ಹೊನ್ನಾವರ (Honnavar) : ಅಡ್ಡಾದಿಡ್ಡಿ ಬೋಟ್ ಚಲಾಯಿಸಿದ್ದರಿಂದ ಬೋಟ್ ದಂಡೆ ಮೇಲೆ ಕುಳಿತಿದ್ದ ಮೀನುಗಾರ ಬಿದ್ದು ಗಾಯಗೊಂಡ (fisherman injured) ಘಟನೆ ನಡೆದಿದೆ. ಈ ಕುರಿತು ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮಂಕಿ ದೇವರಗದ್ದೆಯ ನಾರಾಯಣ ಲಕ್ಷ್ಮಣ ಖಾರ್ವಿ ಬೋಟ್‌ನಿಂದ ಬಿದ್ದು ಗಾಯಗೊಂಡವರು (fisherman injured). ಆ.೨೦ರಂದು ಸಂಜೆ ೫ರ ಸುಮಾರಿಗೆ ಈ ಘಟನೆ ನಡೆದಿದೆ. ಬೋಟ್ ಚಲಾಯಿಸಿದ ದೇವರಗದ್ದೆಯವರೇ ಆದ ಶರತ್ ವೆಂಕಟೇಶ ಖಾರ್ವಿ ವಿರುದ್ಧ ದೂರು ದಾಖಲಾಗಿದೆ. ಆರೋಪಿಯು ಸಮುದ್ರದಲ್ಲಿ ಬಂದ ಅಲೆಗಳ ರಭಸವನ್ನು ನಿರ್ಲಕ್ಷಿಸಿ ತನ್ನ ಬೋಟ್‌ನ್ನು ಅಡ್ಡಾದಿಡ್ಡಿ ಚಾಲನೆ ಮಾಡಿದ್ದರಿಂದ ಬೋಟ್ ದಂಡೆ ಮೇಲೆ ಕುಳಿತಿದ್ದ ನಾರಾಯಣ ಖಾರ್ವಿ ಬೋಟ್‌ದಿಂದ ಬಿದ್ದಿದ್ದಾರೆ. ಅವರ ಬಲಗಾಲ ಮಂಡಿಯ ಕೆಳಭಾಗದಲ್ಲಿ ಬೋಟ್ ಫೋರ್ ಭಾಗವು ಹಾಯ್ದು, ಕಾಲಿಗೆ ಗಂಭೀರ ಗಾಯವಾಗಿದೆ ಎಂದು ಗಾಯಾಳು ಸಹೋದರನ ಮಗ ಮೋಹನ ಮಂಜುನಾಥ ಖಾರ್ವಿ ದೂರಿನಲ್ಲಿ ತಿಳಿಸಿದ್ದಾರೆ.
ವಿಡಿಯೋ ಸಹಿತ ಇದನ್ನೂ ಓದಿ : ಈದ್ ಮಿಲಾದ್ ನಿಮಿತ್ತ ರೋಗಿಗಳಿಗೆ ಹಣ್ಣು ವಿತರಣೆ
ಗಾಯಾಳುವನ್ನು ಚಿಕಿತ್ಸೆ ಸಲುವಾಗಿ ಮಂಗಳೂರಿನ (Mangaluru) ವೆನ್‌ಲಾಕ್ ಆಸ್ಪತ್ರೆಯಲ್ಲಿ (wenlock hospital) ದಾಖಲಿಸಲಾಗಿತ್ತು. ೩ ದಿನಗಳ ನಂತರ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಅದಾದ ನಂತರ ವೈದ್ಯರು ಇನ್ನಷ್ಟು ಶಸ್ತ್ರಚಿಕಿತ್ಸೆಗಳು ಬಾಕಿ ಉಳಿದಿರುವ ಬಗ್ಗೆ ತಿಳಿಸಿದ್ದಾರೆ. ಹೀಗಾಗಿ ದೂರು ನೀಡುವಲ್ಲಿ ವಿಳಂಬವಾಗಿದೆ ಎಂದು ಮೋಹನ ಖಾರ್ವಿ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ (case registered) ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ವಿಡಿಯೋ ಸಹಿತ ಇದನ್ನೂ ಓದಿ : ಭಟ್ಕಳದಲ್ಲಿ ಸಡಗರದ ಈದ್ ಮಿಲಾದ್ ಮೆರವಣಿಗೆ