ಭಟ್ಕಳ (Bhatkal): ಹತ್ಯೆಗೀಡಾದ ನಕ್ಸಲ್ (Naxal) ನಾಯಕ ವಿಕ್ರಮ್ ಗೌಡ (Vikram Gowda) ಮತ್ತು ಆತನ ತಂಡ ಕೆಲ ಸಮಯದ ಹಿಂದೆ ಸುಬ್ರಹ್ಮಣ್ಯದಿಂದ (Subramanya) ಮುರ್ಡೇಶ್ವರಕ್ಕೆ (Murdeshwar) ರೈಲಿನಲ್ಲಿ ಪ್ರಯಾಣಿಸಿದ್ದರು. ನಂತರ ಅರಣ್ಯ ಮಾರ್ಗದಲ್ಲಿ ತೆರಳಿದ್ದರು ಎಂದು ವರದಿಯಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಲೋಕಸಭೆ ಚುನಾವಣೆ (lokasabha election) ವೇಳೆ ನಕ್ಸಲರು ಕೂಜುಮಲೆ, ಕಡಮಕಲ್ಲು, ಸುಬ್ರಹ್ಮಣ್ಯ, ಬಿಳಿನೆಲೆ ಭಾಗದಲ್ಲಿ ಹೆಚ್ಚಿನ ಸಮಯವನ್ನು ಕಳೆದು ಅರಣ್ಯದ ಅಂಚಿನಲ್ಲಿರುವ ಕೆಲ ಮನೆಗಳಿಗೆ ತೆರಳಿ ದಿನಸಿ ವಸ್ತುಗಳನ್ನು ವಿಕ್ರಮ್ ಗೌಡ (Vikram Gowda) ಮತ್ತು ಆತನ ತಂಡ ಸಂಗ್ರಹಿಸಿತ್ತು. ಬಳಿಕ ನೆಟ್ಟಣದಲ್ಲಿರುವ ಸುಬ್ರಹ್ಮಣ್ಯ ರೈಲು ನಿಲ್ದಾಣಕ್ಕೆ ಆಗಮಿಸಿ ಮುರ್ಡೇಶ್ವರ (Murudeshwar) ಕಡೆಗೆ ಪ್ರಯಾಣ ಬೆಳೆಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ : ಆಶುಭಾಷಣ ಸ್ಪರ್ಧೆಯಲ್ಲಿ ಶ್ರೀಧರ ಶೇಟ ಪ್ರಥಮ
ಮುರ್ಡೇಶ್ವರದಲ್ಲಿ ಇಳಿದು ಅರಣ್ಯ ಪ್ರದೇಶದಲ್ಲಿ ಕೊಲ್ಲೂರು (Kollur) ಕಡೆಗೆ ಪಾದಯಾತ್ರೆ ನಡೆಸಿ ನಂತರ ಕಾರ್ಕಳ(Karkala), ಹೆಬ್ರಿ ಪ್ರದೇಶಕ್ಕೆ ಬಂದಿದ್ದರು. ಪೀಠಬೈಲುನಲ್ಲಿ ಎನ್‌ಕೌಂಟರ್‌ಗೆ (Encounter) ಕೆಲವೇ ದಿನಗಳ ಮೊದಲು ಅವರು ಈದುನಲ್ಲಿ ಕಾಣಿಸಿಕೊಂಡರು. ರೈಲು ಪ್ರಯಾಣದ ವೇಳೆ ಶಸ್ತ್ರಾಸ್ತ್ರಗಳನ್ನು ಬಚ್ಚಿಟ್ಟು ತಮ್ಮ ಗುರುತನ್ನು ರಹಸ್ಯವಾಗಿಡುವಲ್ಲಿ ಯಶಸ್ವಿಯಾಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ : ಮುರ್ಡೇಶ್ವರದಲ್ಲಿ ಡಿಕೆಶಿ ಹೇಳಿದ್ದು ಸುಳ್ಳಾಗಲಿಲ್ಲ