ಭಟ್ಕಳ(Bhatkal): ಪಟ್ಟಣದ ಶ್ರೀ ವಡೇರ ಮಠದಲ್ಲಿ ಜಿಎಸ್‌ಬಿ ಸಮಾಜದ ಮಹಿಳೆಯರು ವರಮಹಾಲಕ್ಷ್ಮಿ (Varamahalakshmi) ವ್ರತವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿ ಸಂಭ್ರಮಿಸಿದರು.
ಮುಂಜಾನೆಯಿಂದಲೇ ಗೃಹಿಣಿಯರು ತಮ್ಮ ಮನೆಗಳಲ್ಲಿ ಶ್ರಾವಣ ಶುಕ್ರವಾರದ “ಚೂಡಿ ಪೂಜಾ ವಿಧಿ”ಯನ್ನು ಮುಗಿಸಿ ದೇವಸ್ಥಾನಗಳಲ್ಲಿ ವರಮಹಾಲಕ್ಷ್ಮಿಯ ಮೂರ್ತಿ ಪ್ರತಿಷ್ಠಾಪನೆ ಮತ್ತು ಅಲಂಕಾರದಲ್ಲಿ ತೊಡಗಿದ್ದರು. ಇಲ್ಲಿನ ವಡೇರ ಮಠದಲ್ಲಿ ಜಿಎಸ್‌ಬಿ ಮಹಿಳಾ ಸಮಾಜದ ಅಧ್ಯಕ್ಷೆ ಸುನೀತಾ ಸುಧಾಕರ ಪೈ ನೇತೃತ್ವದಲ್ಲಿ ಸುಂದರವಾಗಿ ಮಹಾಲಕ್ಷ್ಮಿ (Varamahalakshmi) ಪ್ರತಿಷ್ಠಾಪಿಸಿದರು. ನೂರಾರು ಮಹಿಳೆಯರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಬಳಿಕ ಸಮಾಜ ಬಾಂಧವರಿಗೆ ಅನ್ನಸಂತರ್ಪಣೆ ಸೇವೆ ನಡೆಯಿತು.
ವರಮಹಾಲಕ್ಷ್ಮಿ ವ್ರತದ ಅಂಗವಾಗಿ ಬೆಳಿಗ್ಗೆ ನಡೆದ ಕುಂಕುಮಾರ್ಚನೆಯಲ್ಲೂ ಮಹಿಳೆಯರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಜಿಎಸ್‌ಬಿ ಸಮಾಜದ ಅಧ್ಯಕ್ಷ ಸುಬ್ರಾಯ ಕಾಮತ, ಮಹಿಳಾ ಮಂಡಳದ ಉಪಾಧ್ಯಕ್ಷೆ ರಜನಿ ರಾಮದಾಸ ಪ್ರಭು, ಕಾರ್ಯದರ್ಶಿ ರಚನಾ ಕಾಮತ, ಸಹಕಾರ್ಯದರ್ಶಿ ವಿದ್ಯಾ ಪೈ, ಖಜಾಂಚಿ ಅಕ್ಷತಾ ಕಾಮತ, ಗೌರವಾಧ್ಯಕ್ಷೆ ನೀತಾ ಕಾಮತ ಸೇರಿದಂತೆ ಇತರರು ಸಹಕರಿಸಿದರು.   ಅರ್ಚಕ ಕಿಶೋರ ಭಟ್ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.
ವಿಡಿಯೋ ಸಹಿತ ಇದನ್ನೂ ಓದಿ : ಸಮುದ್ರ ಕೊರೆತದಿಂದ ಸ್ಥಳೀಯರು ಆತಂಕ