ಅಂಕೋಲಾ (Ankola) : ಅಪಘಾತದಲ್ಲಿ (Accident) ಗಾಯಗೊಂಡ ಬೈಕ್ ಸವಾರನೊಬ್ಬ (Bike rider) ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಟದಲ್ಲಿಯೇ ಕೊನೆಯುಸಿರೆಳೆದ ಘಟನೆ ನಡೆದಿದೆ. ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಒಂದು ಸುಸಜ್ಜಿತ ಆಸ್ಪತ್ರೆ ಇಲ್ಲದಿರುವ ಕೊರಗಿಗೆ (Lament of hospital) ಈ ಘಟನೆ ಮತ್ತೊಮ್ಮೆ ಸಾಕ್ಷೀಕರಿಸಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅಂಕೋಲಾ ತಾಲೂಕಿನ ಅಗಸೂರಿನ ಕೆದಗಿ ಕವಲಳ್ಳಿಯ ಸುರೇಶ ರೂಪಾ ಗೌಡ (೩೩) ಮೃತ ದುರ್ದೈವಿ. ನಿನ್ನೆ ನ.೮ರಂದು ಮಧ್ಯಾಹ್ನ ೧.೧೫ರ ಸುಮಾರಿಗೆ ಅಂಕೋಲಾ ತಾಲೂಕಿನ ಬೋಗ್ರಿಬೈಲ್ ಗ್ರಾಮದಲ್ಲಿ ಅಪಘಾತ ನಡೆದಿತ್ತು. ಯಲ್ಲಾಪುರ (Yallapur) ಕಡೆಯಿಂದ ಅಂಕೋಲಾ ಕಡೆಗೆ ಬರುತ್ತಿದ್ದ ಹೊಸದಾದ ನೋಂದಣಿ ಸಂಖ್ಯೆ ಇಲ್ಲದ ಬಿಳಿ ಬಣ್ಣದ ಭಾರತ ಬೆಂಜ್ (Bharat benz) ಕಂಪನಿಯ ಲಾರಿ ಎದುರಿನಿಂದ ಬರುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದಿದೆ.
ಇದನ್ನೂ ಓದಿ : ಬಾವಿಯಲ್ಲಿ ಬಿದ್ದು ಕಾರ್ಮಿಕ ಆತ್ಮಹತ್ಯೆ
ಅತಿ ವೇಗ ಮತ್ತು ಅಜಾಗರೂಕತೆಯಿಂದ ಲಾರಿ ಚಲಾಯಿಸಿಕೊಂಡು ಬಂದ ಚಾಲಕ ವೇಗ ನಿಯಂತ್ರಿಯಸಲಾಗದೆ ರಸ್ತೆಯ ಬಲಕ್ಕೆ ಬಂದಿದ್ದರಿಂದ ಬೈಕಿಗೆ ಲಾರಿ ಡಿಕ್ಕಿಯಾಗಿದೆ. ಬೈಕ್ ಸವಾರನ ಬಲಕಾಲು, ತಲೆ, ಬಲಕೈ ಮತ್ತು ಮೈಮೇಲೆ ಗಾಯವಾಗಿದ್ದರಿಂದ ೧೦೮ ಅಂಬುಲೆನ್ಸ್ ಮೇಲೆ ಅಂಕೋಲಾ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿನ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗೆ ಕಾರವಾರ (Karwar) ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯ್ತು.
ವಿಡಿಯೋ ಸಹಿತ ಇದನ್ನೂ ಓದಿ : ಎಸ್ಡಿಪಿಐ ವಿರುದ್ಧ ಬಿಜೆಪಿ ದೂರು
ಅಲ್ಲಿಂದ ಇನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಮತ್ತೆ ಅಂಕೋಲಾ ಮೂಲಕ ಮಂಗಳೂರು (Mangaluru) ಕಡೆಗೆ ಕರೆದುಕೊಂಡು ಹೋಗಲಾಯ್ತು. ಆದರೆ ಭಟ್ಕಳ (Bhatkal) ನಗರ ಸಮೀಪಿಸುತ್ತಿದ್ದಂತೆ ಮಾರ್ಗಮಧ್ಯದಲ್ಲಿ ಸುರೇಶ ಅವರ ಉಸಿರಾಟ ನಿಂತಿದೆ. ಅವರನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರಿಗೆ ತೋರಿಸಲಾಗಿ ಅದಾಗಲೇ ಸುರೇಶ ಮೃತಪಟ್ಟಿರುವುದಾಗಿ ಖಾತ್ರಿಪಡಿಸಿದ್ದಾರೆ.
ವಿಡಿಯೋ ಸಹಿತ ಇದನ್ನೂ ಓದಿ : ೧೬೮ ಕೆಜಿ ದನದ ಮಾಂಸ ಅಕ್ರಮ ಸಾಗಾಟ
ಉತ್ತರ ಕನ್ನಡ ಜಿಲ್ಲೆಯಲ್ಲೊಂದು ಸುಸಜ್ಜಿತ ಆಸ್ಪತ್ರೆ ಇದ್ದಿದ್ದರೆ ಸುರೇಶ ಅವರನ್ನು ಉಳಿಸಬಹುದಿತ್ತು (Lament of hospital) ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಅಪಘಾತಕ್ಕೆ ಕಾರಣರಾದ ಚಾಲಕ ಕೇರಳದ (Kerala) ದಾನೇಶ ಎಂಬುವವರ ವಿರುದ್ಧ ಅಗಸೂರಿನ ಪ್ರವೀಣ ಗೌಡ ಎಂಬುವವರು ದೂರು (Complaint) ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ (Case Registered) ಅಂಕೋಲಾ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಭಟ್ಕಳದ ಶಿಲ್ಪಿ ಸಹಿತ ಇಬ್ಬರಿಗೆ ಗಾಯ