ಭಟ್ಕಳ (Bhatkal) : ತಾಲೂಕಿನ ತೆರ್ನಮಕ್ಕಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ (KPS) ವಿಶ್ವಮಾನವ ದಿನ (world human day) ಮತ್ತು ಸಾವಿತ್ರಿ ಬಾಯಿ ಪುಲೆಯವರ (Savitribai Phule) ಜನ್ಮ ದಿನವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ವಿಶ್ವಮಾನವ ಕುವೆಂಪು (Kuvempu) ಕನ್ನಡಕ್ಕೆ, ನಾಡಿಗೆ, ಕನ್ನಡ (Kannada) ಸಾಹಿತ್ಯ ಲೋಕಕ್ಕೆ ಕೊಟ್ಟ ಕೊಡುಗೆ ಮತ್ತು ವಿಶ್ವಕ್ಕೆ ನೀಡಿದ ಮಾನವ ಸಂದೇಶವನ್ನು ಮತ್ತು ಕುವೆಂಪುರವರ ಆದರ್ಶಗಳನ್ನು ಅವರ ಸಾಹಿತ್ಯಗಳ ಬಗ್ಗೆ ಚಿಂತನ-ಮಂಥನ ನಡೆಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಮಂಜುಳಾ ವಿ. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು. ಕುವೆಂಪುರವರ ಬರಹದ ಧ್ಯೇಯ ಮತ್ತು ಉದ್ದೇಶಗಳು, ತಾತ್ವಿಕ ಸಿದ್ಧಾಂತಗಳು ಅವರ ಕಲ್ಪನೆಯಲ್ಲಿ ವಿಶ್ವ ಮಾನವನಾಗುವ ಪರಿಕಲ್ಪನೆಯನ್ನು ಅವರ ಸಮಗ್ರ ಕಾವ್ಯ ಮತ್ತು ಅನೇಕ ಸಾಹಿತ್ಯಗಳನ್ನು ಆಧರಿಸಿ ಡಾ.ಮಂಜುಳಾ ಉಪನ್ಯಾಸ ನೀಡಿದರು.

ಇದನ್ನೂ ಓದಿ : ಕ್ರಿಕೆಟಿಗ ಮನೀಶ್‌ ಪಾಂಡೆ ಸ್ಕೂಬಾ ಡೈವಿಂಗ್‌

ಶಾಲೆಯ ವಿದ್ಯಾರ್ಥಿ ಚೈತ್ರಾ ವಿ. ಆಚಾರಿ ಮಾತನಾಡಿ, ಕುವೆಂಪುರವರ ವಿಶ್ವ ಮಾನವ ತತ್ವವನ್ನು ಸಾಧಿಸಲು ಬೇಕಾದ ಪಂಚಮಂತ್ರಗಳಾದ ಮನುಜ ಮತ, ವಿಶ್ವ ಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿಯ ಬಗ್ಗೆ ವಿವರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕುವೆಂಪುರವರ ಕವನ ವಾಚನ, ಕುವೆಂಪಯರವರ ಭಾವಗೀತೆಗಳನ್ನು ಹಾಡಿದರು.

ಇದನ್ನೂ ಓದಿ : ಗೊಂಡ ಜನರ ಮೇಲೆ ನಿರಂತರ ಕಿರುಕುಳ

ಶಾಲೆಯ ರಂಗಕಲಾ ಶಿಕ್ಷಣ ಶಿಕ್ಷಕ ಶ್ರೀಕಾಂತರವರ ರಚನೆ, ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ನೂರು ದೇವರನ್ನೆಲ ನೂಕಾಚೆ ದೂರ ಎಂಬ ರೂಪಕವನ್ನು ವಿದ್ಯಾರ್ಥಿಗಳು ಅಭಿನಯಿಸಿದರು. ವಿಶ್ವಮಾನವ ದಿನ (world human day) ಕಾರ್ಯಕ್ರಮದಲ್ಲಿ ಶಾಲೆಯ ಉಪ ಪ್ರಾಂಶುಪಾಲ ಪ್ರಶಾಂತ ಪಟಗಾರ, ಎಸ್ಡಿಎಂಸಿ ಅಧ್ಯಕ್ಷ ನಾಗೇಶ ನಾಯ್ಕ, ಸಹ ಶಿಕ್ಷಕರಾದ ಸುನಿತಾ ಗೊನ್ಸಾಲ್ವಿಸ್, ಗುಡ್ಡಪ್ಪ ಹರಿಜನ, ಎಸ್ಡಿಎಂಸಿ ಸದಸ್ಯರಾದ ಪದ್ಮಯ್ಯ ನಾಯ್ಕ, ಮಾರುತಿ ನಾಯ್ಕ, ಎಲ್ಲಾ ಶಾಲಾ ಶಿಕ್ಷರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

ಇದನ್ನೂ ಓದಿ :  ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ