ಕಾರವಾರ (Karwar) : ಶಾಲಾ ಶಿಕ್ಷಕರಿಗೆ, ಮಕ್ಕಳಿಗೆ ಸಿಹಿ ಸುದ್ದಿ. ಇನ್ಮುಂದೆ ಪ್ರತಿ ಶನಿವಾರ (Satuarday) ಅರ್ಧ ದಿನ ರಜೆ ಇರಲಿದೆ. ಇನ್ಮುಂದೆ ಮಾತ್ರ ಶಾಲೆ ನಡೆಸುವಂತೆ ಶಾಲಾ ಶಿಕ್ಷಣ ಇಲಾಖೆಯ (Education Department) ಉತ್ತರ ಕನ್ನಡ (Uttara Kannada) ಉಪ ನಿರ್ದೇಶಕರು ಆದೇಶ ಹೊರಡಿಸಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕಳೆದ ಜುಲೈ (July) ಮತ್ತು ಆಗಸ್ಟ್ ತಿಂಗಳಲ್ಲಿ (August) ಸುರಿದ ಧಾರಾಕಾರ ಮಳೆಯಿಂದಾಗಿ (heavy rain) ಉತ್ತರ ಕನ್ನಡ (Uttara Kannada) ಜಿಲ್ಲೆಯ ಶಾಲೆಗಳಿಗೆ ರಜೆ ನೀಡಲಾಗಿತ್ತು. ಇದನ್ನ ಸರಿದೂಗಿಸಲು ಪ್ರತಿ ಶನಿವಾರ ಪೂರ್ತಿದಿನ ಶಾಲೆಗಳನ್ನ ನಡೆಸುವಂತೆ ತಿಳಿಸಲಾಗಿತ್ತು.

ಇದನ್ನು ಓದಿ : Vardhanti / ಕರಿಕಲ್‌ ಗ್ರಾಮದಲ್ಲಿ ಪಂಚಮ ವರ್ಧಂತಿ ಮಹೋತ್ಸವ

ಶಿರಸಿ (Sirsi) ಶೈಕ್ಷಣಿಕ ಜಿಲ್ಲೆಯಲ್ಲಿ ಈಗಾಗಲೇ ಅರ್ಧ ದಿನ ರಜೆ ಘೋಷಿಸಲಾಗಿದೆ. ಆದರೆ, ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಇದು ಮುಂದುವರೆದಿತ್ತು. ಈಗ ಆ ಎಲ್ಲಾ ರಜೆಗಳು ಸರಿದೂಗಿಸಲಾಗಿದೆ. ಹೀಗಾಗಿ ಇನ್ನು ಮುಂದೆ ಈ ಹಿಂದಿನಂತೆಯೇ ಶನಿವಾರದಂದು ಅರ್ಧ ದಿನ ಶಾಲೆ ನಡೆಸುವಂತೆ ಶಾಲಾ ಶಿಕ್ಷಣ ಇಲಾಖೆಯ ಉತ್ತರ ಕನ್ನಡ ಉಪನಿರ್ದೇಶಕರು ಆದೇಶಿಸಿದ್ದಾರೆ.

ವಿಡಿಯೋ ಸಹಿತ ಇದನ್ನು ಓದಿ : SDPI/ ಸಚಿವ ಮಂಕಾಳ ವೈದ್ಯ ವಿರುದ್ಧ ಎಸ್‌ಡಿಪಿಐ ಕೆಂಡ