ಭಟ್ಕಳ (Bhatkal) : ಮಹಿಳೆಯರ ಕುರಿತ ಅಪಾರ ಕಾಳಜಿ, ಅವರ ರಕ್ಷಣೆಯ ಕುರಿತ ಕಳಕಳಿ ನಿಜಕ್ಕೂ ಪ್ರಶಂಶನೀಯ ಎಂದು ಬೀನಾ ವೈದ್ಯ ಸಂಸ್ಥೆಯ ಎಂ.ಡಿ. ಡಾ.ಪುಷ್ಪಲತಾ ವೈದ್ಯ ಶನಿವಾರ ಮುರ್ಡೇಶ್ವರ (Murdeshwar) ರೈಲ್ವೆ ನಿಲ್ದಾಣದಲ್ಲಿ (Railway station) ಹಾಂಗ್ಯೋ ಐಸ್ ಕ್ರೀಂ (Hangyo Icecream) ಸಂಸ್ಥೆ ನಿರ್ಮಿಸಿದ ಮಹಿಳಾ ಸುರಕ್ಷತಾ ಕ್ಯಾಬಿನ್ (Women’s cabin) ಉದ್ಘಾಟಿಸಿ ಮಾತನಾಡಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಹಾಂಗ್ಯೋ ಐಸ್ ಕ್ರೀಮ್ ಎಂ.ಡಿ. ಪ್ರದೀಪ ಪೈ ಅಂತರಾಷ್ಟ್ರೀಯ ಮಹಿಳಾ ದಿನದಂದು (Womens day) ಭಟ್ಕಳ ಹಾಗೂ ಮುರ್ಡೇಶ್ವರ (Murudeshwar) ರೈಲ್ವೆ ನಿಲ್ದಾಣದಲ್ಲಿ ಮಹಿಳೆಯರ ಸುರಕ್ಷತೆ ಕ್ಯಾಬಿನಗಳನ್ನು ನಿರ್ಮಿಸಿ ಮಹಿಳೆಯರಿಗೆ ಈ ಮೂಲಕ ಗೌರವ ಸಲ್ಲಿಸಿದ್ದಾರೆ. ಬದಲಾವಣೆ ನಮ್ಮ ಮನೆಯಿಂದಲೇ ಆಗಬೇಕು. ಮಹಿಳೆಯರಿಗೆ ಗೌರವ, ಸ್ವಾತಂತ್ರ್ಯ ಎಂದು ಎಲ್ಲರೂ ವೇದಿಕೆಯಲ್ಲಿ ಭಾಷಣ ಬಿಗಿಯುತ್ತಾರೆ. ಆದರೆ ಪ್ರದೀಪ ಪೈ ಅದನ್ನು ಕಾರ್ಯಗತಗೊಳಿಸಿ ತಮ್ಮ ಪತ್ನಿ ಹಾಗೂ ಸೊಸೆಯನ್ನು ತಮ್ಮ ವ್ಯವಹಾರ, ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಮುಕ್ತ ಅವಕಾಶ ನೀಡಿದ್ದಾರೆ ಎಂದು ಡಾ.ಪುಷ್ಪಲತಾ ವೈದ್ಯ ಹೇಳಿದರು.

ಇದನ್ನೂ ಓದಿ : Ernad Express / ಎರ್ನಾಡ್‌ ಎಕ್ಸ್‌ಪ್ರೆಸ್‌ ರೈಲು ವಿಸ್ತರಣೆಗೆ ಆಗ್ರಹ

ಸೀನಿಯರ್ ರೈಲ್ವೆ ಟ್ರಾಫಿಕ್ ವ್ಯವಸ್ಥಾಪಕ ದಿಲೀಪ ಭಟ್ ಮಾತನಾಡಿ, ಮುರ್ಡೇಶ್ವರದಂತಹ ಪ್ರದೇಶದಲ್ಲಿ ಇಂತಹ ಒಂದು ಕ್ಯಾಬಿನ್‌ ಅವಶ್ಯಕತೆಯನ್ನು ಮನಗೊಂಡು ಹಾಂಗ್ಯೋ ಐಸ್ ಕ್ರೀಂನ ಸಂಸ್ಥೆ ಇಂತಹದೊಂದು ಸುರಕ್ಷತಾ ವಿಧಾನವನ್ನು ಮಹಿಳೆಯರಿಗೆ ಕಲ್ಪಿಸಿಕೊಟ್ಟಿದ್ದು ಅಭಿನಂದನೀಯ. ಮುಂದೆಯೂ ಅವರಿಂದ ಇಂತಹ ಕಾರ್ಯಗಳು ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.

ಇದನ್ನೂ ಓದಿ : Vardhanthi/ ವಾರ್ಷಿಕ ವರ್ಧಂತ್ಯುತ್ಸವ ೧೧ರಂದು

ರೈಲ್ವೆ ಇಲಾಖೆಯ ಎಟಿಎಂ (ATM) ಮೀನಾ ಶುಭ ಹಾರೈಸಿದರು. ಭಟ್ಕಳದಲ್ಲಿಯೂ ಹಾಂಗ್ಯೋ ಮಹಿಳಾ ಸುರಕ್ಷತಾ ಕ್ಯಾಬಿನ್  (Women’s cabin) ಅನ್ನು ವೀಣಾ ಗಣಪತಿ ಲೋಕಾರ್ಪಣೆ ಮಾಡಿದರು. ಭಟ್ಕಳ ರೈಲ್ವೆ ಸ್ಟೇಶನ್ ಮಾಸ್ಟರ್ ಪಾರ್ವತಿ ದೇವಾಡಿಗ, ಜಿಎಸ್‌ಬಿ (GSB)  ಮಹಿಳಾ ಮಂಡಳದ ಅಧ್ಯಕ್ಷೆ ಸುನೀತ ಪೈ, ರಜನಿ ಪ್ರಭು, ವಿಜಯ ಪ್ರಭು, ಸುಜಾತ ಕಾಮಕರ್, ಸೀಮಾ ಕಾಮತ, ನೀತಾ ಕಾಮತ, ಆಶಾ ಪೈ, ನೀತಾ ನಾಗರಾಜ ಕಾಮತ ಜೆಎಸ್‌ಬಿ ಸಮಾಜದ ಮುಖಂಡರಾದ ರಾಜೆಶ ನಾಯಕ, ಅಚ್ಯುತ್ ಕಾಮತ, ರಾಮು ಕಾಮತ, ಗಣಪತಿ ಪ್ರಭು, ಪ್ರಸನ್ನ ನಾಯಕ, ಗೋಪಾಲಕೃಷ್ಣ ಭಟ್, ದತ್ತು ಸೇರಿದಂತೆ ಇತರರು ಇದ್ದರು.

ಇದನ್ನೂ ಓದಿ : Turtle/ ಕಡಲು ಸೇರಿದ ಆಮೆ ಮರಿಗಳು