ಗೋಕರ್ಣ(Gokarna): ವಿಪರೀತ ತಲೆನೋವಿನಿಂದ ಬಳಲುತ್ತಿದ್ದ ಮಹಿಳೆ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟ (Woman Died) ಘಟನೆ ಗೋಕರ್ಣ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕುಮಟಾ ತಾಲೂಕಿನ ಮಧ್ಯ ಹಿರೇಗುತ್ತಿಯಲ್ಲಿ ವಾಸವಾಗಿದ್ದ ರಮ್ಯಾ ರಮೇಶ ಆಚಾರಿ (೪೦) ಮೃತ ದುರ್ದೈವಿ. ಇವರು ಸೇಫ್‌ ಸ್ಟಾರ್‌ನಲ್ಲಿ ಫೀಲ್ಡ್‌ ವರ್ಕ್‌ ಮಾಡಿಕೊಂಡಿದ್ದರು. ವಿಪರೀತ ತಲೆನೋವಿನಿಂದ ಬಳಲುತ್ತಿದ್ದ ಇವರನ್ನು ನಿನ್ನೆ ಶನಿವಾರ ಸಂಜೆ ೬.೩೦ರ ಸುಮಾರಿಗೆ ಕುಮಟಾ (Kumta) ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ದಾರಿಮಧ್ಯ ಮಿರ್ಜಾನ ಹತ್ತಿರ ಆರೋಗ್ಯದಲ್ಲಿ ಏರುಪೇರಾಗಿ ಮೃತಪಟ್ಟಿದ್ದಾರೆ (Woman died).

ಇದನ್ನೂ ಓದಿ :  ಕದಂಬ ನೌಕಾನೆಲೆಯ ನಿವೃತ್ತ ನೌಕರ ನಾಪತ್ತೆ

ಈ ಕುರಿತು ಮೃತರ ತಾಯಿ ಮುರುಡೇಶ್ವರ (Murudeshwar) ಕಾಯ್ಕಿಣಿ ವಾಸಿ ಸರಸ್ವತಿ ಕಮಲಾಕರ ಆಚಾರಿ ಗೋಕರ್ಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಗಳ ಸಾವಿನಲ್ಲಿ ಯಾವುದೇ ಸಂಶಯವಿಲ್ಲ ಎಂದು ತಿಳಿಸಿರುವ ತಾಯಿ ಸರಸ್ವತಿ, ಮಗಳ ಸಾವಿನ ನಿಜವಾದ ಕಾರಣ ತಿಳಿಯಲು ಕಾನೂನಿನಂತೆ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ : ಸರ್ಕಾರಿ ಪಪೂ ಕಾಲೇಜಿಗೆ ಕಂಪ್ಯೂಟರ್‌ ಕೊಡುಗೆ