓದಿ : ಸಿಗಂದೂರು ಬಳಿ ದುರಂತ; ಈಶ್ವರ ಮಲ್ಪೆ ಕಾರ್ಯಾಚರಣೆ

ಕಳೆದ ವರ್ಷ (2023ರ ಸೆಪ್ಟೆಂಬರ್) ನಡೆದ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್​ಪೋಗೆ ಬೆಂಗಳೂರಿಗರು ಭರ್ಜರಿ ಸ್ಪಂದನೆ ನೀಡಿದ್ದರು. 20,000ಕ್ಕೂ ಹೆಚ್ಚು ಜನರು ಎಕ್ಸ್​ಪೋಗೆ ಬಂದು ಹೋಗಿದ್ದರು. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಅದೊಂದು ಹೊಸ ಮೈಲಿಗಲ್ಲಿನಂತಾಗಿತ್ತು. ಈ ವರ್ಷದ ಎಕ್ಸ್​ಪೋ ಬೆಂಗಳೂರಿನ ನಾಯಂಡಹಳ್ಳಿಯಲ್ಲಿ ನವೆಂಬರ್ 15, 16 ಮತ್ತು 17ರಂದು ನಡೆಯಲಿದೆ.

ಇದನ್ನೂ ಓದಿ :  ಬೆಳಗಾವಿಯಿಂದ ಸಾಗಿಸಲಾಗುತ್ತಿದ್ದ ಜಾನುವಾರು ರಕ್ಷಣೆ

ವಿವಿಧ ಬೆಲೆಸ್ತರಗಳಲ್ಲಿ ಲಕ್ಷುರಿ ವಿಲ್ಲಾ, ಪ್ಲಾಟ್, ಅಪಾರ್ಟ್​ಮೆಂಟ್, ಫಾರ್ಮ್​ಲ್ಯಾಂಡ್​ಗಳನ್ನು ಒಂದೇ ಸ್ಥಳದಲ್ಲಿ ಮಾಹಿತಿ ಪಡೆದು ಅವಲೋಕಿಸಬಹುದು. ಉದ್ಯಮದ ತಜ್ಞರು, ಪ್ರಾಪರ್ಟಿ ಕನ್ಸಲ್ಟೆಂಟ್, ಲೀಗಲ್ ಅಡ್ವೈಸರ್​ಗಳೆಲ್ಲರೂ ಸ್ಥಳದಲ್ಲಿ ನೆರವಿಗೆ ಲಭ್ಯವಿರುತ್ತಾರೆ. ಎಕ್ಸ್​ಪೋದಲ್ಲಿ ನೀವು ಪ್ರಾಪರ್ಟಿ ಖರೀದಿಗೆ ನೊಂದಾಯಿಸಿದರೆ ವಿಶೇಷ ರಿಯಾಯಿತಿ, ಆಕರ್ಷಕ ಪಾವತಿ ಅವಕಾಶ ಮತ್ತಿತರ ಎಕ್ಸ್​ಕ್ಲೂಸಿವ್ ಆಫರ್​ಗಳನ್ನು ಪಡೆಯಬಹುದು.

ಇದನ್ನೂ ಓದಿ :   ಬಾವಿಯಲ್ಲಿ ಯುವಕನ ಶವ ಪತ್ತೆ

ಇತರ ಹೂಡಿಕೆದಾರರೊಂದಿಗೆ ಮಾತನಾಡಬಹುದು, ವೃತ್ತಿಪರರೊಂದಿಗೆ ಸಮಾಲೋಚಿಸಬಹುದು. ಹೀಗೆ ನಾನಾ ಅವಕಾಶಗಳುಂಟು.
ಟಿವಿ9 ಕನ್ನಡ ಸ್ವೀಟ್ ಹೋಮ್ ಕಳೆದ 10ಕ್ಕೂ ಹೆಚ್ಚು ವರ್ಷಗಳಿಂದ ಪ್ರಾಪರ್ಟಿ ಎಕ್ಸ್​ಪೋ ಆಯೋಜಿಸುತ್ತಾ ಬರುತ್ತಿದೆ. ವರ್ಷದಿಂದ ವರ್ಷಕ್ಕೆ ಎಕ್ಸ್​ಪೋದ ವಿಶ್ವಾಸಾರ್ಹತೆ, ಉಪಯುಕ್ತತೆ, ವ್ಯಾಪ್ತಿ ಹೆಚ್ಚುತ್ತಾ ಬಂದಿದೆ. ನಿಮಗೆ ಪ್ರಾಪರ್ಟಿ ಖರೀದಿಸುವ ಇರಾದೆ ಇದ್ದಲ್ಲಿ ಈ ವರ್ಷದ ಎಕ್ಸ್​ಪೋ ಖಂಡಿತ ತಪ್ಪಿಸಿಕೊಳ್ಳಬೇಡಿ ಎಂದು ಸಂಘಟಕರು ತಿಳಿಸಿದ್ದಾರೆ.

ಇದನ್ನೂ ಓದಿ :  ಅಂತಿಮ ಪಂದ್ಯದಲ್ಲಿ ಎಸ್‌.ಎಸ್‌.ಎಸ್‌. ಸ್ಪೋರ್ಟ್ಸ್‌ಗೆ ಸೋಲು