ಭಟ್ಕಳ: ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ (Shri Guru Sudhindra College) ಜರುಗಿದ ವರ್ಡ್ ಪ್ರೆಸ್ ಕ್ಯಾಂಪಸ್ ಕನೆಕ್ಟ್ (WordPress Campus Connect) ಉಡುಪಿ ಕಾರ್ಯಕ್ರಮದಲ್ಲಿ ಸುಮಾರು ೫೦ ಬಿಸಿಎ ವಿದ್ಯಾರ್ಥಿಗಳು (BCA Students) ಉತ್ಸಾಹದಿಂದ ಪಾಲ್ಗೊಂಡರು. ವಿದ್ಯಾರ್ಥಿಗಳು ತಮ್ಮ ಮೊದಲ ಒನ್-ಪೇಜ್ ವೆಬ್‌ಸೈಟ್‌ನ್ನು (website) ತಾವು ನಿರ್ಮಿಸುವ ಅನುಭವವನ್ನು ಪಡೆದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಶಿಕಾಂತ್ ಶೆಟ್ಟಿ, “ನಮ್ಮ ಉದ್ದೇಶ ವಿದ್ಯಾರ್ಥಿಗಳಿಗೆ ವೆಬ್‌ನಲ್ಲಿ ಸೃಜನಶೀಲರಾಗುವ ಆತ್ಮವಿಶ್ವಾಸ ಮತ್ತು ಕೌಶಲ್ಯ ನೀಡುವುದು. ಇಂದು ೫೦ ವಿದ್ಯಾರ್ಥಿಗಳು ತಮ್ಮ ಮೊದಲ ವೆಬ್‌ಸೈಟ್ ನಿರ್ಮಿಸಿರುವುದನ್ನು ನೋಡುವುದು ತುಂಬಾ ಪ್ರೇರಣಾದಾಯಕ. ಈ ಕಾರ್ಯಕ್ರಮವನ್ನು ಇನ್ನಷ್ಟು ವಿದ್ಯಾಸಂಸ್ಥೆಗಳಿಗೆ ತಲುಪಿಸುವ ಗುರಿ ನಮ್ಮದು” ಎಂದು ಹೇಳಿದರು.

ಇದನ್ನು ಓದಿ: Annual prize distribution/ ಜ್ಞಾನೇಶ್ವರಿ ಬಿ ಎಡ್ ಕಾಲೇಜಿನಲ್ಲಿ ವಾರ್ಷಿಕ ಬಹುಮಾನ ವಿತರಣೆ 

ವರ್ಡ್ ಪ್ರೆಸ್ (WordPress Campus Connect) ಉಡುಪಿ ಸಮುದಾಯದ ವತಿಯಿಂದ ಆಯೋಜಿಸಲಾದ ಈ ಕಾರ್ಯಕ್ರಮವನ್ನು ಶಶಿಕಾಂತ್ ಶೆಟ್ಟಿ, ಕೆ ಕೀರ್ತಿ ಪ್ರಭು ಮತ್ತು ವಿ ಗೌತಮ್ ನಾವಡ ನೇತೃತ್ವದಲ್ಲಿ ನಡೆಸಲಾಯಿತು. ಕಾರ್ಯಾಗಾರದ ಪ್ರಮುಖ ಮಾರ್ಗದರ್ಶಕರಾಗಿ ಓಂಕಾರ್ ಉಡುಪ (ಸಿಇಒ, ಕೋಟಿಸಾಫ್ಟ್ ಸೊಲ್ಯೂಷನ್ಸ್, ಕೋಟೇಶ್ವರ) ಮತ್ತು ಮಂಜುನಾಥ್ ಎಂ ಎಂ (ಸ್ಥಾಪಕ, ಯುಕ್ತಾ ಡಿಜಿಟಲ್ಸ್, ತೀರ್ಥಹಳ್ಳಿ) ಕಾರ್ಯನಿರ್ವಹಿಸಿದರು.

ಇದನ್ನು ಓದಿ: Degree result/ ಪದವಿ ಪರೀಕ್ಷೆಯಲ್ಲಿ ಶ್ರೀ ಗುರು ಸುಧೀಂದ್ರ ಕಾಲೇಜಿಗೆ ಉತ್ತಮ ಫಲಿತಾಂಶ

ಶ್ರೀ ಗುರು ಸುಧೀಂದ್ರ ಕಾಲೇಜಿನ (SGS College) ಪ್ರಾಚಾರ್ಯ ಶ್ರೀನಾಥ ಪೈ ಮಾತನಾಡಿ “ವರ್ಡ್ ಪ್ರೆಸ್ ಕ್ಯಾಂಪಸ್ ಕನೆಕ್ಟ್ (wordpress campus connect) ಒಂದು ಸಮುದಾಯ ಆಧಾರಿತ ಯೋಜನೆಯಾಗಿದೆ. ಜಗತ್ತಿನ ಹೆಚ್ಚಿನ ವೆಬ್‌ಸೈಟ್‌ಗಳನ್ನು ಚಲಾಯಿಸುತ್ತಿರುವ ಓಪನ್ ಸೋರ್ಸ್ ವೇದಿಕೆಯಾದ ವರ್ಡ್ ಪ್ರೆಸ್ ಅನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದು ಇದರ ಉದ್ದೇಶ. ಪ್ರಾಯೋಗಿಕ ಕಾರ್ಯಾಗಾರಗಳ ಮೂಲಕ ವಿದ್ಯಾರ್ಥಿಗಳು ವೆಬ್ ಅಭಿವೃದ್ಧಿ ಕೌಶಲ್ಯಗಳನ್ನು ಸಂಪಾದಿಸಿ, ಡಿಜಿಟಲ್ ವಲಯದಲ್ಲಿ ವೃತ್ತಿ ಅವಕಾಶಗಳನ್ನು ಅರಿಯಲು ಇದು ನೆರವಾಗುತ್ತದೆ” ಎಂದರು.

ಇದನ್ನು ಓದಿ: Anual day/ ಗುರು ಸುಧೀಂದ್ರ ಕಾಲೇಜಿನಲ್ಲಿ ವಾರ್ಷಿಕೋತ್ಸವ

ಬಿಸಿಎ ವಿಭಾಗದ ಉಪ ಪ್ರಾಚಾರ್ಯ ವಿಖ್ಯಾತ್ ಪ್ರಭು ಸ್ವಾಗತಿಸಿದರು, ಪ್ಲೇಸಮೆಂಟ್ ಅಧಿಕಾರಿ ವಿಜ್ಞೇಶ ಪ್ರಭು ವಂದಿಸಿದರು. ಲ್ಯಾಬ್ ನಿರ್ವಾಹಕ ರಾಘವೇಂದ್ರ ದೇವಾಡಿಗ ವಿದ್ಯಾರ್ಥಿಗಳಿಗೆ ತಾಂತ್ರಿಕ ನೆರವು ನೀಡಿದರು.

ಇದನ್ನು ಓದಿ: Table Tennis/ ಸುಧೀಂದ್ರ ಕಾಲೇಜಿನಲ್ಲಿ ಟೇಬಲ್‌ ಟೆನ್ನಿಸ್‌ ಪಂದ್ಯಾವಳಿ