ಭಟ್ಕಳ (Bhatkal): ಹಿಂದುಗಳ ಯುಗಾದಿ ಹಬ್ಬ (Ugadi celebration) ಮತ್ತು ಹೊಸ ವರ್ಷದ (New Year) ಆಚರಣೆ ಪ್ರಯುಕ್ತ ಭಟ್ಕಳ ಹಿಂದೂ ಜಾಗರಣ ವೇದಿಕೆಯ (HJV) ನೇತೃತ್ವದಲ್ಲಿ ಭಟ್ಕಳದಲ್ಲಿ ಪ್ರಪ್ರಥಮ ಬಾರಿಗೆ ದಂಪತಿಗಳಿಗೆ ಅರಿಶಿನ ಕುಂಕುಮ ಹಾಗೂ ಬೇವು ಬೆಲ್ಲ ಹಂಚುವ ವಿಶೇಷ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಭಟ್ಕಳದ ಸಮಸ್ತ ಹಿಂದೂ ಸಮಾಜ ಬಾಂಧವರ ಸಹಯೋಗದೊಂದಿಗೆ ಮಾರ್ಚ ೩೦ರಂದು ಭಟ್ಕಳದ ಮುಗುಳಿಕೋಣೆ ಶ್ರೀ ಗೋಪಾಲಕೃಷ್ಣ ಸಭಾಭವನದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಹಿಂದೂ ಜಾಗರಣ ವೇದಿಕೆ ಸಹ ಸಂಚಾಲಕ ನಾಗೇಶ ನಾಯ್ಕ ಹೇಳಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅವರು ಇಲ್ಲಿನ ಬಂದರ ರಸ್ತೆಯ ನಾಗಮಾಸ್ತಿ ದೇವಸ್ಥಾನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಮಾಹಿತಿ ನೀಡಿದರು. ರವಿವಾರ ಸಂಜೆ ೪ ಗಂಟೆಯಿಂದ ೬ ಗಂಟೆಯ ತನಕ ಈ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರ್ಬನ್ ಬ್ಯಾಂಕ್ ನಿವೃತ್ತ ಪ್ರಧಾನ ವ್ಯವಸ್ಥಾಪಕ ಸುಭಾಷ್ ಶೆಟ್ಟಿ ವಹಿಸಲಿದ್ದಾರೆ. ಧಾರ್ಮಿಕ ಉಪನ್ಯಾಸವನ್ನು ಸಂವೇದನಾ ಫೌಂಡೇಶನ್ ಸಂಸ್ಥಾಪಕ, ಲೇಖಕ ಮತ್ತು ಅಂಕಣಕಾರ ಪ್ರಕಾಶ ಮಲ್ಪೆ ನೀಡಲಿದ್ದಾರೆ ಎಂದು ನಾಗೇಶ ನಾಯ್ಕ ಹೇಳಿದರು.
ಇದನ್ನೂ ಓದಿ : World Theatre Day/ ಭಟ್ಕಳದಲ್ಲಿ ಹಿರಿಯ ಕಲಾವಿದನಿಗೆ ಸನ್ಮಾನ
ಹಿಂ.ಜಾ.ವೇ. ಜಿಲ್ಲಾ ಪ್ರಮುಖ ದಿನೇಶ ನಾಯ್ಕ ಮಾತನಾಡಿ, ನಾವೆಲ್ಲ ಹೊಸ ವರ್ಷದ ಆಚರಣೆಯನ್ನು ಜನವರಿಯಲ್ಲಿ ಆಚರಣೆ ಮಾಡುವ ಬದಲು ಯುಗಾದಿಗೆ ಆಚರಣೆ (Ugadi celebration) ಮಾಡಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ. ವಿಶೇಷವಾಗಿ ಮಹಿಳೆಯರು ಹಾಗೂ ದಂಪತಿಗಳನ್ನು ಸೇರಿಸಬೇಕು ಎಂಬ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಿದ್ದೇವೆ. ಭಟ್ಕಳ ತಾಲೂಕಿನ ಗಡಿ ಭಾಗವಾದ ಗೊರಟೆಯಿಂದ ಬೈಲೂರಿನ ತನಕ ಎಲ್ಲರನ್ನೂ ಸಂಪರ್ಕ ಮಾಡಿದ್ದೇವೆ ಎಂದರು. ಹಿಂಜಾವೇ ಸಹ ಸಂಚಾಲಕರಾದ ಕುಮಾರ ನಾಯ್ಕ, ರಾಘವೇಂದ್ರ ನಾಯ್ಕ, ಜಿಲ್ಲಾ ಪ್ರಮುಖ ಈಶ್ವರ ಇದ್ದರು. ಶ್ರೀನಿವಾಸ ಹನುಮಾನನಗರ ಸ್ವಾಗತಿಸಿದರು.
ಇದನ್ನೂ ಓದಿ : falling from train/ ರೈಲಿನಿಂದ ಬಿದ್ದ ಯುವಕ ೧೫ ಗಂಟೆಗಳ ನಂತರ ಪತ್ತೆ