ಭಟ್ಕಳ : ತಾಲೂಕಿನ ಹಾಡುವಳ್ಳಿಯಲ್ಲಿ ನಿನ್ನೆ ಶುಕ್ರವಾರ ಸಂಜೆ ಭಾರೀ ಗಾಳಿ-ಮಳೆಗೆ(wind and rain) ತೋಟ ಮತ್ತು ಮನೆಗಳಿಗೆ ಹಾನಿಯಾಗಿದೆ(Farm-house damage).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್  ಫಾಲೋವ್ ಮಾಡಲು ಇಲ್ಲಿ ಒತ್ತಿ.

ಭಟ್ಕಳ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದೆ. ಸಹ್ಯಾದ್ರಿ ತಪ್ಪಲಲ್ಲಿ ಇರುವ ಜನರ ಪರಿಸ್ಥಿತಿ ಹೇಳತೀರದಾಗಿದೆ.

ಇದನ್ನೂ ಓದಿ : ಗಡಿ ಹದ್ದುಬಸ್ತ್ ಸರ್ವೆಗೆ ಹೋದವನ ಮೇಲೆ ಹಲ್ಲೆ

ಶುಕ್ರವಾರ ಸಂಜೆ ಭಾರೀ ಗಾಳಿ-ಮಳೆಗೆ(wind and rain) ಹಾಡುವಳ್ಳಿಯಲ್ಲಿ ಅನಾಹುಗಳಾಗಿವೆ. ತೆಂಗು, ಅಡಿಕೆ ಮರಗಳು ನೆಲಕಚ್ಚಿವೆ. ಮನೆಗಳು ಹಾನಿಗೊಳಗಾಗಿವೆ. ಹಲ್ಯಾಣಿಯ ಮಂಜುನಾಥ ಕುಪ್ಪಯ್ಯ ನಾಯ್ಕ ಎಂಬುವವರ ತೋಟ ನಾಶವಾಗಿದೆ. ಸಂಜೆ ೬ ಗಂಟೆಯ ಸುಮಾರಿಗೆ ಭಾಳಿ ಗಾಳಿ ಬೀಸಿದ್ದರಿಂದ ೧ ಎಕರೆ ೧೨ ಗುಂಟೆ ಜಾಗದಲ್ಲಿ ಬೆಳೆದ ತೆಂಗು ಮತ್ತು ಅಡಿಕೆ ಮರಗಳು ತುಂಡಾಗಿ ಬಿದ್ದಿವೆ.

ಇದನ್ನೂ ಓದಿ : ಮುಂದಿನ ಮೂರು ಗಂಟೆಗಳಲ್ಲಿ ಬಿರುಗಾಳಿ ಸಹಿತ ಮಳೆ

ಹಿರೇಬೀಳು ಬುಡ್ಡ ಮಂಗಳ ಗೊಂಡ ಅವರ ಮನೆಗೂ ಹಾನಿಯಾಗಿದೆ. ಇವರ ಅಡಿಕೆ ತೋಟವೂ ನಾಶವಾಗಿದೆ. ಅಣ್ಣಪ್ಪ ನಾರಾಯಣ ನಾಯ್ಕ, ಗಣಪತಿ ನಾರಾಯಣ ನಾಯ್ಕ ಮತ್ತು ನಾಗೇಶ ನಾರಾಯಣ ನಾಯ್ಕ ಅವರ ಮನೆ ಮತ್ತು ತೋಟಕ್ಕೆ ಹಾನಿಯಾಗಿದೆ.

ಇದನ್ನೂ ಓದಿ : ಜಿಪಂ ಮಾಜಿ ಸದಸ್ಯ ಎಂ ಎಂ ನಾಯ್ಕ ಜಾಲಿ ನಿಧನ