ಕಾರವಾರ (Karwar): ಎಲ್ಲೋ ದೂರದ ಉತ್ತರ ಭಾರತದಲ್ಲೆಲ್ಲೋ ವ್ಯಾಪಾರಿಗಳು ಊಟ, ತಿಂಡಿ, ಪದಾರ್ಥಗಳಿಗೆ ಉಗುಳುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (video viral)ಆಗುತ್ತಿರುತ್ತವೆ. ಇದೀಗ ನಮ್ಮ ಉತ್ತರ ಕನ್ನಡ ಜಿಲ್ಲಾ ಕೇಂದ್ರ ಕಾರವಾರದಲ್ಲಿಯೇ ಇಂಥದ್ದೊಂದು ಘಟನೆ ನಡೆದಿದ್ದು, ತರಕಾರಿ ವ್ಯಾಪಾರಿಯೊಬ್ಬ (Vegetable merchant) ುಗುಳುವ ವಿಡಿಯೋ ವೈರಲ್ ಆಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಇಂದು ಭಾನುವಾರದ ಸಂತೆಗೆ ಆಗಮಿಸಿದ್ದ ವ್ಯಾಪಾರಿಯೊಬ್ಬ (Vegetable merchant) ತರಕಾರಿ ಮೇಲೆ ಎಂಜಿಲು ಉಗಿದು ನೀರು ಚುಮುಕಿಸಿದ ದೃಶ್ಯವಾಳಿಗಳನ್ನು ಗ್ರಾಹಕ ಮುರುಳೀಧರ ಗೋವೆಕರ್ ಎಂಬುವವರು ತಮ್ಮ ಮೊಬೈಲ್’ನಲ್ಲಿ ಸೆರೆ ಹಿಡಿದಿದ್ದಾರೆ. ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಕ್ಷಣ ಎಚ್ಚೆತ್ತ ಪೊಲೀಸರು ಮುರುಳೀಧರರ ದೂರಿನ ಮೇರೆಗೆ ತರಕಾರಿ ವ್ಯಾಪಾರಿ ಅಬ್ದುಲ್ ಹಸನ್ ಸಾಬ್ ರಜಾಕ್’ನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ : ಅತಿಥಿ ಶಿಕ್ಷಕರ ನೇಮಕಕ್ಕೆ ಯಂಗ್ ಒನ್ ಇಂಡಿಯಾ ನೆರವು
ಹಾವೇರಿ (Haveri) ಜಿಲ್ಲೆಯ ಹಾನಗಲ್ (Hanagal)ತಾಲೂಕಿನ ಅಬ್ದುಲ್ ಹಸನ್ ಸಾಬ್ ರಜಾಕ್ ಪ್ರತಿ ವಾರ ತರಕಾರಿ ವ್ಯಾಪಾರಕ್ಕಾಗಿ ಉತ್ತರ ಕನ್ನಡ (Uttara Kannada) ಜಿಲ್ಲೆಗೆ ಬರುತ್ತಿದ್ದ. ತರಕಾರಿಗಳಿಗೆ ತನ್ನ ಎಂಜಿಲ ಜೊತೆ ನೀರು ಸಿಂಪಡಿಸುವುದು ಆತನ ಕಾಯಂ ಜಾಯಮಾನ ಎಂದು ದೂರಲಾಗಿದೆ. ತನ್ನ ಎಂಜಿಲನ್ನು ಊರಿನ ಎಲ್ಲರಿಗೂ ಉಣಿಸುವ ಚಿಂತನೆಯಲ್ಲಿದ್ದ ಅಬ್ದುಲ್ ಹಸನ್ ಸಾಬ್ ರಜಾಕ್ ಪ್ರತಿ ವಾರವೂ ತರಕಾರಿ ಮಾರಾಟಕ್ಕೆ ಬರುತ್ತಿದ್ದ. ಕಳೆದ ಭಾನುವಾರವೇ ಈತನ ಕೃತ್ಯವನ್ನು ಗಮನಿಸಿದ್ದ ಮುರುಳೀಧರ ಅವರು, ಇಂದು ಕಾದು ಆತನ ಕೃತ್ಯವನ್ನು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.
ಇದನ್ನೂ ಓದಿ : ಅಪರಿಚಿತಗೆ ಎಟಿಎಂ ಕಾರ್ಡ್ ಕೊಟ್ಟು ಮೋಸ ಹೋದರು !
ಎರಡು ಧರ್ಮಿಯರ ನಡುವೆ ದ್ವೇಷ ಹುಟ್ಟಿಸುವ ಕಾರಣದಿಂದ ತರಕಾರಿ ವ್ಯಾಪಾರಿ ಈ ಕೃತ್ಯ ಎಸಗಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಎಂಜಲು ಉಗುಳಿದ ತರಕಾರಿ ಸೇವನೆಯಿಂದ ರೋಗ ಹರಡುವ ಆತಂಕದ ಹಿನ್ನಲೆ ನಗರಸಭೆಯವರು ಆತ ತಂದಿದ್ದ ತರಕಾರಿಗಳನ್ನು ವಶಕ್ಕೆ ಪಡೆದಿದ್ದಾರೆ. ಆತನ ನೀಚ ಕೃತ್ಯದ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದರಿಂದ ಜನ ಸಹ ವ್ಯಾಪಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದರ ವಿಡಿಯೋವನ್ನು ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್ಬುಕ್ ನಲ್ಲಿ ವೀಕ್ಷಿಸಬಹುದು.
ಇದನ್ನೂ ಓದಿ : ಸಾರಿಗೆ ಬಸ್ ಡಿಕ್ಕಿ ಹೊಡೆದು ಪಾದಚಾರಿ ಸ್ಥಳದಲ್ಲೇ ಸಾವು