ಹುಬ್ಬಳ್ಳಿ (Hubballi) : ಸುಸ್ಥಿರ ಅಭಿವೃದ್ಧಿ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತದ ಸಹಕಾರ ಬಲಪಡಿಸಲೆಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ (Pralhad Joshi) ಮೂರು ದಿನ ಜರ್ಮನಿ (Germany) ಪ್ರವಾಸ ಕೈಗೊಂಡಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಇಂದು ದೆಹಲಿಯಿಂದ (Delhi) ಜರ್ಮನಿಗೆ ಪ್ರಯಾಣ ಬೆಳಸಲಿರುವ ಸಚಿವರು, ಅ. ೭ ಮತ್ತು ೮ ರಂದು ಜರ್ಮನಿಯ ಹ್ಯಾಂಬರ್ಗ್ ಸಸ್ಟೈನಬಿಲಿಟಿ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಲಿದ್ದಾರೆ. ಈ ಸಮ್ಮೇಳನದಲ್ಲಿ ಹಸಿರು ಇಂಧನ ಕ್ಷೇತ್ರದಲ್ಲಿನ ಪ್ರಮುಖ ಉದ್ಯಮಿಗಳು ಕೂಡ ಭಾಗವಹಿಸಲಿದ್ದಾರೆ ಎಂದು ಸಚಿವ ಪ್ರಲ್ಹಾದ ಜೋಶಿ (Pralhad Joshi) ತಿಳಿಸಿದ್ದಾರೆ.

ಇದನ್ನೂ ಓದಿ : Bhat N Bhat ಖ್ಯಾತಿಯ ಸುದರ್ಶನ ಭಟ್ ಈಗ ಸಂಸಾರಿ

ಹ್ಯಾಂಬರ್ಗ್ (Hamburg) ಸಮ್ಮೇಳನದಲ್ಲಿ ಹಸಿರು ಶಿಪ್ಪಿಂಗ್ ಮತ್ತು ಚಲನಶೀಲ ವಲಯವನ್ನು ಡಿಕಾರ್ಬನೈಸ್ ಮಾಡುವಲ್ಲಿ ಹಸಿರು ಹೈಡ್ರೋಜನ್ ಪಾತ್ರದ ಬಗ್ಗೆ ಭಾರತದ ಸ್ಥಾನವನ್ನು ಪ್ರತಿಪಾದಿಸುತ್ತೇನೆ. ನವೀಕರಿಸಬಹುದಾದ ಇಂಧನ ಮತ್ತು ಸುಸ್ಥಿರ ಅಭಿವೃದ್ಧಿ ಕ್ಷೇತ್ರಗಳಲ್ಲಿ ಭಾರತದ ಅಂತರಾಷ್ಟ್ರೀಯ ಸಹಯೋಗವನ್ನು ಬಲಪಡಿಸುವ ಗುರಿ ಹೊಂದಿದ್ದು, ಜರ್ಮನಿ ಪ್ರವಾಸದಿಂದ ಇದು ಸಾಕಾರಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ :  ಬಚ್ಚಲು ಕೋಣೆಯಲ್ಲಿ ನೇಣು ಬಿಗಿದುಕೊಂಡ ಕೃಷಿಕ

ದ್ವಿಪಕ್ಷೀಯ ಸಭೆ:
ಸುಸ್ಥಿರ ಅಭಿವೃದ್ಧಿ, ಹಸಿರು ಹೈಡ್ರೋಜನ್, ಆರ್ಥಿಕ ನೆರವು ಹೆಚ್ಚಳಕ್ಕೆ ಅಗತ್ಯ ಸಹಕಾರ ಕುರಿತಂತೆ ಜರ್ಮನಿ, ಯುನೈಟೆಡ್ ಕಿಂಗ್‌ಡಮ್ ಮತ್ತು ಇತರ ರಾಷ್ಟ್ರಗಳ ಹಿರಿಯ ಅಧಿಕಾರಿಗಳೊಂದಿಗೆ ದ್ವಿಪಕ್ಷೀಯ ಸಭೆ ನಡೆಯಲಿದೆ. ಈ ಪ್ರವಾಸದಿಂದ ಭಾರತ ಮತ್ತು ಜರ್ಮನಿ ಸಂಬಂಧ ಮತ್ತಷ್ಟು ವೃದ್ಧಿಸಲಿದೆ. ಅಲ್ಲದೇ, ವಿಶ್ವದಾದ್ಯಂತ ನವೀಕರಿಸಬಹುದಾದ ಶಕ್ತಿಯ ವಿಸ್ತರಣೆಯನ್ನು ವೇಗಗೊಳಿಸಲು ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಮನೆಯ ಹಂಚು ತೆಗೆದು ಒಳನುಗ್ಗಿದ ಕಳ್ಳರು

ಪ್ರಧಾನಮಂತ್ರಿ ನರೇಂದ್ರ ಮೋದಿ (Narendramodi) ಅವರು ಭಾರತ-ಜರ್ಮನಿ ದ್ವಿಪಕ್ಷೀಯ ಸಂಬಂಧಗಳಿಗೆ ವಿಶೇಷ ಒತ್ತು ನೀಡಿದ್ದಾರೆ. ಭಾರತ ಮತ್ತು ಜರ್ಮನಿಯ ನಾಯಕರ ನಡುವಿನ ಅಂತರ ಹಾಗೂ ಸರ್ಕಾರದ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸಲಾಗುವುದು. ಗುಜರಾತಿನಲ್ಲಿ ನಡೆದ RE-INVEST 2024 ಸಮ್ಮೇಳನವು ಎರಡೂ ದೇಶಗಳು ನವೀಕರಿಸಬಹುದಾದ ಶಕ್ತಿಗಳಲ್ಲಿ ಹೂಡಿಕೆಗಾಗಿ ವೇದಿಕೆ ಕಲ್ಪಿಸಿತ್ತು ಎಂದಿದ್ದಾರೆ ಸಚಿವ ಪ್ರಲ್ಹಾದ ಜೋಶಿ.

ಇದನ್ನೂ ಓದಿ : Navaratri Utsav/ ಮೊದಲ ದಿನವೇ ೧.೩೪ ಲಕ್ಷಕ್ಕೂ ಹೆಚ್ಚು ಭಕ್ತರು