ಕಾರ್ಗಲ್ (ಸಾಗರ) : ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಈ ಹಿನ್ಮೆಲೆ ಆ.೧ರಿಂದ ಲಿಂಗನಮಕ್ಕಿ ಅಣೆಕಟ್ಟಿನಿಂದ ನೀರು ಬಿಡುಗಡೆ(water release) ಮಾಡಲಾಗುತ್ತಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಜು.೩೦ರ ಮಂಗಳವಾರ ಸಂಜೆ ೪ ಗಂಟೆಗೆ ಲಿಂಗನಮಕ್ಕಿ ಅಣೆಕಟ್ಟಿನ ಮಟ್ಟವು ೧೮೧೧.೨೫ ಅಡಿ ತಲುಪಿದೆ. ಪ್ರಸ್ತುತ ಒಳಹರಿವು ೮೯೫೦೦ ಕ್ಯೂಸೆಕ್ಸ್ ಇದೆ. ಹವಾಮಾನ ಇಲಾಖೆ ಮುನ್ಸೂಚನೆಯಂತೆ ಇನ್ನೂ ೩ ದಿನಗಳ ವರೆಗೆ ರೆಡ್ ಅಲರ್ಟ್ ನೀಡಲಾಗಿದೆ. ಹೀಗಾಗಿ ಪ್ರತಿ ದಿನಕ್ಕೆ ಸುಮಾರು ೮೦ ಸಾವಿರದಿಂದ ೯೦ ಸಾವಿರ ಕ್ಯೂಸೆಕ್ಸ್ ಒಳಹರಿವು ಬರುವ ಸಾಧ್ಯತೆ ಇದೆ.
ಇದನ್ನೂ ಓದಿ : ಚದುರಂಗ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ
ಈ ಪರಿಸ್ಥಿತಿಯು ಮುಂದುವರೆದಲ್ಲಿ ಅಣೆಕಟ್ಟು ಮಟ್ಟವು ಜುಲೈ ೩೧ರ ಬೆಳಿಗ್ಗೆ ೯ ಗಂಟೆಗೆ ೧೮೧೪ ಅಡಿ ತಲುಪುವುದು. ಈ ನಿಟ್ಟಿನಲ್ಲಿ ಲಿಂಗನಮಕ್ಕಿ ಅಣೆಕಟ್ಟಿನ ರೇಡಿಯಲ್ ಗೇಟ್ಗಳನ್ನು ಕಾರ್ಯಾಚರಣೆ ವಿಧಾನದ ಪ್ರಕಾರ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
ಇದನ್ನೂ ಓದಿ : ಪ್ರಾಥಮಿಕ ಶಾಲಾ ಶಿಕ್ಷಕಿ ನಿಧನ
ಆ.೧ ರ ಬೆಳಿಗ್ಗೆ ೧೦ ಗಂಟೆಯಿಂದ ೧೦ ಸಾವಿರ ಕ್ಯೂಸೆಕ್ಸ್ಗಳೊಂದಿಗೆ ನೀರನ್ನು ಹೊರಬಿಡಲು(water release) ಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಲಿಂಗನಮಕ್ಕಿ ಜಲಾಶಯದ ಕೆಳಗಿನ ಪ್ರದೇಶಗಳಲ್ಲಿ ಕೆಪಿಸಿಎಲ್ ಧ್ವನಿವರ್ಧಕ ಮೂಲಕ ಸಾರ್ವಜನಿಕರಿಗೆ ಪ್ರವಾಹ ಎಚ್ಚರಿಕೆ ಪ್ರಕಟಣೆಯನ್ನು ನೀಡಿದೆ.
ಇದನ್ನೂ ಓದಿ : ಮಾರಿಯಮ್ಮ ಸಾಗುವ ರಸ್ತೆ ದುರಸ್ತಿ ಮಾಡಿ
ಒಳಹರಿವಿನ ಆಧಾರದ ಮೇಲೆ ನೀರಿನ ಬಿಡುಗಡೆಯನ್ನು ಹೆಚ್ಚಿಸಲಾಗುತ್ತದೆ. ಗೇರುಸೊಪ್ಪ ಜಲಾಶಯವು ನೀರಿನ ಸಂಗ್ರಹವನ್ನು ಗರಿಷ್ಠ ಮಟ್ಟದಲ್ಲಿ ಕಾಪಾಡಿ ವಿದ್ಯುತ್ ಉತ್ಪಾದಿಸುವ ಜಲಾಶಯವಾಗಿದೆ. ಸಂಗ್ರಹಣಾ ಸಾಮರ್ಥ್ಯವು ಕಡಿಮೆಯಿರುವುದರಿಂದ, ಲಿಂಗನಮಕ್ಕಿ ಜಲಾಶಯದಿಂದ ಹೆಚ್ಚುವರಿಯಾಗಿ ಹೊರಬಿಟ್ಟ ನೀರನ್ನು ಗೇರುಸೊಪ್ಪ ಜಲಾಶಯದಲ್ಲಿ ಸಂಗ್ರಹಿಸಲು ಅವಕಾಶವಿಲ್ಲ. ಆದ್ದರಿಂದ ಅಣೆಕಟ್ಟೆಯ ಸುರಕ್ಷತೆಯ ದೃಷ್ಠಿಯಿಂದ ಹೆಚ್ಚುವರಿ ನೀರನ್ನು ಜಲಾಶಯದಿಂದ ಹೊರಬಿಡಲಾಗುವುದು ಎಂದು ಕೆಪಿಸಿಎಲ್ ತಿಳಿಸಿದೆ.
ಇದನ್ನೂ ಓದಿ : ಜುಲೈ ೩೦ರಂದು ವಿವಿಧೆಡೆ ಅಡಿಕೆ ಧಾರಣೆ