ಭಟ್ಕಳ: ಬೈಕಿಗೆ ಡಿಗ್ಗರ್ ಟ್ರ್ಯಾಕ್ಟರ್ ಡಿಕ್ಕಿಯಾಗಿ ಬೈಕ್ ಸವಾರ ಮತ್ತು ಹಿಂಬದಿ ಸವಾರ ಗಾಯಗೊಂಡ (bikers injured) ಘಟನೆ ಭಟ್ಕಳ (Bhatkal) ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಬೈಕ್ ಚಲಾಯಿಸುತ್ತಿದ್ದ ಭಟ್ಕಳ ತಾಲೂಕಿನ ಮೂಡ ಶಿರಾಲಿ ನಿವಾಸಿ ಮಂಜುನಾಥ ಬಾಲಚಂದ್ರ ಭಟ್ಟ ಮತ್ತು ಹಿಂಬದಿ ಸವಾರ ನಿಖಿಲ್ ಹೊನ್ನಪ್ಪ ನಾಯ್ಕ ಗಾಯಗೊಂಡವರು (bikers injured). ಡಿಗ್ಗರ್ ಟ್ರ್ಯಾಕರ್ ಚಾಲಕ ಧಾರವಾಡದ (Dharwad) ಕೊಡ್ಲಿವಾಡ ನಿವಾಸಿ ಬಸವರಾಜ ಮಹಾಂತೇಶ ಮೇಟಿ ವಿರುದ್ಧ ದೂರು ದಾಖಲಾಗಿದೆ. ಈ ಕುರಿತು ಮೂಡ ಶಿರಾಲಿಯ ನಾಗರಾಜ ಭೈರಪ್ಪ ನಾಯ್ಕ ದೂರು ದಾಖಲಿಸಿದ್ದಾರೆ.
ಇದನ್ನು ಓದಿ: Murudeshwar/ ಮುರುಡೇಶ್ವರದಲ್ಲಿ ಸಮುದ್ರ ಪಾಲಾಗುತ್ತಿದ್ದಾಗ ರಕ್ಷಿಸಿದ್ದ ಯುವಕ ಆತ್ಮಹತ್ಯೆ
ದಿನಾಂಕ ೪-೧-೨೦೨೬ರಂದು ಮಧ್ಯಾಹ್ನ ೧-೨೦ ಗಂಟೆಗೆ ವೆಂಕಟಾಪುರ ಲಕ್ಷ್ಮಿ ವೆಂಕಟರಮಣ ದೇವಸ್ಥಾನದಿಂದ ರಾಷ್ಟ್ರೀಯ ಹೆದ್ದಾರಿ (National Highway) ೬೬ನೇದರ ವೆಂಕಟಾಪುರ ಹಳೆಯ ಬ್ರಿಡ್ಜ ಬಳಿ ಬರುತ್ತಿರುವಾಗ ವೆಂಕ್ಟಾಪುರ ನದಿ ದಂಡೆಯ ಕುಕ್ನೀರ ರಸ್ತೆಯಿಂದ ಅತಿ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಒಮ್ಮೆಲೇ ಮುಖ್ಯ ರಸ್ತೆಗೆ ಬಂದ ಡಿಗ್ಗರ್ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದೆ.
ಇದನ್ನು ಓದಿ: poetry competition/ ಅಂತಾರಾಷ್ಟ್ರೀಯ ಮಟ್ಟದ ಕವನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ
ಮೋಟಾರ್ ಸೈಕಲ್ ಸವಾರ ಹಾಗೂ ಹಿಂಬದಿಯಲ್ಲಿ ಕುಳಿತವನು ರಸ್ತೆಯ ಮೇಲೆ ಬಿದ್ದಿದ್ದರಿಂದ ಮಂಜುನಾಥ ಬಾಲಚಂದ್ರ ಭಟ್ಟ ಇವರ ಹೊಟ್ಟೆಗೆ, ಬಲಕಾಲಿಗೆ ಹಾಗೂ ಎಡ ಕೈಗೆ ಸಾದಾ ಗಾಯವುಂಟಾಗಿದ್ದು, ಹಿಂಬದಿ ಸವಾರ ನಿಖಿಲ್ ನಾಯ್ಕಗೆ ತರಚಿದ ಗಾಯ ಉಂಟಾಗಿದೆ.
ಇದನ್ನು ಓದಿ: Accident/ ಫೋರ್ಡ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಸ್ಕೋಡಾ ಕಾರು



