ಭಟ್ಕಳ (Bhatkal): ಇಲ್ಲಿನ ವ್ಯವಸಾಯ ಸೇವಾ ಸಹಕಾರಿ ಸಂಘದ (VSS bank) 2023-24 ಸಾಲಿನಲ್ಲಿ 89.65 ಲಕ್ಷ ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಈರಪ್ಪ ನಾಯ್ಕ ಹೇಳಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅವರು ಶನಿವಾರದಂದು ಇಲ್ಲಿನ ಕಾಸ್ಮುಡಿ ಶ್ರೀ ಹನುಮಂತ ದೇವಸ್ಥಾನದ ಸ್ವಯಂವರ ಕಲ್ಯಾಣ ಮಂಟಪದಲ್ಲಿ ನಡೆದ ಭಟ್ಕಳದ ವ್ಯವಸಾಯ ಸೇವಾ ಸಹಕಾರಿ ಸಂಘದ (VSS bank) ೫೮ನೇ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು. ವರ್ಷದ ಆರಂಭಕ್ಕೆ ಸಂಘದಲ್ಲಿ ಒಟ್ಟೂ ೬೩೪೨ ಸಾಮಾನ್ಯ ಶೇರುದಾರ ಸದಸ್ಯರಿದ್ದರು. ಈ ವರ್ಷದಲ್ಲಿ ಹೊಸದಾಗಿ ೧೮೪ ಸದಸ್ಯರು ಸೇರ್ಪಡೆಯಾಗಿದ್ದಾರೆ. ೪೦ ಸದಸ್ಯರು ಸದಸ್ಯತ್ವದಿಂದ ಕಡಿಮೆಯಾಗಿದ್ದಾರೆ. ವರ್ಷದ ಕೊನೆಯಲ್ಲಿ ಸಾಮಾನ್ಯ ಸದಸ್ಯರ ಸಂಖ್ಯೆ ೬೪೮೬ಇರುತ್ತದೆ ಎಂದರು.
ಇದನ್ನೂ ಓದಿ : ಇನ್ನೋವೇಶನ್ ಇಂಟರ್ನಶಿಪ್‌ಗೆ ಬಾಲಕಿ ಆಯ್ಕೆ
ವರ್ಷದ ಆರಂಭಕ್ಕೆ ಶೇರು ಬಂಡವಾಳ ರೂ. ೩೦೮.೬೨ ಲಕ್ಷದಷ್ಟಿತ್ತು. ಸದರಿ ವರ್ಷದಲ್ಲಿ ರೂ. ೯೮.೬೨ ಲಕ್ಷ ಹೆಚ್ಚಿಗೆ ಶೇರು ಸಂಗ್ರಹಿಸಲಾಗಿದೆ. ರೂ. ೨೧.೭೩ಲಕ್ಷ ಶೇರು ಹಣ ಪರತ್ ಕೊಡಲಾಗಿದೆ. ಸದರಿ ಸಾಲಿನ ಅಂತ್ಯಕ್ಕೆ ರೂ ೩೮೫.೫೧ ಲಕ್ಷದಷ್ಟಿರುತ್ತದೆ. ಹಿಂದಿನ ವರ್ಷದ ಅಂತ್ಯಕ್ಕೆ ಸಂಘದ ಠೇವುಗಳು ೪೬೫೭.೮೪ ಲಕ್ಷದಷ್ಟಿತ್ತು. ಈ ವರ್ಷ ರೂ. ೯೧೯೯.೨೨ ಲಕ್ಷದಷ್ಟು ಠೇವಣಿ ಸಂಗ್ರಹಿಸಲಾಗಿದೆ. ೮೫೭೫.೮೮ ಲಕ್ಷದಷ್ಟು ಪರತ್ ನೀಡಲಾಗಿದೆ. ವರ್ಷದ ಕೊನೆಗೆ ೫೨೮೧.೧೮ ಲಕ್ಷದಷ್ಟು ಇರುತ್ತದೆ. ಪ್ರತಿ ವರ್ಷ ಠೇವುಗಳಲ್ಲಿಯ ಏರಿಕೆ ಮಟ್ಟವನ್ನು ಕಾಯ್ದುಕೊಂಡು ಬರಲಾಗಿದೆ ಎಂದರು.
ಇದನ್ನೂ ಓದಿ : ಎಲ್ಲ ಧರ್ಮದವರು ಒಟ್ಟಾಗಿ ಪೂಜಿಸುವ ಗಣೇಶ !
ಸಂಘವು ಕಂಟ್ರೋಲ ಆಹಾರ ಧಾನ್ಯಗಳ ವಹಿವಾಟು ವ್ಯವಹಾರವನ್ನು ನಡೆಸುತ್ತ ಬಂದಿದೆ. ೨೦೨೩-೨೪ರಲ್ಲಿ ಆರಂಭದ ಶಿಲ್ಕು ರೂ. ಲಕ್ಷದಷ್ಟಿತ್ತು. ಖರೀದಿ ೧೫.೭೧ ಲಕ್ಷದಷ್ಟಿದ್ದು, ವಿಕ್ರಿ ರೂ. ೧೬.೧೯ಲಕ್ಷದಷ್ಟು ಆಗಿರುತ್ತದೆ. ವರ್ಷದ ಕೊನೆಗೆ ರೂ. ೪೮ ಸಾವಿರದಷ್ಟು ಲಾಭ ಗಳಿಸಿರುತ್ತದೆ. ವರ್ಷದ ಕೊನೆಗೆ ೬೫೮೦.೦೧ ಲಕ್ಷ ಸಾಲ ಬರತಕ್ಕದ್ದು ಬಾಕಿ ಇದೆ. ಸಾಲಗಾರ ಸದಸ್ಯರು ತಾವು ಸಂಘದಿಂದ ಪಡೆದ ಸಾಲವನ್ನು ಸರಿಯಾಗಿ ಮರುಪಾವತಿ ಮಾಡಿಲ್ಲದ ಕಾರಣ ರೂ. ೭೫೬.೩೦ ಲಕ್ಷ ಸಾಲ ಬರತಕ್ಕದ್ದು ಸಂಘಕ್ಕೆ ಕಟ್‌ಬಾಕಿಯಾಗಿದೆ. ಈ ರೀತಿ ಸದಸ್ಯರು ತಮ್ಮ ಸಾಲಬಾಕಿ ಇಟ್ಟು ಕೊಂಡಲ್ಲಿ ಸಂಘದ ಪ್ರಗತಿಗೆ ತೊಂದರೆ ಉಂಟಾಗುತ್ತದೆ. ಸದಸ್ಯರು ತಾವು ಪಡೆದ ಸಾಲವನ್ನು ಸರಿಯಾಗಿ ಮರುಪಾವತಿ ಮಾಡಬೇಕೆಂದು ಅವರು ಕೋರಿದ್ದಾರೆ.
ಇದನ್ನೂ ಓದಿ : ಸತತ ೩ನೇ ಬಾರಿ ದಿ ನ್ಯೂ ಇಂಗ್ಲೀಷ್ ಪಿ ಯು ಕಾಲೇಜಿಗೆ ಸಮಗ್ರ ವೀರಾಗ್ರಣಿ
ಸಂಘದ ವತಿಯಿಂದ ಅನಾರೋಗ್ಯ ಪೀಡಿತರಿಗೆ, ಶೈಕ್ಷಣಿಕ, ಕ್ರೀಡೆ, ಶಾಲಾಭಿವೃದ್ಧಿ, ಹಾಗೂ ದೇವಸ್ಥಾನಗಳಿಗೆ ಒಟ್ಟು ೬,೬೭,೫೯೦ ರೂ. ದೇಣಿಗೆ ನೀಡಲಾಗಿದೆ. ಹಾಗೆಯೇ ಚೌಥನಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಪುರವರ್ಗ ಹಿರಿಯ ಪ್ರಾಥಮಿಕ ಶಾಲೆಗೆ ೧.೩೦ ಲಕ್ಷ ರೂ. ಮೌಲ್ಯದ ೨೦ಡೆಸ್ಕ್ ಹಾಗೂ ೨೦ಬೆಂಚ್ ದೇಣಿಗೆ ನೀಡಲಾಗಿದೆ. ಸಾಲ ಪಡೆದ ೨೩ ಜನ ಸಂಘದ ಶೇರುದಾರರು ಮರಣ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಋಣ ಪರಿಹಾರ ನಿಧಿನಿಂದ ೨೩.೨೪ ಲಕ್ಷ ರೂ. ಜಮಾ ಮಾಡಲಾಗಿದೆ. ಇದರಿಂದ ಸಾಲ ಪಡೆದ ಶೇರುದಾರರಿಗೆ ಅನುಕೂಲವಾದಂತಾಗಿದೆ ಎಂದಿದ್ದಾರೆ.
ಇದನ್ನೂ ಓದಿ : ಶರಾವತಿ ಉದ್ದೇಶಿತ ಯೋಜನೆಗಳ ವಿರುದ್ಧ ಹೋರಾಟಕ್ಕೆ ಸಜ್ಜು
ಮುಖ್ಯ ಕಾರ್ಯನಿರ್ವಾಹಕ ರಮೇಶ ನಾಯ್ಕ ವರದಿ ಮಂಡಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ನಾರಾಯಣ ದೇವಾಡಿಗ ನಿರ್ದೇಶಕರಾದ, ಪರಮೇಶ್ವರ ನಾಯ್ಕ, ವೆಂಕಟ್ರಮಣ ಮೊಗೇರ, ಗಣೇಶ ನಾಯ್ಕ, ಮಾದೇವ ನಾಯ್ಕ, ಗಣಪತಿ ನಾಯ್ಕ, ದಿನೇಶ ಗೊಂಡ, ಶ್ರೀನಿವಾಸ ನಾಯ್ಕ, ವಿಲಿಯಂ ಲೂಯಿಸ್, ನೀಲಾ ನಾಯ್ಕ, ಚಂದ್ರಿಕಾ ನಾಯ್ಕ, ಶ್ರೀಧರ ನಾಯ್ಕ ಮತ್ತು ಸಂಘದ ಶೇರುದಾರರು ಉಪಸ್ಥಿತರಿದ್ದರು.
ಸಂಘದ ವಾರ್ಷಿಕ ಸಭೆಯ ವಿಡಿಯೋವನ್ನು ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್‌ಬುಕ್ ನಲ್ಲಿ ವೀಕ್ಷಿಸಬಹುದು.
ಇದನ್ನೂ ಓದಿ : ದಿನಕರ ದೇಸಾಯಿ ಸಂಸ್ಮರಣೆ ಯಶಸ್ವಿ