ಹೊನ್ನಾವರ (Honnavar) : ಶ್ರೀ ವಿಶ್ವವೀರಾಂಜನೇಯ ಮಹಾಸಂಸ್ಥಾನಮ್ ಹೇಮಪುರ ಮಹಾಪೀಠ, ಶ್ರೀ ವೀರಾಂಜನೇಯ ಧಾರ್ಮಿಕ ಹಾಗೂ ದತ್ತಿ ಸಂಸ್ಥೆ ವತಿಯಿಂದ ಹೊನ್ನಾವರ ತಾಲೂಕಿನ ಗೇರುಸೊಪ್ಪದ (Gerusoppa) ಶ್ರೀ ಕ್ಷೇತ್ರ ಬಂಗಾರಮಕ್ಕಿಯಲ್ಲಿ (Bangaramakki) ಸಂಸ್ಕೃತಿ ಕುಂಭ-ಮಲೆನಾಡು ಉತ್ಸವ, ಪ್ರತಿಷ್ಠಾ ಮಹೋತ್ಸವ ಮತ್ತು ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ವಿವಿಧ ಧಾರ್ಮಿಕ ಕಾರ್ಮಿಕ್ರಮಗಳು ಜರುಗಿದವು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಈ ವೇಳೆ ಶ್ರೀ ವೀರಾಂಜನೇಯ (Veeranjaneya) ದೇವರ ಪ್ರತಿಷ್ಠೆ, ನೂತನ ಗೋಪುರ, ಸ್ವರ್ಣ ಕಲಶ ಪ್ರತಿಷ್ಠೆ, ಶ್ರೀ ಮಹಾಗಣಪತಿ ಪ್ರತಿಷ್ಠೆ, ನಾಗಬನದಲ್ಲಿ ಶ್ರೀ ಸುಬ್ರಹ್ಮಣ್ಯ ಪ್ರತಿಷ್ಠೆ, ಶ್ರೀ ಚೌಡೇಶ್ವರಿ ಪ್ರತಿಷ್ಠೆ ಮತ್ತು ನವಗ್ರಹ ಪ್ರತಿಷ್ಠೆ ಕಾರ್ಯಕ್ರಮಗಳು ಶ್ರೀ ಕ್ಷೇತ್ರ ಬಂಗಾರಮಕ್ಕಿಯಲ್ಲಿ (Bangaramakki) ಧರ್ಮಾಧಿಕಾರಿ ಶ್ರೀ ಮಾರುತಿ ಗುರೂಜಿ (Maruti Guruji) ಸಾನ್ನಿಧ್ಯದಲ್ಲಿ ಶಾಸ್ತ್ರೋಕ್ತವಾಗಿ ನಡೆದವು. ಕಳಶ ಪ್ರತಿಷ್ಠೆ ವೇಳೆ ಭಕ್ತ ಸಮೂಹದ ಹರ್ಷೋದ್ಘಾರ ಮುಗಿಲು ಮುಟ್ಟುವಂತಿತ್ತು.

ಇದನ್ನೂ ಓದಿ : Poetry collection/ ಶಿರಾಲಿಯಲ್ಲೊಂದು ಚಿಕ್ಕ ಚೊಕ್ಕ ಕಾರ್ಯಕ್ರಮ

ಬೆಳಿಗ್ಗೆಯಿಂದ ಆರಂಭವಾದ ನಿರಂತರ ಪೂಜೆ, ಭಜನೆ ಶ್ರೀ ಕ್ಷೇತ್ರದಲ್ಲಿ ಧಾರ್ಮಿಕತೆಯ ಸುಗಂಧ ಸೂಸುವಂತಿತ್ತು. ಧಾರ್ಮಿಕ ಕಾರ್ಯದ ಸಂದರ್ಭದಲ್ಲಿ ಭಕ್ತರು ಶ್ರೀರಾಮ ತಾರಕ (Shri Ram Taraka), ಹನುಮಾನ ಜಪ, ಹನುಮಾನ ಚಾಲೀಸಾ (Hanuman Chalisa) ಪಠಣದ ಮೂಲಕ ಭಕ್ತಿ ಸಮರ್ಪಣೆಯಲ್ಲಿ ಮಂತ್ರಮುಗ್ಧರಾಗಿದ್ದರು. ವಾದ್ಯ ಮೇಳ, ಮಂತ್ರೋದ್ಘಾರದ ಮೂಲಕ ನಡೆದ ವಿವಿಧ ಧಾರ್ಮಿಕ ಕಾರ್ಯಗಳು ಭಕ್ತ ಸಮೂಹವನ್ನು ಭಕ್ತಿ ಪರಾಕಾಷ್ಠೆಗೆ ತಲುಪುವಂತೆ ಮಾಡಿತು. ಈ ಸಂದರ್ಭದಲ್ಲಿ ಪುರೋಹಿತರು, ಕ್ಷೇತ್ರದ ಭಕ್ತ ಸಮೂಹ, ಗುರುಗಳ ಶಿಷ್ಯ ಬಳಗ ಹಾಗೂ ಸಂಸ್ಥೆಯ ಸಿಬ್ಬಂದಿ ಇದ್ದರು.

ಇದನ್ನೂ ಓದಿ : Vardhanti/ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಧಂತಿ ಉತ್ಸವ