ಭಟ್ಕಳ (Bhatkal) : ಹಿಂದುಗಳ ಯುಗಾದಿ ಹಬ್ಬ (Ugadi Festival) ಹೊಸ ವರ್ಷದ ಆಚರಣೆ ಪ್ರಯುಕ್ತ ಭಟ್ಕಳ ಹಿಂದೂ ಜಾಗರಣ ವೇದಿಕೆಯ ನೇತೃತ್ವದಲ್ಲಿ ಭಟ್ಕಳದಲ್ಲಿ ಪ್ರಪ್ರಥಮ ಬಾರಿಗೆ ದಂಪತಿಗಳಿಗೆ ಅರಿಶಿನ ಕುಂಕುಮ ಹಾಗೂ ಬೇವು ಬೆಲ್ಲ ಹಂಚುವ ವಿಶೇಷ ಧಾರ್ಮಿಕ ಕಾರ್ಯಕ್ರಮ ಭಟ್ಕಳದ ಮುಗುಳಿಕೋಣೆ ಶ್ರೀ ಗೋಪಾಲಕೃಷ್ಣ ಸಭಾಭವನದಲ್ಲಿ ಯಶಸ್ವಿಯಾಗಿ ನಡೆಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕಾರ್ಯಕ್ರಮದ ಧಾರ್ಮಿಕ ಉಪನ್ಯಾಸವನ್ನು ಸಂವೇದನಾ ಫೌಂಡೇಶನ್ ಸಂಸ್ಥಾಪಕ, ಲೇಖಕ ಮತ್ತು ಅಂಕಣಕಾರ ಪ್ರಕಾಶ ಮಲ್ಪೆ ನೀಡಿದರು. ಯುಗಾದಿಯಂದು ಹೊಸತನವು ಪರಿಸರದಲ್ಲಿ ಕಂಡು ಬರುತ್ತದೆ. ವಿಶೇಷವಾಗಿ ನಾವು ಯುಗಾದಿಯನ್ನು ನಮ್ಮ ಹೊಸ ವರ್ಷ ಎನ್ನುವುದು ಪುನರ್ರುಚ್ಚರಿಸಬೇಕಾದ ಅವಶ್ಯಕತೆ ಇಲ್ಲ. ಯುಗಾದಿಯೇ ನಮ್ಮ ಹೊಸ ವರ್ಷ ಎಂದು ಗೊತ್ತಿರುವ ಕೆಲವರು ತಮ್ಮ ಪ್ರತಿಷ್ಠೆಗೆ ಜನವರಿಗೆ ಆಚರಣೆ ಮಾಡುತ್ತಾರೆ. ಆದರೆ ಅಧಿಕ ಜನರು ಯುಗಾದಿಗೆ ಹೊಸ ವರ್ಷದ ಆಚರಣೆ ಮಾಡುತ್ತಾರೆ (Ugadi Festival). ಹೊಸತು ಬಂದಾಗ ಅದನ್ನು ಸ್ವೀಕಾರ ಮಾಡಬೇಕು ಎಂದರು.

ಇದನ್ನೂ ಓದಿ : Jewellery Seized/ ಆಭರಣ ಅಂಗಡಿಯಲ್ಲಿ ಒತ್ತೆ ಇಟ್ಟಿದ್ದ ಆಭರಣ ಜಪ್ತಿ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅರ್ಬನ್ ಬ್ಯಾಂಕ್ ನಿವೃತ್ತ ಪ್ರಧಾನ ವ್ಯವಸ್ಥಾಪಕ ಸುಭಾಷ್‌ ಶೆಟ್ಟಿ ಮಾತನಾಡಿದರು. ನಂತರ ವಿನಾಯಕ ಭಟ್ ಅವರು ಪಂಚಾಂಗ ಶ್ರಾವಣ ಪಠಣ ಮಾಡಿದರು. ಕಾರ್ಯಕ್ರಮಕ್ಕೆ ಬಂದ ದಂಪತಿಗಳಿಗೆ ಅರಿಶಿನ ಕುಂಕುಮ ಹಾಗೂ ಬೇವು ಬೆಲ್ಲ ಹಂಚಲಾಯಿತು.

ಇದನ್ನೂ ಓದಿ : Ramadan Market/ ಭಟ್ಕಳದಲ್ಲಿ ರಂಜಾನ್‌ ಮಾರುಕಟ್ಟೆ ವೀಕ್ಷಣೆ