ಭಟ್ಕಳ (Bhatkal) : ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ (Vader Swamiji) ಭಟ್ಕಳದಲ್ಲಿ ಪ್ರಥಮ ಬಾರಿಗೆ ವಾಸ್ತವ್ಯ ಮಾಡುತ್ತಿದ್ದಾರೆ. ಪಟ್ಟಣದ ಶ್ರೀ ಲಕ್ಷ್ಮೀ ನಾರಾಯಣ ರಾಮನಾಥ ಶಾಂತೇರಿ ಕಾಮಾಕ್ಷಿ ಬೇತಾಳ ದೇವಸ್ಥಾನದಲ್ಲಿ ಡಿ.೧ರಿಂದ ಡಿ.೭ರವರೆಗೆ ಇರಲಿದ್ದು, ತನ್ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಶ್ರೀಮದ್ ವಿದ್ಯಾದೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ (Vader Swamiji) ಮಾರ್ಗದರ್ಶನ ಮತ್ತು ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಭಾನುವಾರ ಡಿ.೧ರ ಬೆಳಿಗ್ಗೆ ನಸುಕಿನ ಜಾವ ಶ್ರೀ ದೇವಿಯ ದಿವ್ಯ ರೂಪ ದರ್ಶನ, ಶ್ರೀರಾಮ (Shri Ram) ನಾಮ ಜಪ ನಡೆಯಲಿದೆ. ಸಂಜೆ ೭ಕ್ಕೆ ಶ್ರೀಗಳನ್ನು ಭಟ್ಕಳದ ಬೈಪಾಸನಲ್ಲಿ ಪೂರ್ಣಕುಂಭ ಸ್ವಾಗತದೊಂದಿಗೆ ಅಲಂಕೃತ ಟ್ಯಾಬ್ಲೋನಲ್ಲಿ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಗುವದು. ಅಮವಾಸ್ಯೆ (Amavasya) ಪ್ರಯುಕ್ತ ಅಷ್ಠಾವಧಾನದೊಂದಿಗೆ ಶ್ರೀ ದೇವರ ಪಲ್ಲಕ್ಕಿ ಉತ್ಸವ, ಶ್ರೀ ದೇವರನ್ನು ದೋಣಿಯಲ್ಲಿ ಇರಿಸಿ ವಿಶೇಷ ದೀಪೋತ್ಸವ, ಪೂಜೆ ಬಳಿಕ ಪ್ರಸಾದ ಭೋಜನ ನಡೆಯಲಿದೆ.

ಇದನ್ನೂ ಓದಿ :  ಅಂಡರ್ ಪಾಸ್ ಫಸ್ಟ್ , ರಸ್ತೆ ಅಗಲೀಕರಣ ನೆಕ್ಟ್ ಎಂದ ಸಾರ್ವಜನಿಕರು

ಡಿ.೨ರಂದು ದಿನೇಶ ಪೈ ದಂಪತಿಯ ಷಷ್ಠಬ್ದಿ ಪೂರ್ತಿ ಉಗ್ರರಥ ಶಾಂತಿ, ಸಂಜೆ ಶ್ರೀಗಳಿಂದ ಆಶೀರ್ವಚನ, ಸಭಾ ಕಾರ್ಯಕ್ರಮ, ಬಳಿಕ ಗೀತರಾಮಾಯಣ ಕಾರ್ಯಕ್ರಮ ನಡೆಯಲಿದೆ. ಡಿ.೩ರಂದು ಧಾರ್ಮಿಕ ಅನುಷ್ಟಾನಗಳೊಂದಿಗೆ ಸಂಜೆ ನರಸಿಂಹ ನೃತ್ಯ ರೂಪಕ, ೪ರಂದು ಭಕ್ತಿ ಸಂಗೀತ ಹಾಗೂ ಮರಾಠಿ ಅಭಂಗ ನಡೆಯಲಿದೆ. ಡಿ. ೫ರಂದು ಹಿಂದುಸ್ಥಾನಿ ಗಾಯನ ಹಾಗೂ ಕೊಳಲು ಜುಗಲ್ಬಂದಿ ಹುಬ್ಬಳ್ಳಿಯ (Hubballi) ಜಯತೀರ್ಥ ಮೇವಂಡಿ (jayathirtha Mevundi) ಮತ್ತು ಬೆಂಗಳೂರಿನ (Bengaluru) ಪ್ರವೀಣ ಗೊಡ್ಕಂಡಿ (praveen godkhindi) ಇವರಿಂದ ನಡೆಯಲಿದೆ.

ಇದನ್ನೂ ಓದಿ :  ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಟ್ಯೂಶನ್‌ ಕ್ಲಾಸ್‌

ಡಿ.೬ರಂದು ಲಕ್ಷ ಕುಂಕುಮಾರ್ಚನೆ, ಶ್ರೀ ದೇವರಿಗೆ ತೊಟ್ಟಿಲು ಸೇವೆ, ಬಸ್ತಿ ಕವಿತಾ ಶೆಣೈ ವೃಂದದವರಿಂದ ಭಜನ ಸಂಧ್ಯಾ ನಡೆಯಲಿದೆ. ಡಿ.೭ರಂದು ಸಂಜೆ ೫.೩೦ಕ್ಕೆ ಶ್ರೀಗಳನ್ನು ಮುಂದಿನ ಮೊಕ್ಕಾಂಗೆ ಬೀಳ್ಕೊಡುವದು, ಬಳಿಕ ಚಂಪಾ ಸೃಷ್ಟಿಯ ಪ್ರಯುಕ್ತ ಪಲ್ಲಕ್ಕಿ ಉತ್ಸವ ನಡೆಯಲಿದೆ. ಸಮಾಜ ಬಾಂಧವರು ಶ್ರೀ ಸನ್ನಿಧಿಯಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀ ದೇವಿಯ ಹಾಗೂ ಪರಮಪೂಜ್ಯ ಗುರುವರ್ಯರ ಕೃಪಾನುಗ್ರಹಕ್ಕೆ ಪಾತ್ರರಾಗಬೇಕು ಎಂದು ದೇವಸ್ಥಾನದ ಟ್ರಸ್ಟಿ ದಿನೇಶ ಪೈ  ವಿನಂತಿಸಿದ್ದಾರೆ.

ಇದನ್ನೂ ಓದಿ :  ನಾಗಬನದಲ್ಲಿ ವಿಜೃಂಭಣೆಯ ದೀಪೋತ್ಸವ