ಭಟ್ಕಳ: ರಸ್ತೆಗೆ ಅಡ್ಡಲಾಗಿ ಬಂದ ಕಡವೆ ತಪ್ಪಿಸಲು ಹೋಗಿ ಬೈಕ್ ಸವಾರ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದಿದ್ದರಿಂದ (Woman hit by bike) ಪಾದಚಾರಿ ಮಹಿಳೆ ಗಂಭೀರ ಗಾಯಗೊಂಡು ಆಸ್ಪತೆಗೆ ದಾಖಲಾದ ಘಟನೆ ಮುರ್ಡೇಶ್ವರ ( ಪೊಲೀಸ್ ಠಾಣೆ ವ್ಯಾಪ್ತಿಯ ಬೈಲೂರಿನಲ್ಲಿ ನಡೆದಿದೆ. ಬೈಲೂರು ಮಡಿಕೇರಿಯ ಶೈಲಾ ನಾಗೇಶ ನಾಯ್ಕ (೪೩) ಗಾಯಗೊಂಡವರಾಗಿದ್ದು, ಬೈಕ ಸವಾರ ಮಡಿಕೇರಿಯ ಮೋಹನ ಮಂಜುನಾಥ ನಾಯ್ಕ ವಿರುದ್ಧ ಗಾಯಾಳು ಮಹಿಳೆಯ ಪುತ್ರ ಮಿಥುನ ತಂದೆ ನಾಗೇಶ ನಾಯ್ಕ (೨೨) ದೂರು ದಾಖಲಿಸಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮಾ ೧೧ರಂದು ಬೆಳಿಗ್ಗೆ ೬-೧೫ ಗಂಟೆಯ ಸಮಯಕ್ಕೆ ಬೈಲೂರು ರಸ್ತೆಯ ಮಾರ್ಕಂಡೇಶ್ವರ ರಸ್ತೆ ಸಮೀಪ ಒಮ್ಮೇಲೆ ಕಡವೆ ಪ್ರಾಣಿ ಅಡ್ಡ  ಬಂದಿದ್ದರಿಂದ ಸವಾರ ಒಮ್ಮೇಲೆ ಬ್ರೇಕ್ ಹಾಕಿದ್ದಾನೆ. ಬೈಕಿನ ನಿಯಂತ್ರಣ ತಪ್ಪಿ ರಸ್ತೆಯ ಮೇಲೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಬೈಕ್ ಡಿಕ್ಕಿ ಹೊಡೆದಿದೆ (Woman hit by bike). ಮಹಿಳೆ ಶೈಲಾ ರಸ್ತೆಯ ಮೇಲೆ ಬಿದ್ದಿದ್ದರಿಂದ ತಲೆಯ ಹಿಂಭಾಗಕ್ಕೆ, ಎಡ ಕಣ್ಣಿನ ಹತ್ತಿರ ಮತ್ತು ಎಡ ಕಿವಿಗೆ ಗಾಯಗಳಾಗಿವೆ. ಅತೀ ವೇಗ ಹಾಗೂ ದುಡುಕಿನಿಂದ ಬೈಕ್ ಚಲಾಯಿಸಿದ ಸವಾರನ ವಿರುದ್ಧ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ.

arrested/ ಅಕ್ರಮವಾಗಿ ಜಾನುವಾರು ಸಾಗಣೆ: ಮುಟ್ಟಳ್ಳಿ ಯುವಕ ವಶಕ್ಕೆ