ಭಟ್ಕಳ (Bhatkal) : ರಾಷ್ಟ್ರೀಯ ಹೆದ್ದಾರಿಯಲ್ಲಿ (national highway) ಮೋಟಾರ್‌ ಸೈಕಲ್‌ ದಾಟಿಸುತ್ತಿದ್ದ ಯುವತಿ ಇನ್ನೊಂದು ಮೋಟಾರ್‌ ಸೈಕಲ್‌ಗೆ ಡಿಕ್ಕಿ ಹೊಡೆದು (motorcycle collision) ಇಬ್ಬರು ಗಾಯಗೊಂಡ ಘಟನೆ ಭಟ್ಕಳ ಗ್ರಾಮೀಣ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳದ ರಂಗಿನಕಟ್ಟೆಯ ರಾಜೇಶ ದುರ್ಗಪ್ಪ ನಾಯ್ಕ (೪೨) ಹನಿಫಾಬಾದ್‌ ನಿವಾಸಿ ಫರಿಯಾ ಮೊಹಿದ್ದೀನ್‌ ಫೈಸಲ್‌ ವಿರುದ್ಧ ದೂರು (complaint) ದಾಖಲಿಸಿದ್ದಾರೆ. ಮೇ ೧೩ರಂದು ಬೆಳಿಗ್ಗೆ ೯.೨೫ಕ್ಕೆ ಹನಿಫಾಬಾದ್‌ ಕ್ರಾಸ್‌ನಿಂದ ರಾಷ್ಟ್ರೀಯ ಹೆದ್ದಾರಿಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಮೋಟಾರ್‌ ಸೈಕಲ್‌ ಚಲಾಯಿಸಿಕೊಂಡು ಬಂದ ಫರಿಯಾ ಇನ್ನೊಂದು ಮೋಟಾರ್‌ ಸೈಕಲ್‌ಗೆ ಡಿಕ್ಕಿ ಹೊಡೆದಿದ್ದಾರೆ (motorcycle collision). ಭಟ್ಕಳ ಕಡೆಯಿಂದ ಮುರ್ಡೇಶ್ವರ (Murdeshwar) ಕಡೆಗೆ ಹೋಗುತ್ತಿದ್ದ ಮೋಟಾರ್‌ ಸೈಕಲ್‌ಗೆ ಡಿಕ್ಕಿ ಹೊಡೆದಿದ್ದರಿಂದ ಪಿರ್ಯಾದಿ ರಾಜೇಶ ನಾಯ್ಕ ಮತ್ತು ಮೋಟಾರ್‌ ಸೈಕಲ್‌ ಸವಾರ ಗಾಯಗೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : vishwakarma trophy/ ರಾಜು ಬಾಯ್ಸ್‌ ಮಡಿಲಿಗೆ ವಿಶ್ವಕರ್ಮ ಟ್ರೋಫಿ