ಭಟ್ಕಳ: ತಾಲೂಕಿನ ಜಾಲಿಯಲ್ಲಿ ನಡೆದಿದ್ದ ಕಾರ್ಯಕ್ರಮದ ವೇಳೆ ಅಡುಗೆ ಮಾಡುತ್ತಿದ್ದ ಯುವಕ ಆಕಸ್ಮಿಕವಾಗಿ ಕುಸಿದು (Young man collapsed) ಮೃತಪಟ್ಟ ಘಟನೆ ಸೆಪ್ಟೆಂಬರ್ 18ರಂದು ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ದಕ್ಷಿಣ ಕನ್ನಡ (dakshina Kannada) ಜಿಲ್ಲೆಯ ಮೂಡುಬಿದಿರೆ (moodbidre) ಬಡಗಮಿಜಾರದ ಮಂಜುನಾಥ ನಗರದ ಶರತ್ ಕೃಷ್ಣ ಆಚಾರ್ಯ (25) ಮೃತ ದುರ್ದೈವಿ. ಕಾರ್ಯಕ್ರಮದ ಅಡುಗೆ ಸಿದ್ಧಪಡಿಸುತ್ತಿದ್ದಾಗ ದೇಹದಲ್ಲಿ ಏರುಪೇರಾಗಿ ನೆಲಕ್ಕುರುಳಿದ ಶರತ್ ನನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಿದರೂ ಜೀವ ಉಳಿಯಲಿಲ್ಲ (Young man collapsed).

ಇದನ್ನು ಓದಿ: Welcome/ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ 

ಹೃದಯ ಸಂಬಂಧಿ ತೊಂದರೆ ಅಥವಾ ದೇಹದಲ್ಲಿ ಏಕಾಏಕಿ ಉಂಟಾದ ಏರುಪೇರೇ ಸಾವಿಗೆ ಕಾರಣವಾಗಿರಬಹುದೆಂದು ಪ್ರಾಥಮಿಕ ಅಂದಾಜು. ಸಾವಿನಲ್ಲಿ ಯಾವುದೇ ಸಂಶಯವಿಲ್ಲವೆಂದು ಕುಟುಂಬಸ್ಥರು ಸ್ಪಷ್ಟಪಡಿಸಿದ್ದಾರೆ. ಭರತ್ ಬಿ ಭಾಸ್ಕರ ಆಚಾರ್ಯ ಭಟ್ಕಳ (Bhatkal) ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ (case filed).

ಇದನ್ನು ಓದಿ: Bhatkal bone case/ ಭಟ್ಕಳ ಪುರಸಭೆ ಮುಖ್ಯಾಧಿಕಾರಿ ಸುಳ್ಳು ದೂರು ಕೊಟ್ರಾ?