ಭಟ್ಕಳ: ತಾಲೂಕಿನ ಶಿರಾಲಿ ಪ್ರದೇಶದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಗ್ರಾಮೀಣ ಠಾಣೆ ಪೊಲೀಸರು ಪ್ರತ್ಯೇಕ ದಾಳಿಗಳಲ್ಲಿ ಬಂಧಿಸಿದ್ದಾರೆ (Two arrested).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮೊದಲ ಪ್ರಕರಣದಲ್ಲಿ, ಶಿರಾಲಿ ಶ್ರೀ ಕೃಷ್ಣಾ ಪ್ರಸಾದ ಹೋಟೆಲ್ ಎದುರು ಪರವಾನಗಿ ಪಡೆಯದೇ ಮದ್ಯ ಮಾರಾಟ ಮಾಡುತ್ತಿದ್ದ ವೆಂಕಟಾಪುರದ ವಿನಾಯಕ ಮಂಜುನಾಥ ದೇವಡಿಗರನ್ನು ಪಿಎಸೈ ಭರಮಪ್ಪ ಬೆಳಗಲಿ ಅವರ ನೇತೃತ್ವದ ತಂಡ ಬಂಧಿಸಿತು. ಸ್ಥಳದಿಂದ ಸಾರಾಯಿ ಬಾಟಲಿ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: absconding accused/ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಮತ್ತೊಂದು ಪ್ರಕರಣದಲ್ಲಿ, ಶಿರಾಲಿ ಶ್ರೀ ನ್ಯೂ ಕುಬೇರ ಹೋಟೆಲ್ ಎದುರು ಮದ್ಯ ಮಾರಾಟ ಮಾಡುತ್ತಿದ್ದ ಶಿರಾಲಿ ಬಪ್ಪುಂಡದ ರಾಜೇಶ ನಾರಾಯಣ ನಾಯ್ಕರನ್ನು ಸಿಪಿಐ ಮಂಜುನಾಥ ಲಿಂಗಾರೆಡ್ಡಿ ಅವರ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ದಾಳಿ ವೇಳೆ ಸಾರಾಯಿ ಬಾಟಲ್ ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಎರಡು ಪ್ರಕರಣಗಳ ಸಂಬಂಧ ಇಬ್ಬರು ಬಂಧಿತರಾಗಿ (Two arrested) ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (case filed). ಮುಂದಿನ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: Ganja seized/ ಭಟ್ಕಳದಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ ಗಾಂಜಾ ವಶ