ಭಟ್ಕಳ (Bhatkal) : ಭಟ್ಕಳದ ಪ್ರತಿಷ್ಠಿತ ಐ.ಸಿ.ಎಸ್.ಇ. (ICSE) ಪಠ್ಯಕ್ರಮದ ವಿದ್ಯಾಂಜಲಿ ಪಬ್ಲಿಕ್ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ವಿದ್ಯೋತ್ಸವ (Vidyotsava) ಡಿ.೨೦ ಮತ್ತು ೨೩ರಂದು ಯಶಸ್ವಿಯಾಗಿ ಜರುಗಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಶುಕ್ರವಾರ ನಡೆದ ಪೂರ್ವಪ್ರಾಥಮಿಕ ಶಾಲಾ ಹಂತದ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ, ಡಾ.ಸುರಕ್ಷಿತ ಶೆಟ್ಟಿ ಮಾತನಾಡಿ, ಮಕ್ಕಳಿಗೆ ಜೀವನದಲ್ಲಿ ಯಶಸ್ಸು ಸಿಗಬೇಕಾದರೆ ಪಾಲಕರು ಹಾಗೂ ಶಿಕ್ಷಕರು ಬಾಲ್ಯದಲ್ಲಿಯೇ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕೆಂದು ಹೇಳಿದರು. ಸೋಮವಾರ ನಡೆದ ಪ್ರಾಥಮಿಕ ಹಾಗೂ ಫ್ರೌಢಶಾಲಾ ಹಂತದ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ದಾವಣಗೆರೆಯ ಶಿಕ್ಷಣ ಸಮಾಲೋಚಕ ಜಗನ್ನಾಥ ನಾಡಿಗೇರ ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಾಲಕರು, ಶಿಕ್ಷಕರು, ಬಂಧುಮಿತ್ರರು, ನೆರೆಹೊರೆಯವರು ಹಾಗೂ ಸುತ್ತಮುತ್ತಲಿನ ವಾತಾವರಣವು ಬಹು ಮುಖ್ಯ
ಪಾತ್ರವನ್ನು ನಿರ್ವಹಿಸುತ್ತದೆ ಎಂದು ಹೇಳಿದರು.
ಇದನ್ನೂ ಓದಿ : ಉತ್ತರ ಕನ್ನಡ ಸಹಿತ ಕೆಲವೆಡೆ ಮಳೆ ಸಾಧ್ಯತೆ
ಭಟ್ಕಳ ಎಜ್ಯುಕೇಶನ ಟ್ರಸ್ಟಿನ ಚೇರ್ಮನ್ ಡಾ.ಸುರೇಶ ನಾಯಕ ಶಾಲೆಯ ಶಿಕ್ಷಕರ ಮತ್ತು ಪೋಷಕರ ಪರಿಶ್ರಮವನ್ನು ಶ್ಲಾಘಿಸಿದರು. ಪಾಲಕರು ಶಾಲೆಯ ಮೇಲೆ ಇಟ್ಟಿರುವ ಅಚಲ ವಿಶ್ವಾಸವನ್ನು ಕೊಂಡಾಡಿದರು. ಟ್ರಸ್ಟಿ ಮ್ಯಾನೇಜರ್ ರಾಜೇಶ ನಾಯಕ, ಟ್ರಸ್ಟಿಗಳಾದ ರಮೇಶ ಖಾರ್ವಿ, ನಾಗೇಶ ಭಟ್ ಮತ್ತಿತರರು ಇದ್ದರು. ಪ್ರಾಂಶುಪಾಲ ರಾಘವೇಂದ್ರ ಕಾಮತ ಶಾಲೆಯ ವಾರ್ಷಿಕ ವರದಿಯನ್ನು ಪ್ರಸ್ತುತ ಪಡಿಸಿದರು. ವಿದ್ಯೋತ್ಸವದ (Vidyotsava) ಎರಡೂ ದಿನ ಸಭಾ ಕಾರ್ಯಕ್ರಮದ ಬಳಿಕ ಅದ್ದೂರಿಯಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವು ನೆರೆದಿದ್ದ ಪ್ರೇಕ್ಷಕರ ಕಣ್ಮನ ಸೂರೆಗೊಳಿಸಿತು.
ಇದನ್ನೂ ಓದಿ : Fake News/ ಬೆಂಗಳೂರು ಬಿಟ್ಟರೆ ಉ.ಕ. ಜಿಲ್ಲೆಯಲ್ಲೇ ಹೆಚ್ಚು ಪ್ರಕರಣ