ಭಟ್ಕಳ: ವ್ಯಕ್ತಿಯೋರ್ವ ಪದೇ ಪದೇ ಫೋನ್ ಮಾಡಿ ಮಾತನಾಡುತ್ತಿದ್ದ ವಿಚಾರವಾಗಿ ವಿವಾಹಿತ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ (Woman died).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ (Bhatkal) ನಗರದ ಮಣ್ಕುಳಿ ನಿವಾಸಿ ರೂಪಾ ಪುಂಡಲೀಕ ಪೈ (೩೬) ಮೃತ ಮಹಿಳೆ. ಈ ಕುರಿತು ಮೃತ ಮಹಿಳೆಯ ಸಹೋದರಿ ಕಾರ್ಕಳ ನಿವಾಸಿ ಸ್ಮಿತಾ ಮಂಜುನಾಥ ಹೆಗಡೆ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ದೂರಿನಲ್ಲಿ ತಿಳಿಸಿರುವಂತೆ, ರೂಪಾ ಅವರಿಗೆ ಮದುವೆಯಾಗಿ ೧೬ ವರ್ಷವಾಗಿದ್ದು, ಈಗ ಕಳೆದ ೨ ತಿಂಗಳಿಂದ ಮೂಡ ಭಟ್ಕಳದ ನಿವಾಸಿಯಾದ ರವಿಚಂದ್ರ ಎಮ್ ನಾಯ್ಕ ರೂಪಾ ಅವರಿಗೆ ಪೋನ ಮಾಡಿ ಮಾತನಾಡುತ್ತಿದ್ದರು. ಇದೇ ವಿಚಾರವಾಗಿ ಅವರ ಗಂಡ ‘ನೀನು ಅವನ ಜೊತೆಯಲ್ಲಿ ಪೋನಿನಲ್ಲಿ ಮಾತನಾಡುವುದು ಸರಿಯಲ್ಲ ನಮಗೆ ಮೂರು ಜನ ಮಕ್ಕಳಿದ್ದಾರೆ’ ಅಂತಾ ಹೇಳಿದ್ದಾರೆ.

appeal/ ಟ್ಯಾಕ್ಸಿ ಚಾಲಕರ ವಿರುದ್ಧ ಆಟೋರಿಕ್ಷಾ ಚಾಲಕರ ಅಸಮಾಧಾನ- ಶಹರ ಪೊಲೀಸ್ ಠಾಣೆಗೆ ಮನವಿ

ಆದರೂ ಸಹ ರವಿಚಂದ್ರ ಪದೇಪದೇ ಪೋನ ಮಾಡುತ್ತಿದ್ದು, ಇದೇ ವಿಚಾರವಾಗಿ ರೂಪಾ ಪುಂಡಲಿಕ ಪೈ ದಿನಾಂಕ ೧೪-೦೨-೨೦೨೬ರಂದು ಬೆಳಿಗ್ಗೆ ೧೧-೩೦ ಗಂಟೆಯಿಂದ ಮಧ್ಯಾಹ್ನ ೧-೦೦ ಗಂಟೆ ನಡುವಿನ ಅವಧಿಯಲ್ಲಿ ಮನೆಯ ಬೆಡ್ ರೂಮಿನ ಸಿಲಿಂಗ್ ಪ್ಯಾನ್‌ಗೆ ವೇಲ್ ಕಟ್ಟಿ ಅದೇ ವೇಲಿನಿಂದ ಕುತ್ತಿಗೆಗೆ ಉರುಳು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ (Woman died). ಇವರ ಮರಣದಲ್ಲಿ ರವಿಚಂದ್ರ ಎಮ್ ನಾಯ್ಕ ಮೇಲೆ ಸಂಶಯ ಇದ್ದು , ಈ ಬಗ್ಗೆ ಸೂಕ್ತ ತನಿಖೆ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ.

Shivaratri/ ತಂತ್ರಜ್ಞಾನದ ಮೊರೆ ಹೋದ ಮುರುಡೇಶ್ವರ ಪೊಲೀಸರು