ಭಟ್ಕಳ (Bhatkal): ಕಳೆದ ೧೦ ವರ್ಷಗಳಿಂದ ಬೆಂಗಳೂರಿನಲ್ಲಿ (Bengaluru) ಚಿಕ್ಕ ಪ್ರಮಾಣದಲ್ಲಿ ಆಚರಿಸುತ್ತಿದ್ದ ವಿಶ್ವ ಮೀನುಗಾರಿಕಾ ದಿನವನ್ನು ಈ ವರ್ಷ ನವೆಂಬರ ೨೧ ರಿಂದ ೨೩ರ ತನಕ ಮೂರು ದಿನಗಳ ಕಾಲ ಮುರುಡೇಶ್ವರ (Murdeshwar) ಗಾಲ್ಪ್ ರೆಸಾರ್ಟನಲ್ಲಿ (Golf Resort) ನಡೆಯಲಿದೆ. ಎಲ್ಲಾ ಮೀನುಗಾರರ ಸಮ್ಮುಖದಲ್ಲಿ ನಡೆಸಲು ಉದ್ದೇಶದೊಂದಿಗೆ ಕರಾವಳಿಯಲ್ಲಿ (Coastal) ಈ ದಿನಾಚರಣೆ ನಡೆಯಲಿದ್ದು, ಇದರೊಂದಿಗೆ ಮತ್ಸ್ಯ ಮೇಳವನ್ನು (Fish Festival) ಸಹ ಆಯೋಜಿಸಲಾಗುತ್ತಿದೆ ಎಂದು ಉತ್ತರ ಕನ್ನಡ (Uttara Kannada) ಜಿಲ್ಲಾ ಉಸ್ತುವಾರಿ ಸಚಿವ, ಮೀನುಗಾರಿಕಾ ಸಚಿವ ಮಂಕಾಳ ಎಸ್. ವೈದ್ಯ ಹೇಳಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅವರು ತಾಲೂಕಿನ ಮುರುಡೇಶ್ವರದ (Murudeshwar) ಆರ್.ಎನ್.ಎಸ್. ಗಾಲ್ಪ್ ರೆಸಾರ್ಟನಲ್ಲಿ ಏರ್ಪಡಿಸಲಾದ ಸುದ್ದಿಗೋಷ್ಠಿಯಲ್ಲಿ ದಿನಾಚರಣೆ ಕುರಿತು ಮಾಹಿತಿ ನೀಡಿದರು. ಈ ಕಾರ್ಯಕ್ರಮದ ಉದ್ದೇಶ ಕೇವಲ ಮೀನುಗಾರಿಕಾ ದಿನಾಚರಣೆಯನ್ನು (world fisheries day) ಮಾಡದೆ ಮೀನುಗಳ ಸಂತತಿ ವೃದ್ಧಿ, ಅವುಗಳ ವಿಶೇಷತೆ, ಅವುಗಳ ಜಾತಿ ಹಾಗೂ ಅವುಗಳ ಸಂರಕ್ಷಣೆಯ ಕುರಿತಂತೆ ರಾಜ್ಯ ಎಲ್ಲಾ ಮೀನುಗಾರರಿಗೆ ಮತ್ತು ಕರಾವಳಿ ಭಾಗದ ಮೀನುಗಾರರಿಗೆ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ವಿಡಿಯೋ ಸಹಿತ ಇದನ್ನೂ ಓದಿ : Mankal Vaidya/ ನಾನು ತುಂಬಾ ಕಾಸ್ಟ್ಲಿ, 100 ಕೋಟಿ ಸಾಕಾಗೊಲ್ಲ
ನಮ್ಮ ಕರಾವಳಿಯ ಸಮುದ್ರದಲ್ಲಿನ ಮೀನುಗಳಷ್ಟೇ ಅಲ್ಲದೇ ರಾಜ್ಯದ ಒಳನಾಡಿನ ಸರೋವರ ನದಿಗಳಲ್ಲಿಯೂ ಸಹ ಭಿನ್ನ ಬಗೆಯ ಮೀನುಗಳಿದ್ದು ಇದರ ಜೊತೆಗೆ ಚಿಪ್ಪುಕಲ್ಲುಗಳ ಸಾಕಾಣಿಕೆ, ಮಾರಾಟದ ಬಗ್ಗೆಯೂ ಮಾಹಿತಿ ತಿಳಿಸಲಿದ್ದೇವೆ. ಈಗ ಕೇವಲ ಮೀನುಗಳನ್ನು ಖಾದ್ಯವಾಗಿ ಮಾತ್ರ ಬಳಸುತ್ತಿಲ್ಲ ಮನೆಯಲ್ಲಿ ವಿಭಿನ್ನ ಬಗೆಯ ಮೀನುಗಳು ಅಕ್ವೇರಿಯಂಗಳಲ್ಲಿ ಸಾಕುತ್ತಿದ್ದಾರೆ. ಮೀನು ಕೃಷಿಗೂ ಸಹ ಹೆಚ್ಚಿನ ಒತ್ತು ಮತ್ತು ಪ್ರೋತ್ಸಾಹ ನೀಡುವ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ ಎಂದರು.
ಇದನ್ನೂ ಓದಿ : ಕ್ಷುಲ್ಲಕ ವಿಚಾರಕ್ಕೆ ಕುಟುಂಬಗಳ ಮಾರಾಮಾರಿ
ಮೂರು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮಕ್ಕೆ ಅಂದಾಜು ೫ ಲಕ್ಷ ಜನರು ರಾಜ್ಯದ ನಾನಾ ಕಡೆಗಳಿಂದ ಬರುವ ಸಾಧ್ಯತೆಗಳಿವೆ. ಕರಾವಳಿ ಸೇರಿದಂತೆ ರಾಜ್ಯದ ಒಳನಾಡು ಮೀನುಗಾರರು ಸಹ ಹೆಚ್ಚಿದ್ದು ಅವರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಮುಖ್ಯವಾಗಿ ಮೀನುಗಳ ಕುರಿತಾದ ಮಾಹಿತಿ ನೀಡುವ ಹಿನ್ನೆಲೆ ರಾಜ್ಯದ ವಿವಿಧ ಕಡೆಗಳಿಂದ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಇಲ್ಲಿ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರ ವೀಕ್ಷಣೆಗಾಗಿ ಮೀನಿನ ಸಂತತಿಗಳನ್ನು ಪರಿಚಯಿಸಲು ಚಿಪ್ಪೆಕಲ್ಲು ಮತ್ತು ಸಮುದ್ರ ಹಾಗೂ ನದಿಯಲ್ಲಿರುವ ಸುಮಾರು ೫೦೦ ವಿಧದ ಮೀನುಗಳನ್ನು ಪ್ರದರ್ಶನಕ್ಕೆ ಇಡುತ್ತಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ : ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ಧೆಯಲ್ಲಿ ಸಮಗ್ರ ವೀರಾಗ್ರಣಿ
೫೦೦೦ ಜನರಿಗೆ ಮೀನಿನ ವಿವಿಧ ಬಗೆಯ ಖಾದ್ಯವನ್ನು ತಯಾರಿಸಲಿದ್ದೇವೆ. ಖಾದ್ಯದ ಜೊತೆಗೆ ಮನರಂಜನೆಗಾಗಿ ಖ್ಯಾತ ಸಂಗೀತ ನಿರ್ದೇ ಅರ್ಜುನ ಜನ್ಯಾ, ಖ್ಯಾತ ನಿರೂಪಕಿ ಅನುಶ್ರೀ, ಖ್ಯಾತ ಗಾಯಕಿ ಶಮೀತಾ ಮಲ್ಯಾಡ್, ದಿವ್ಯ ರಾಮಚಂದ್ರ ಸೇರಿದಂತೆ ಇನ್ನು ಹಲವಾರು ಕಲಾವಿದರಿಂದ ಮನರಂಜನೆ ಕಾರ್ಯಕ್ರಮ ನಡೆಯಲಿದೆ. ಮತ್ತು ಸ್ಥಳೀಯವಾಗಿ ಇಲ್ಲಿನ ಝೇಂಕಾರ ಮೇಲೋಡಿಸ್ ತಂಡದಿಂದ ಆರ್ಕೆಸ್ಟ್ರಾ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ವಿಡಿಯೋ ಸಹಿತ ಇದನ್ನೂ ಓದಿ : ಇಬ್ಬರು ಮಕ್ಕಳ ಮೃತದೇಹ ಪತ್ತೆ
ಇದೇ ಸಂದರ್ಭದಲ್ಲಿ ೮೫೦ ಕೋಟಿ ರೂ.ವೆಚ್ಚದಲ್ಲಿ ಸಮುದ್ರದಲ್ಲಿ ಪ್ಲಾಸ್ಟಿಕ್ ತೆರವು ಮತ್ತು ವಿಲೇವಾರಿಯ ಬಗ್ಗೆ ರೂಪರೇಷೆಯನ್ನು ತಯಾರಿಸಲಾಗಿದೆ. ಈ ಕಾಮಗಾರಿಯಲ್ಲಿ ಸಮುದ್ರ ತೀರದ, ನದಿಯ ದಡದ, ಗ್ರಾಮ ಪಂಚಾಯತ, ಪುರಸಭೆ ವ್ಯಾಪ್ತಿಯ ಪ್ಲಾಸ್ಟಿಕ್ ಕಸಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡುವುದರ ಜೊತೆಗೆ ಅವುಗಳು ನದಿಗೆ ಮತ್ತು ಸಮುದ್ರಕ್ಕೆ ಸೇರದಂತೆ ವಿಲೇವಾರಿಯ ಮಾಡುವ ಉದ್ದೇಶ ಹೊಂದಿದ್ದು ಸಮುದ್ರಕ್ಕೆ ಸೇರಿದ ಪ್ಲಾಸ್ಟಿಕಗಳನ್ನು ತೆಗೆದು ಅವುಗಳನ್ನು ಸಮರ್ಪಕವಾಗಿ ವಿಲೇವಾರಿಯ ಯೋಜನೆ ರೂಪಿಸಲಾಗಿದೆ ಎಂದರು.
ಇದನ್ನೂ ಓದಿ : ಪಾವಿನಕುರ್ವೆ ಬಂದರು ಅಭಿವೃದ್ಧಿಗೆ ಜಾಗತಿಕ ಟೆಂಡರ್
ಕಾರ್ಯಕ್ರಮದಲ್ಲಿ ಮೀನುಗಾರಿಕೆ ಮತ್ತು ಮೀನುಗಾರರ ಅಭಿವೃದ್ಧಿಯ ದೃಷ್ಠಿಯಿಂದ ವಿಶೇಷ ಸೌಲಭ್ಯಗಳ ಘೋಷಣೆಯನ್ನು ಸಹ ಮಾಡಲಿದ್ದೇವೆ. ಒಟ್ಟಾರೆ ಈ ಕಾರ್ಯಕ್ರಮಕ್ಕೆ ಸರಕಾರ ೪-೫ ಕೋಟಿ ರೂ. ವೆಚ್ಚ ಮಾಡುತ್ತಿದೆ ಎಂದರು. ಈ ಸಂದರ್ಭದಲ್ಲಿ ರಾಜ್ಯ ಮೀನುಗಾರಿಕೆ ಇಲಾಖೆ (fisheries department) ನಿರ್ದೇಶಕ ದಿನೇಶಕುಮಾರ ಕೆ., ಭಟ್ಕಳ ಬ್ಲಾಕ್ ಕಾಂಗ್ರೆಸ್ (congress) ಅಧ್ಯಕ್ಷ ವೆಂಕಟೇಶ ನಾಯ್ಕ, ಪ್ರಧಾನ ಕಾರ್ಯದರ್ಶಿ ಸುರೇಶ ನಾಯ್ಕ ಸೇರಿದಂತೆ ಕಾಂಗ್ರೆಸ್ಸಿನ ಪ್ರಮುಖರು, ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಇದ್ದರು.
ಸುದ್ದಿಗೋಷ್ಠಿಯ ವಿಡಿಯೋವನ್ನು ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್ಬುಕ್ ನಲ್ಲಿ ವೀಕ್ಷಿಸಬಹುದು.