ಮುಂಬೈ (Mumbai): ಯಕ್ಷಗಾನ (Yakshagana) ಭಾಗವತಿಕೆಯಲ್ಲಿ ತೊಡಗಿದ್ದಾಗಲೇ ಎದೆನೋವು (Heart pain) ಬಂದು ಉಡುಪಿ (Udupi) ಮೂಲದ ಕುಕ್ಕೆಹಳ್ಳಿ ವಿಠ್ಠಲ ಪ್ರಭು ವಿಧಿವಶರಾಗಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಶನಿವಾರ ಕುಕ್ಕೆಹಳ್ಳಿ ವಿಠ್ಠಲ ಪ್ರಭು ಅವರ ನಿರ್ದೇಶನದಲ್ಲಿ ಮುಂಬೈನ ದಾಸರ್‌ ಕಾಶಿಮಠದಲ್ಲಿ ಯಕ್ಷಗಾನ (Yakshagana) ನಡೆಯುತ್ತಿತ್ತು. ಭಾಗವತಿಕೆ ನಡೆಸುತ್ತಿದ್ದ ವೇಳೆ ಎದೆ ನೋವು ಬಂದ ಕಾರಣ ಬೇರೊಬ್ಬ ಭಾಗವತರಿಗೆ ಭಾಗವತಿಕೆ ಒಪ್ಪಿಸಿದ್ದರು. ಅದಾದ ಕೆಲವೇ ಕ್ಷಣಗಳಲ್ಲಿ ಅವರು ಇಹಲೋಕ ತ್ಯಜಿಸಿದರು. ಮೂಲ ಮನೆಯಾದ ಉಡುಪಿ ಕುಕ್ಕೆಹಳ್ಳಿಯ ಮುಂಗ್ರಿಬೈಲುನಲ್ಲಿ ಮೃತರ ಅಂತ್ಯ ಸಂಸ್ಕಾರ ನಡೆದಿದೆ.

ಇದನ್ನೂ ಓದಿ : ಕೈಗಾದಲ್ಲಿ ಇನ್ನೊಂದು ಬಸ್ಸಿಗೆ ಬೆಂಕಿ

ಮುಂಬೈಯಲ್ಲಿ ಯಕ್ಷಗಾನ ಪರಿಚಯಿಸಲು ಕುಕ್ಕೆಹಳ್ಳಿ ವಿಠ್ಠಲ ಪ್ರಭು ತಮ್ಮದೇ  ತಂಡ ಕಟ್ಟಿಕೊಂಡು ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಸುತ್ತಿದ್ದರು. ಯಕ್ಷಗಾನ ನಿರ್ದೇಶನ, ಪಾತ್ರಧಾರಿಕೆ, ತಾಳಮದ್ದಳೆ ಹೇಳಿಕೊಡುತ್ತಿದ್ದರು. ಮರಾಠಿ (Marathi) ಮತ್ತು ಕೊಂಕಣಿ (Konkani) ಭಾಷೆಗಳಲ್ಲೂ ಯಕ್ಷಗಾನ ಹೇಳಿಕೊಡುತ್ತಿದ್ದರು.

ಇದನ್ನೂ ಓದಿ :  ಅಂತಾರಾಜ್ಯ ದರೋಡೆಕೋರರಿಗೆ ಗುಂಡೇಟು