ಗೋಕರ್ಣ(gokarna): ಅಶೋಕೆಯಲ್ಲಿ ನಡೆಯುತ್ತಿರುವ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ (raghaveshwara Shred) ಅನಾವರಣ ಚಾತುರ್ಮಾಸ್ಯದ (Chathurmasya) ೨೬ನೇ ದಿನವಾದ ಗುರುವಾರ ಸ್ವಾತಂತ್ರ್ಯ ದಿನಾಚರಣೆ (independence day) ಅಂಗವಾಗಿ ಸಿದ್ಧಾಪುರದ ಸ್ವಾತಂತ್ರ್ಯಯೋಧರ (freedom fighters) ವೀರಗಾಥೆಗಳ ಅನಾವರಣ ನಡೆಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಶ್ರೀ ಸಂಸ್ಥಾನದವರ ಸಾನ್ನಿಧ್ಯದಲ್ಲಿ ಸ್ವಾತಂತ್ರ್ಯ ಯೋಧ ಸತ್ಯನಾರಾಯಣ ಪರಮೇಶ್ವರ ಹೆಗಡೆಯವರ ಪುತ್ರ ಅನಂತ್ ಎಸ್.ಹೆಗಡೆ ಅನಾವರಣ ನೆರವೇರಿಸಿದರು.
ಶ್ರೀಮಠದ ಪರಂಪರೆಯ 34ನೇ ಪೀಠಾಧ್ಯಕ್ಷರಾಗಿದ್ದ ಪರಮಪೂಜ್ಯ ಶ್ರೀ ರಾಮಚಂದ್ರ ಭಾರತೀ ಮಹಾಸ್ವಾಮಿಗಳು ಬ್ರಿಟಿಷರನ್ನು ಭಾರತದಿಂದ ಹೊರಹಾಕಬೇಕು ಎನ್ನುವ ಸದಪೇಕ್ಷೆ ಉಳ್ಳವರಾಗಿದ್ದರು. ಶಿರಸಿ, ಸಿದ್ದಾಪುರ, ಸಾಗರ ಹಾಗೂ ಸೊರಬ ಮುಂತಾದ ಭಾಗದ ಶ್ರೀ ಮಠದ ಶಿಷ್ಯರಲ್ಲಿ ಬಹುತೇಕ ಮಂದಿ ಸತ್ಯಾಗ್ರಹದಲ್ಲಿ ನೇರವಾಗಿ ಭಾಗಿಗಳಾಗಿದ್ದರು. ಅವರು ಬಂಧನದ ಭೀತಿಗೊಳಗಾದಾಗ ಗುರುವರ್ಯರು ಅಲ್ಲಲ್ಲಿ ಆಶ್ರಯ ಕಲ್ಪಿಸಿ, ಊಟೋಪಚಾರ, ಸಕಲ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದರು. ಸತ್ಯಾಗ್ರಹಿಗಳಿಗೆ ಸಮಯೋಚಿತ ಸಲಹೆ- ಸಹಕಾರಗಳನ್ನೂ ನೀಡುತ್ತಿದ್ದರು ಎಂದು ರಾಘವೇಶ್ವರ ಶ್ರೀಗಳು ಹೇಳಿದರು.

ವಿಡಿಯೋ ಸಹಿತ ಇದನ್ನೂ ಓದಿ : ಭಟ್ಕಳದಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ

ಮಠ ನಡೆಸುವುದೇ ಕಷ್ಟ ಎನ್ನುವ ಪರಿಸ್ಥಿತಿಯಲ್ಲಿ ಕೂಡ ಗುರುಗಳು ೧೦೦೦ ರೂಪಾಯಿಗಳನ್ನು ಸ್ವಾತಂತ್ರ್ಯ ಹೋರಾಟಕ್ಕೆ ದೇಣಿಗೆ ನೀಡಿದ್ದನ್ನು ಸ್ಮರಿಸಲಾಯಿತು.
ರಾಷ್ಟ್ರೀಯತೆಯ ಹೋರಾಟಕ್ಕೆ ದೊಡ್ಡ ಕೊಡುಗೆ ನೀಡಿದ ಸಿದ್ದಾಪುರ ತಾಲೂಕಿನ ಒಟ್ಟು ೯೫೦ ಮಂದಿ ಸ್ವಾತಂತ್ರ್ಯ ಹೋರಾಟಗಾರರ (freedom fighters) ಪೈಕಿ ೭೮೯ ಮಂದಿ ಹವ್ಯಕರು. ೧೭೧ ಮಹಿಳೆಯರು ಕೂಡ ಹೋರಾಟಕ್ಕೆ ಧುಮುಕಿದ್ದರು. ಅಂಕೋಲಾ ಸತ್ಯಾಗ್ರಹ, ಹೊಸತೋಟ ಸತ್ಯಾಗ್ರಹ, ಕರಬಂದಿ ಚಳವಳಿ, ಸಿದ್ದಾಪುರ ಮುರುಘಾಮಠ ಎದುರಿನ ಸತ್ಯಾಗ್ರಹ, ಮಾವಿನಗುಂಡಿ ಸತ್ಯಾಗ್ರಹ, ಅಕ್ಕಂಜಿ ಸತ್ಯಾಗ್ರಹ, ಚಲೇಜಾವ್ ಚಳವಳಿ ಹೀಗೆ ಎಲ್ಲದರ ಪಾರುಪತ್ಯ ಹವ್ಯಕರದ್ದೇ ಆಗಿತ್ತು ಎಂಬ ಅಪರೂಪದ ಮಾಹಿತಿಗಳು ಅನಾವರಣದಲ್ಲಿ ಬಿಂಬಿತವಾದವು.

ವಿಡಿಯೋ ಸಹಿತ ಇದನ್ನೂ ಓದಿ :  ರಾಷ್ಟ್ರಧ್ವಜಾರೋಹಣ ಮಾಡದ ರಾಷ್ಟ್ರೀಕೃತ ಬ್ಯಾಂಕ್‌

ಗಾಣಿಗ ಸಮಾಜದಿಂದ ಸುವರ್ಣ ಪಾದುಕಾಪೂಜೆ ನೆರವೇರಿತು. ಶಾಸಕ ದಿನಕರ ಶೆಟ್ಟಿ, ತಾಲೂಕು ಪಂಚಾಯ್ತಿ ಮಾಜಿ ಸದಸ್ಯ ಮಹೇಶ ಶೆಟ್ಟಿ, ಮಾರುತಿ ಕಟ್ಟೆ ರಿಕ್ಷಾ ಚಾಲಕರ ಸಂಘದ ಪ್ರಮುಖರು, ಭದ್ರಕಾಳಿ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಸದಸ್ಯರು ಶ್ರೀಗಳಿಂದ ಆಶೀರ್ವಾದ ಪಡೆದರು.

ಇದನ್ನೂ ಓದಿ :  ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ |

ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಚಾತುರ್ಮಾಸ್ಯ ಸಮಿತಿ ಕಾರ್ಯದರ್ಶಿ ಶ್ರೀಕಾಂತ ಪಂಡಿತ, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ವ್ಯವಸ್ಥಾಪಕ ಪ್ರಮೋದ ಮುಡಾರೆ, ಶ್ರೀಶ ಶಾಸ್ತ್ರಿ, ವಿವಿವಿ ಆಡಳಿತಾಧಿಕಾರಿ ಡಾ.ಪ್ರಸನ್ನ ಕುಮಾರ ಟಿ.ಜಿ., ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಜಿ.ವಿ.ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. ಬಿಂದು ಅವಧಾನಿ ಕಾರ್ಯಕ್ರಮ ನಿರೂಪಿಸಿದರು.

ಇದನ್ನೂ ಓದಿ : ಭಟ್ಕಳದ ಹೆಮ್ಮೆಯ ಪುತ್ರ ನಾಗರಾಜ ದೇವಡಿಗ