ಭಟ್ಕಳ(Bhatkal): ವಿಶ್ವ ಹಿಂದೂ ಪರಿಷತ್ತು (Vishwa Hindu Parishad) ಸ್ಥಾಪನೆಯಾಗಿ 60 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷದ್ ಸ್ಥಾಪನಾ ದಿನ (VHP foundation day) ಹಾಗೂ ಷಷ್ಠಿ ಪೂರ್ತಿ ಸಮಾರಂಭ ಚನ್ನಪಟ್ಟಣ ವೀರಾಂಜನೇಯ ಧರ್ಮಛತ್ರದಲ್ಲಿ ಆಗಸ್ಟ್ ೩೦, ಶುಕ್ರವಾರದಂದು ಸಂಜೆ ೫ ಗಂಟೆಗೆ ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷತ್ ಭಟ್ಕಳ ಘಟಕದ ಅಧ್ಯಕ್ಷ ರಾಮಕೃಷ್ಣ ನಾಯ್ಕ ಹೇಳಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅವರು ಇಲ್ಲಿನ ದಂಡಿಗ ದುರ್ಗಾ ದೇವಸ್ಥಾನದಲ್ಲಿ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಈ ಸಮಾರಂಭದಲ್ಲಿ ಮುಖ್ಯ ವಕ್ತಾರರಾಗಿ ವಿಶ್ವ ಹಿಂದು ಪರಿಷತ್‌ನ ಕ್ಷೇತ್ರೀಯ ಸತ್ಸಂಗ ಪ್ರಮುಖರಾದ ಮಹಾಬಲೇಶ್ವರ ಹೆಗಡೆ ಆಗಮಿಸಲಿದ್ದಾರೆ. ಗೌರವ ಅತಿಥಿಗಳಾಗಿ ತಾಲೂಕಿನ ಸರ್ಪನಕಟ್ಟೆಯ ಎಂ.ಜಿ.ಎಂ. ಸೌಹಾರ್ದ ನಿಯಮಿತದ ಅಧ್ಯಕ್ಷ ಈರಪ್ಪ ಗರ್ಡಿಕರ್ ಉಪಸ್ಥಿತರಿರುವರು. ಅತಿಥಿಗಳಾಗಿ ಹಿಂದೂ ಕಾಲೋನಿಯ ಸಂತ ರೋಹಿದಾಸ ಸಮಾಜದ ನಾಗೇಶ್ ಚಂದಾವರ, ಧಾರ್ಮಿಕ ದಾರ್ಶನಿಕರಾಗಿ ಬೈಲೂರಿನ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಪ್ರಧಾನ ಅರ್ಚಕ ಗಣೇಶ ಭಟ್ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಭಟ್ಕಳದ ಸಮಸ್ತ ಹಿಂದೂ ಬಾಂಧವರು ಭಾಗವಹಿಸಬೇಕು ಎಂದು ವಿನಂತಿಸಿಕೊಂಡರು.
ಇದನ್ನೂ ಓದಿ : ಕ್ರೀಡಾ ಲೋಕದ ದಂತಕಥೆ ಮೇಜರ್ ಧ್ಯಾನ್‌ಚಂದ್
ನಂತರ ರಾಮನಾಥ ಬಳಗಾರ ಮಾತನಾಡಿ ಭಟ್ಕಳ ಹಿಂದೂ ಪರಿಷತ್ ನ ನೂತನ ಸಮಿತಿ ಈಗಾಗಲೇ ರಚನೆಯಾಗಿ ಅಸ್ತಿತ್ವಕ್ಕೆ ಬಂದಿದೆ. ಇದರ ಅಧ್ಯಕ್ಷರಾಗಿ ರಾಮಕೃಷ್ಣ ನಾಯ್ಕ ಆಯ್ಕೆಯಾಗಿದ್ದಾರೆ. ಇದರಲ್ಲಿ ಒಟ್ಟು ೨೫ ಸದಸ್ಯರನ್ನು ಒಳಗೊಂಡ ಸಮಿತಿ ರಚನೆಯಾಗಿದೆ. ಆ.೩೦ರಂದು ನಡೆಯುವ ಕಾರ್ಯಕ್ರಮದಲ್ಲಿ ಸದಸ್ಯರ ಹೆಸರನ್ನು ಘೋಷಣೆ ಮಾಡಲಿದ್ದೇವೆ. ಭಟ್ಕಳದ ಸಮಸ್ತ ಹಿಂದೂ ಸಮಾಜ ಬಾಂಧವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಟ್ಕಳ ಘಟಕದಿಂದ ನಡೆಯುತ್ತಿರುವ ಈ ಸಂಭ್ರಮಾಚರಣೆಯನ್ನು ಯಶಸ್ವಿಯಾಗಿಸಿ ಎಂದು ಕೋರಿಕೊಂಡರು.
ಇದನ್ನೂ ಓದಿ : ಅಂಕೋಲಾ ನಾಮಧಾರಿಗಳಿಂದ ಶ್ರೀಗಳ ಭೇಟಿ
ಈ ಸಂದರ್ಭದಲ್ಲಿ ಪರಮೇಶ್ವರ ನಾಯ್ಕ, ಸುರೇಂದ್ರ ಭಟ್ಕಳಕರ, ಮೋಹನ ಶಿರಾಲಿಕರ್, ನಾಗರಾಜ ದೇವಾಡಿಗ, ಈಶ್ವರ ನಾಯ್ಕ ಆಸರಕೇರಿ, ಭಾಸ್ಕರ ಆಚಾರ್ಯ ಚೌಥನಿ, ವಾಮನ ಶಿರಸಾಟ, ಗೋವಿಂದ ಖಾರ್ವಿ, ಸುರೇಶ ಆಚಾರ್ಯ ಉಪಸ್ಥಿತರಿದ್ದರು.
ಸುದ್ದಿಗೋಷ್ಠಿಯ ವಿಡಿಯೋವನ್ನು ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂ ಮತ್ತು ಫೇಸ್‌ಬುಕ್ ನಲ್ಲಿ ವೀಕ್ಷಿಸಬಹುದಾಗಿದೆ.