ಹೊನ್ನಾವರ (Honnavar) : ತಾಲೂಕಿನ ಚಿಕ್ಕನಕೋಡ ಪಂಚಾಯತ ಹೊಸಕೋಡನಲ್ಲಿ ಸೇತುವೆ (Bridge) ನಿರ್ಮಾಣಕ್ಕೆ ಶಂಕುಸ್ಥಾಪನೆ (foundation stone) ನೆರವೇರಿಸಿ ೨ ವರ್ಷವೇ ಕಳೆದರೂ ಈವರೆಗೆ ಕಾಮಗಾರಿ ಆರಂಭವಾಗಿಲ್ಲ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಲೋಕೋಪಯೋಗಿ ಇಲಾಖೆಯ ೨೦೨೧-೨೨ನೇ ಸಾಲಿನ ಅಪೆಂಡಿಕ್ಸ್ ʼಇʼ ಅಡಿಯಲ್ಲಿ ಹೊನ್ನಾವರ ತಾಲೂಕಿನ ಚಿಕ್ಕನಕೋಡ ಪಂಚಾಯತ ವ್ಯಾಪ್ತಿಯ ಹೊಸಕೋಡನಲ್ಲಿರುವ ನಾಗರಹೊಳೆ ಹಳ್ಳಕ್ಕೆ ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ೧.೫ ಕೋಟಿ ರೂ. ವೆಚ್ಚದ ಈ ಕಾಮಗಾರಿಗೆ ೨೦೨೨ರ ಡಿ.೧೭ರಂದು ಭಟ್ಕಳ ವಿಧಾನಸಭಾ ಕ್ಷೇತ್ರದ ಅಂದಿನ ಶಾಸಕ ಸುನೀಲ ಬಿ.ನಾಯ್ಕ (Ex MLA Sunil Naik) ಶಂಕುಸ್ಥಾಪನೆ ನೆರವೇರಿಸಿದ್ದರು. ಅಂಕೋಲಾದ (Ankola) ಗುತ್ತಿಗೆದಾರ ಮಂಜುನಾಥ ಎಲ್. ನಾಯ್ಕ ಎಂಬುವವರು ಈ ಕಾಮಗಾರಿಯ ಗುತ್ತಿಗೆದಾರರು ಎಂಬುದು ಅಲ್ಲಿನ ಫಲಕವೊಂದು ಹೇಳುತ್ತಿದೆ.
ಇದನ್ನೂ ಓದಿ : Special Train/ ಬೆಂಗಳೂರು ಮೂಲಕ ಮೈಸೂರು ಮತ್ತು ಕಾರವಾರ ನಡುವೆ ವಿಶೇಷ ರೈಲು ಸಂಚಾರ
ಆದರೆ ಕಾಮಗಾರಿ ಮಾತ್ರ ಇನ್ನೂ ಆರಂಭವಾಗಿಲ್ಲ. ಕಾಮಗಾರಿ ಆರಂಭವಾಗುವ ಹಂತದಲ್ಲಿಯೇ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾಗಿತ್ತು. ಚುನಾವಣೆಯ ನಂತರ ಬಿಜೆಪಿಯ (BJP) ಸುನೀಲ ನಾಯ್ಕ ಸೋತು, ಕಾಂಗ್ರೆಸ್‌ನ (Congress) ಮಂಕಾಳ ವೈದ್ಯ (Mankal Vaidya) ಶಾಸಕರಾಗಿ ಗೆದ್ದು ಬಂದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಈ ಕಾಮಗಾರಿಗೆ ಶನಿ ದೆಸೆ ಬಂದೊದಗಿದೆ. ಶಾಸಕರಾದ ಮಂಕಾಳ ವೈದ್ಯ ಸಚಿವರಾಗಿದ್ದರೂ ಅವರ ಸ್ವಕ್ಷೇತ್ರದಲ್ಲಿಯೇ ಕಾಮಗಾರಿಯೊಂದು ಮೂಲೆಗುಂಪಾಗಿದೆ. ರಾಜಕೀಯ ಮೇಲಾಟಕ್ಕೆ ಈ ಕಾಮಗಾರಿ ನಿಂತಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : Academy Award/ ಉತ್ತರ ಕನ್ನಡಕ್ಕೆ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
೨ ವರ್ಷದ ಹಿಂದೆ ಚುನಾವಣೆ ಪೂರ್ವದಲ್ಲಿ ನಡೆದ ಶಂಕುಸ್ಥಾಪನೆ (foundation stone) ನೆರವೇರಿದ್ದರೂ ಇಲ್ಲೀ ತನಕ ಸೇತುವೆ ನಿರ್ಮಾಣ ಕಾಮಗಾರಿ ಪ್ರಾರಂಭವಾಗದೆ ಇರುವುದು ಆ ಭಾಗದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತುಂಬಾ ತೊಂದರೆಯಾಗಿದೆ ಎಂದು ಯಂಗ್ ಒನ್ ಇಂಡಿಯಾ ಸಂಸ್ಥಾಪಕ ಹಾಗೂ ಸಮಾಜ ಸೇವಕ ಮಾಸ್ತಪ ನಾಯ್ಕ ಹೇಳಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ರಾಜಕಾರಣಿಗಳು ಸುಳ್ಳು ಆಸ್ವಾಸನೆ ನೀಡುತ್ತಾರೆ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : Annual Sports/ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ
ರಾಜಕಾರಣಿಗಳು ಬಿಜೆಪಿ – ಕಾಂಗ್ರೆಸ್ ಎಂದು ಚುನಾವಣೆ ವೇಳೆಯಲ್ಲಿ ಮಾತ್ರ ಮಾಡಬೇಕು. ಚುನಾವಣೆ ಆದ ನಂತರ ಎಲ್ಲರನ್ನೂ ಒಂದೇ ರೀತಿ ನೋಡಬೇಕು. ಬೇಧ ಭಾವ ಮಾಡಬಾರದು. ಈ ಸೇತುವೆ ಶಂಕುಸ್ಥಾಪನೆ ಯಾರೇ ಮಾಡಿರಬಹುದು. ಆದರೆ ಈಗಿರುವ ಜನಪ್ರತಿನಿಧಿಗಳು ಈ ಸೇತುವೆ ನಿರ್ಮಾಣ ಮಾಡಿಕೊಟ್ಟರೆ ಆ ಭಾಗದ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗುತ್ತದೆ. ಸದ್ಯ ಆ ಭಾಗದ ಜನರು ಮೂಲಭೂತ ಸೌಕರ್ಯದಿಂದ ವಂಚಿತರಾಗಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : bike collide/ ಎಕ್ಟಿವಾಗೆ ಬೈಕ್ ಡಿಕ್ಕಿಯಾಗಿ ಇಬ್ಬರಿಗೆ ಗಾಯ
ಆ ಭಾಗದ ಮುಖಂಡ ಅಲ್ಲಿರುವ ಸಮಸ್ಯೆಗಳನ್ನು ಪರಿಹಾರ ಮಾಡಿಕೊಂಡು ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಮಳೆಗಾಲದ ಪೂರ್ವದಲ್ಲಿ ಸೇತುವೆ ನಿರ್ಮಾಣ ಮಾಡಿಕೊಂಡು ಆ ಭಾಗದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡಿ. ಇಲ್ಲವಾದರೆ ಆ ಭಾಗದ ಜನಸಾಮಾನ್ಯರು ನಿಮ್ಮ ಮನೆಯ ಮುಂದೆ ಧರಣಿ ಕೂರಬಹುದು. ಅದಕ್ಕೆ ನನ್ನ ಸ್ವಂತ ಖರ್ಚಿನಲ್ಲಿ ಬಸ್ ವ್ಯವಸ್ಥೆ ಮಾಡಿಸಿ ಕೊಡುತ್ತೇನೆ. ದಯವಿಟ್ಟು ಇದರಲ್ಲಿ ರಾಜಕಾರಣ ಮರೆತು ಎಲ್ಲರೂ ಒಂದಾಗಿ ಈ ಭಾಗದ ಸೇತುವೆ ನಿರ್ಮಾಣ ಮಾಡಿಕೊಡಬೇಕು ಎಂದು ಮಾಸ್ತಪ್ಪ ನಾಯ್ಕ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ : Save life / “ನೀರು ನೀಡಿ-ಜೀವ ಉಳಿಸಿ” ಅಭಿಯಾನ