ಭಟ್ಕಳ (Bhatkal) : ಸಾರಾಯಿ ಕುಡಿತದ ಚಟಕ್ಕೆ (alcohol addiction) ಅಂಟಿಕೊಂಡ ಇಬ್ಬರು ಒಂದೇ ದಿನದಲ್ಲಿ ಮೃತಪಟ್ಟ ಘಟನೆ ಭಟ್ಕಳ ತಾಲೂಕಿನಲ್ಲಿ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಪಶ್ಚಿಮ ಬಂಗಾಳ (West Bengal) ಮೂಲದ ಸೌಮ್ಯಶ್ರೀಸೋಮ ನಿರ್ಮಲಚಂದ್ರ (೩೭) ಮತ್ತು ಶಿವಮೊಗ್ಗ (Shivamogga) ಜಿಲ್ಲೆಯ ಶಿಕಾರಿಪುರ (Shikaripura) ತಾಲೂಕಿನ ದೇವರಾಜ ಅರಸ ನಗರದ ಬಾಷಾ ಅಮಾನುಲ್ಲಾ (೪೦) ಮೃತರು. ಸಾರಾಯಿ ಚಟಕ್ಕೆ ಅಂಡಿಕೊಂಡಿದ್ದ (alcohol addiction) ಸೌಮ್ಯಶ್ರೀಸೋಮ ಅನಾರೋಗ್ಯದಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ. ಅಸ್ವಸ್ಥಗೊಂಡ ಆತನನ್ನು ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದ, ಚಿಕಿತ್ಸೆಗೆ ಸ್ಪಂದಿಸದೆ ಮೇ ೨೨ರಂದು ಬೆಳಿಗ್ಗೆ ೧೦.೩೦ರ ಸುಮಾರಿಗೆ ಮೃತಪಟ್ಟಿದ್ದಾನೆ. ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ (complaint) ದಾಖಲಾಗಿದೆ.
ಇದನ್ನೂ ಓದಿ : power outage/ ಮೇ ೨೪ರಂದು ವಿದ್ಯುತ್ ವ್ಯತ್ಯಯ
ಅದೇ ರೀತಿ, ಶಿಕಾರಿಪುರ ಮೂಲದ ಬಾಷಾ ಅಮಾನುಲ್ಲಾ ವೀಪರೀತ ಸಾರಾಯಿ ಕುಡಿಯುವ ಚಟ ಹೊಂದಿದ್ದ. ಭಟ್ಕಳದಲ್ಲಿ ಮಗಳ ಮನೆಯಲ್ಲಿ ಇದ್ದ ಈತ ಕಳೆದ ೬ ತಿಂಗಳ ಹಿಂದೆ ಅಸ್ವಸ್ಥನಾಗಿದ್ದಾಗ ಭಟ್ಕಳದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಚಿಕಿತ್ಸೆ ನೀಡಿದ ವೈದ್ಯರು, ಸಾರಾಯಿ ಕುಡಿಯಬಾರದು ಲಿವರ್ ಹಾಳಾಗಿದೆ ಎಂದಿದ್ದರು. ಆದರೂ ಪುನಃ ವಿಪರೀತ ಸಾರಾಯಿ ಕುಡಿದು ಅಂಗಡಿಗಳ ಮುಂದೆ ಮಲಗುತ್ತಿದ್ದ. ಮೇ ೨೨ರಂದು ಬೆಳಿಗ್ಗೆ ೭.೩೦ರ ನಡುವಿನ ಅವಧಿಯಲ್ಲಿ ಸಾರಾಯಿ ಕುಡಿದು ಅಣ್ಣಪ್ಪ ಅಂಗಡಿ ಮುಂದುಗಡೆ ಜಗುಲಿಯ ಮೇಲೆ ಮಲಗಿದ್ದಾಗ ರಕ್ತ ವಾಂತಿ ಮಾಡಿಕೊಂಡು ಮೃತಪಟ್ಟಿದ್ದಾನೆ. ಈ ಕುರಿತು ಭಟ್ಕಳ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ (case registered).
ಇದನ್ನೂ ಓದಿ : rain update/ ಭಟ್ಕಳದ ಬೆಳಕೆಯಲ್ಲಿ ದಾಖಲೆ ಮಳೆ !



