ಭಟ್ಕಳ (Bhatkal): ಪುರಸಭಾ ವಾರ್ಡ್ ನಂಬರ್ ೨೦ ಮತ್ತು ೨೧ ರಲ್ಲಿ ಒಳಚರಂಡಿ ಮ್ಯಾನ್ ಹೋಲ್ ನಿರ್ಮಾಣದಲ್ಲಿ (UGD work) ಕಳಪೆ ದರ್ಜೆಯ ಸಾಮಗ್ರಿ ಅಳವಡಿಸಲಾಗಿದೆ. ಇದರಿಂದ ಕುಡಿಯುವ ನೀರಿನ (drinking water) ಬಾವಿ ಹಾಳಾಗುತ್ತಿದೆ ಎಂದು ಪುರಸಭಾ ಸದಸ್ಯರು ಆರೋಪಿಸಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ವಾರ್ಡ್ ನಂಬರ್ ೨೦ ಮತ್ತು ೨೧ರ ಶಾಜಲಿ ಸ್ಟ್ರೀಟ್, ಶೌಕತ್ ಆಲಿ ರಸ್ತೆ, ತಕೀಯಾ ಸ್ಟ್ರೀಟ್, ಫಾರುಕಿ ಸ್ಟ್ರೀಟ್‌ನಲ್ಲಿ ಈ ಹಿಂದಿನಿಂದಲೂ ಕುಡಿಯುವ ನೀರಿನ ತೆರೆದ ಬಾವಿಗಳಿವೆ. ಇದರ ನೀರನ್ನು ನಾಗರಿಕರು ಬಳಕೆ ಮಾಡುತ್ತಿದ್ದಾರೆ. ಇತ್ತೀಚೆಗೆ ಈ ಪ್ರದೇಶದಲ್ಲಿ ಹಳೆಯ ಇಟ್ಟಿಗೆ ಮ್ಯಾನ್ ಹೋಲ್‌ಗಳನ್ನು ಬದಲಿಸಿ ಹೊಸ ಆರ್.ಸಿ.ಸಿ ಮ್ಯಾನ್ ಹೋಲ್ ಆಳವಡಿಸಿದ್ದಾರೆ. ಈ ಮ್ಯಾನ್ ಹೋಲ್‌ಗಳು ತಾಂತ್ರಿಕವಾಗಿ ಸಮರ್ಪಕವಾಗಿ ನಿರ್ಮಾಣವಾಗಿಲ್ಲ. ಪದೇ ಪದೇ ಬ್ಲಾಕ್ ಆಗುತ್ತಿರುವುದರಿಂದ ಕಸಗಳು ಒಂದೆಡೆ ಶೇಖರಣೆಯಾಗಿ ಅಕ್ಕಪಕ್ಕದ ಕುಡಿಯುವ ನೀರಿನ ಬಾವಿಗಳಿಗೆ ಸೇರಿಕೊಳ್ಳುತ್ತಿವೆ. ಇದರಿಂದ ಭಯಾನಕ ರೋಗ ಹರಡುವ ಲಕ್ಷಣಗಳು ಗೋಚರಿಸುತ್ತಿವೆ. ಇಲ್ಲಿಯ ನಿವಾಸಿಗಳು ಕಲುಷಿತ ನೀರನ್ನು ಬಳಸುವ ಅನಿವಾರ್ಯತೆ ಎದುರಾಗಿದೆ ಎಂದು ಪುರಸಭಾ ಸದಸ್ಯರಾದ ವಾರ್ಡ ನಂ. ೨೦ರ ಫಯಾಜ್ ಮುಲ್ಲಾ ಮತ್ತು ವಾರ್ಡ ನಂ. ೨೧ರ ಫಾತಿಮಾ ಕೌಸರ್ ಚಾಮುಂಡಿ ಆರೋಪಿಸಿದ್ದಾರೆ.

ವಿಡಿಯೋ ಸಹಿತ ಇದನ್ನೂ ಓದಿ :  ಗುತ್ತಿಗೆದಾರನ ವಿರುದ್ಧ ಕ್ರಮಕ್ಕೆ ನಾಗರಿಕರ ಆಗ್ರಹ

ಈ ಬಗ್ಗೆ ನಾವು ಹಲವು ಬಾರಿ ಪುರಸಭಾ ಮುಖ್ಯಾಧಿಕಾರಿ, ಸಹಾಯಕ ಆಯುಕ್ತೆ, ಜಿಲ್ಲಾಧಿಕಾರಿ (District commissioner) ಹಾಗೂ ಯೋಜನಾ ಕಾಮಗಾರಿಯನ್ನು ನಡೆಸುತ್ತಿರುವ ಕೊಳಚೆ ನಿರ್ಮೂಲನೆ ಮಂಡಳಿಯ ಗುತ್ತಿಗೆದಾರರಿಗೂ ಇಂಜಿನಿಯರಿಗೂ ತಿಳಿಸಲಾಗಿದೆ. ಈ ರೀತಿ ಅವ್ಯವಸ್ಥೆ ಇರುವುದರಿಂದ ಹಾಗೂ ಮೂಲ ಸೌಕರ್ಯದ ಕೊರತೆಯಿಂದಾಗಿ ನಾಗರಿಕರು ಮನೆಬಿಟ್ಟು ಸ್ಥಳಾಂತರಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪುರಸಭಾ ಸದಸ್ಯರು ತಿಳಿಸಿದ್ದಾರೆ.

ಇದನ್ನೂ ಓದಿ : ಚಕ್ರ ಎಸೆತದಲ್ಲಿ ದೇಶಕ್ಕೆ ತೃತೀಯ ಸ್ಥಾನ

ಈ ಮ್ಯಾನ್ ಹೋಲ್‌ಗಳ ನವೀಕರಣ ಕೆಲಸವು ಸರಿಯಾಗಿ ನಡೆದಿಲ್ಲ. ಅವೈಜಾನಿಕವಾಗಿ ಪೈಪ್ ಲೈನ್ ಆಳವಡಿಸಿರುವುದರಿಂದ ಈ ಸಮಸ್ಯೆ ಉದ್ಭವಿಸಿದೆ. ಕುಡಿಯುವ ನೀರಿನ ಬಾವಿಗಳು ಕಲುಷಿತಗೊಳ್ಳುತ್ತಿರುವುದನ್ನು ನಿಲ್ಲಿಸಲು ಈ ಮ್ಯಾನ್‌ಹೋಲ್‌ಗಳನ್ನು ತೆಗೆದು ಪುನಃ ಸರಿಯಾದ ರೀತಿಯಲ್ಲಿ ಅಳವಡಿಸಲು ಹೊಸದಾಗಿ ಮ್ಯಾನ್‌ ಹೋಲ್ (ಚೆಂಬರ್) ಮತ್ತು ಪೈಪ್ ಲೈನ್ (UGD work) ತ್ವರಿತಗತಿಯಲ್ಲಿ ಅಳವಡಿಸಬೇಕು ಎಂದು ಪುರಸಭಾ ಸದಸ್ಯರಾದ ಫಯಾಜ್ ಮುಲ್ಲಾ ಮತ್ತು ಫಾತಿಮಾ ಚಾಮುಂಡಿ KUWSDB ಅಧ್ಯಕ್ಷ ವಿನಯ ಕುಲಕರ್ಣಿಯವರಿಗೆ ಜಂಟಿಯಾಗಿ ಕಳುಹಿಸಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ಸತತ ೨ನೇ ಬಾರಿ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಟ್ಕಳ ತಾಲೂಕಿಗೆ ಸಮಗ್ರ ವೀರಾಗ್ರಣಿ