ಭಟ್ಕಳ(Bhatkal) : ಇಲ್ಲಿನ ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಮತ್ತು ಕಂಪ್ಯೂಟರ್ ಅಪ್ಲಿಕೇಶನ್ (AIMCA) ಕಾಲೇಜಿನ ವಿದ್ಯಾರ್ಥಿನಿ ನಜಾದಾ ಇಕ್ಕೇರಿ ಅವರು ಧಾರವಾಡ ವಿಶ್ವವಿದ್ಯಾಲಯ ನಡೆಸಿದ ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ (BCA) ಪರೀಕ್ಷೆಯಲ್ಲಿ ಪ್ರಥಮ ಸ್ಥಾನ (University Rank) ಗಳಿಸಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಪರೀಕ್ಷೆಯು ಆಗಸ್ಟ್ – ಸೆಪ್ಟೆಂಬರ್ ೨೦೨೩ ರಲ್ಲಿ ನಡೆದಿತ್ತು.‌ ನಜಾದಾ ಅವರು ೩೪೨೧/೩೭೦೦ ​​ಅಂಕಗಳನ್ನು (೯೨.೪೬%) ಪಡೆದು ವಿಶ್ವವಿದ್ಯಾಲಯಕ್ಕೆ ಪ್ರಥಮ‌ (university rank) ಬಂದಿದ್ದಾರೆ. ಎಐಎಂಸಿಎ (AIMCA)ಗೆ ಇದು ಪ್ರತಿಷ್ಠಿತ ಕ್ಷಣವಾಗಿದ್ದು, ಇದರೊಂದಿಗೆ ಕಾಲೇಜು ಒಟ್ಟು ೧೨ ರ‌್ಯಾಂಕ್ ವಿದ್ಯಾರ್ಥಿಗಳನ್ನು (rank student) ಪಡೆದುಕೊಂಡಂತಾಗಿದೆ.

ಇದನ್ನೂ ಓದಿ :  ನೇಣು ಬಿಗಿದುಕೊಂಡ ಮದ್ಯವ್ಯಸನಿ ಯುವಕ

ಮುಬೀನ್ ಅಹ್ಮದ್ ಇಕ್ಕೇರಿ ಮತ್ತು ನುಸ್ರತ್ ಜಹಾನ್ ದಂಪತಿಯ ಪುತ್ರಿ ನಜಾದಾ ಅದೇ ಸಮಯದಲ್ಲಿ ಕುರಾನ್ ಕಂಠಪಾಠ ಮಾಡಿ ಗಮನ ಸೆಳೆದಿದ್ದಾರೆ. ಕಾಲೇಜಿನಲ್ಲಿ ತನ್ನ ಮೂರು ವರ್ಷಗಳ ಬಿಸಿಎ ಯಲ್ಲಿ ಸಂಪೂರ್ಣ ಕುರಾನ್ (Qur’an) ಯಶಸ್ವಿಯಾಗಿ ಕಂಠಪಾಠ ಮಾಡಿದ್ದಾರೆ.

ಇದನ್ನೂ ಓದಿ : ಓಸಿ, ಮಟಕಾ ಜೂಜಾಟ ನಡೆಸುತ್ತಿದ್ದ ವ್ಯಕ್ತಿ ಬಂಧನ