ಉಡುಪಿ (Udupi): ಮೀನುಗಾರಿಕೆಗೆ ತೆರಳಿದ್ದಾಗ ಸಮುದ್ರದಲ್ಲಿ ಬಿದ್ದು ನಾಪತ್ತೆಯಾಗಿದ್ದ ಉತ್ತರ ಕನ್ನಡದ (Uttara Kannada) ಮೀನುಗಾರರೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ (Fisherman Died). ಅಂಕೋಲಾ (Ankola) ಮೂಲದ ಕೃಷ್ಣ (೪೫) ಮೃತ ಮೀನುಗಾರ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮೃತನ ಸಹೋದರ ಶೇಖರ ದೂರಿನಲ್ಲಿ ತಿಳಿಸಿರುವಂತೆ, ಶೇಖರ ಮತ್ತು ಸಹೋದರ ಕೃಷ್ಣ ಮಲ್ಪೆಯ ಮೂಡಬೆಟ್ಟುವಿನ ಅಶೋಕ ಎಂಬುವವರ ‘ಶ್ರೀ ದತ್ತಾಂಜನೇಯ’ ಎಂಬ ಹೆಸರಿನ ದೋಣಿಯಲ್ಲಿ ಕೆಲಸ ಮಾಡುತ್ತಿದ್ದೆವು. ಡಿ.೨೪ರ ಭಾನುವಾರ ಮಧ್ಯಾಹ್ನ ೨.೩೦ಕ್ಕೆ ೩೧ ಕಾರ್ಮಿಕರು ಮಲ್ಪೆ (Malpe) ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದರು. ಮರುದಿನ, ಮಧ್ಯಾಹ್ನ ೨ ಗಂಟೆಗೆ, ಮೀನುಗಾರಿಕೆ ಬಲೆ ಎಳೆಯುವಾಗ ಸಮುದ್ರದಲ್ಲಿ, ಕೃಷ್ಣ ಆಕಸ್ಮಿಕವಾಗಿ ದೋಣಿಯಿಂದ ಬಿದ್ದು ನಾಪತ್ತೆಯಾಗಿದ್ದರು. ತಕ್ಷಣ ಅವರನ್ನು ಹುಡುಕಲು ಕಾರ್ಮಿಕರು ಸಮುದ್ರಕ್ಕೆ ಹಾರಿದರು, ಆದರೆ ಕೃಷ್ಣ ಪತ್ತೆಯಾಗಲಿಲ್ಲ. ಶುಕ್ರವಾರ ಅವರ ಶವ ಮಲ್ಪೆ ಬಂದರಿನಿಂದ ೯ ಮಾರು ದೂರದಲ್ಲಿ ಪತ್ತೆಯಾಗಿದೆ (Fisherman Died). ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : Editorial/ ಪ್ರವಾಸೋದ್ಯಮಿಗಳ ಕಷ್ಟಕ್ಕೆ ಸರ್ಕಾರ ಸ್ಪಂದಿಸಲಿ