ಭಟ್ಕಳ (Bhatkal) : ಗಾಂಜಾ ಸೇವಿಸಿದ ವ್ಯಕ್ತಿಯೊಬ್ಬನನ್ನು ಭಟ್ಕಳ ಶಹರ ಠಾಣೆ ಪೊಲೀಸರು ಬಂಧಿಸಿ (Arrest) ಕ್ರಮಕೈಗೊಂಡಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ ತಾಲೂಕಿನ ಬಿಲಾಲಖಂಡದ ಗುಳ್ಮಿ ನಿವಾಸಿ ಮಹ್ಮದ್‌ ರಯ್ಯಾನ್‌ ಮಹ್ಮದ್‌ ಶಬ್ಬೀರ್‌ (೨೦) ಆರೋಪಿಯಾಗಿದ್ದಾನೆ. ಕೂಲಿ ಕೆಲಸ ಮಾಡಿಕೊಂಡಿರುವ ಈತ ಆಸರಕೇರಿಯ ಪಶುಪತಿ ದೇವಸ್ಥಾನದ ಹತ್ತಿರ ಈತನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈತನ ಬಾಯಿಂದ ಯಾವುದೋ ಘಾಟು ವಾಸನೆ ಬರುತ್ತಿದ್ದರಿಂದ ಮಾದಕ ಸೇವನೆ ಮಾಡಿದ ಸಂಶಯದ ಮೇಲೆ ಪಿಎಸೈ ನವೀನ ಎಸ್‌.ನಾಯ್ಕ ವಶಕ್ಕೆ ಪಡೆದಿದ್ದರು.

ಇದನ್ನೂ ಓದಿ :   ಮದ್ಯ ಸೇವಿಸಿ ಬೈಕ್‌ ಚಲಾಯಿಸಿದವಗೆ ಬಿತ್ತು ದಂಡ

ವಿಚಾರಣೆಯಲ್ಲಿ ಈತ ಗಾಂಜಾ ಸೇವನೆ ಮಾಡಿದ್ದನ್ನು ಒಪ್ಪಿಕೊಂಡಿದ್ದ. ಕುಂದಾಪುರದ (Kundapur) ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಭಟ್ಕಳ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈತನನ್ನು ಬಂಧನಕ್ಕೊಳಪಡಿಸಿ (Arrest) ಮುಂದಿನ ಕ್ರಮಕೈಗೊಳ್ಳಲಾಗಿದೆ.

ಇದನ್ನೂ ಓದಿ : ಬಹರೇನ್‌ನಲ್ಲಿ ಭಟ್ಕಳದ ಕಲಾವಿದನ ಪ್ರದರ್ಶನ