ಭಟ್ಕಳ (Bhatkal): ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡ ಹಾಗೂ ಪಡೆದುಕೊಳ್ಳುತ್ತಿದ್ದ ಇಬ್ಬರ ಚಿಕಿತ್ಸೆಗಾಗಿ ಯಂಗ್ಒನ್ ಇಂಡಿಯಾದ ಸಂಸ್ಥಾಪಕ ಮಾಸ್ತಪ್ಪ ನಾಯ್ಕ ಬಲ್ಸೆ ಧನ ಸಹಾಯ ಮಾಡಿ ಅವರ ಸಂಕಷ್ಟಕ್ಕೆ ನೆರವಾಗಿದ್ದಾರೆ (Response).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಇಲ್ಲಿನ ಪಡು ಶಿರಾಲಿಯ ನಿವಾಸಿ ನಾರಾಯಣ ವೆಂಕಟಯ್ಯ ನಾಯ್ಕ ಎನ್ನುವವರು ಮರ ಹತ್ತುವ ಕೆಲಸ ಮಾಡಿ ತಮ್ಮ ಜೀವನ ಸಾಗಿಸುತ್ತಿದ್ದರು. ಆದರೆ ಕೆಲ ದಿನಗಳ ಹಿಂದಷ್ಟೇ ಮರ ಹತ್ತುವ ವೇಳೆ ಆಕಸ್ಮಿಕವಾಗಿ ಮರದಿಂದ ಕೆಳಗೆ ಬಿದ್ದು ಕಾಲು ಮುರಿತಕ್ಕೆ ಒಳಗಾಗಿದ್ದರು. ಬಳಿಕ ಇವರ ಚಿಕಿತ್ಸೆಗೆ ಸ್ಪಂದಿಸುವಂತೆ ಮಾಸ್ತಪ್ಪ ನಾಯ್ಕ ಅವರ ಆಪ್ತರಾದ ವಿಶ್ವ ನಾಯ್ಕ ಬಳಿ ಸ್ಥಳೀಯ ಮುಖಂಡರಾದ ಸುಬ್ರಾಯ ನಾಯ್ಕ ಕೋರಿಕೊಂಡಿದ್ದರು.
ಇದನ್ನೂ ಓದಿ : ವಕೀಲಗೆ ಕಲಾಸಿರಿ ಪ್ರಶಸ್ತಿ ಪ್ರದಾನ
ವಿಶ್ವ ನಾಯ್ಕ ಈ ಬಗ್ಗೆ ಮಾಸ್ತಪ್ಪ ನಾಯ್ಕರ ಬಳಿ ಹೇಳಿದಾಗ ಅವರ ಚಿಕಿತ್ಸೆಗೆ ೧೦ ಸಾವಿರ ರೂ. ಹಣವನ್ನು ಮಾಸ್ತಪ್ಪ ನಾಯ್ಕ ಬಲ್ಸೆ ನೀಡಿದ್ದಾರೆ (Response). ಆ ಹಣವನ್ನು ಅಲ್ಲಿನ ಮುಖಂಡರಾದ ಸುಬ್ರಾಯ ನಾಯ್ಕ ಅವರ ಸಮ್ಮುಖದಲ್ಲಿ ಹಸ್ತಾಂತರ ಮಾಡಿದ್ದಾರೆ. ಈ ಸಂದರ್ಭದಲ್ಲಿ ವಿಶ್ವ ನಾಯ್ಕ, ನವೀನ ನಾಯ್ಕ, ರಘು ನಾಯ್ಕ, ಮಾರುತಿ ನಾಯ್ಕ ಇದ್ದರು.
ಇದನ್ನೂ ಓದಿ : ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ
ಇನ್ನೊಂದು ಪ್ರಕರಣದಲ್ಲಿ, ತಾಲೂಕಿನ ಜಾಲಿ ಕೋಡಿಯಲ್ಲಿ ವಸಂತ ಹೊನ್ನಯ್ಯ ನಾಯ್ಕ ಎಂಬ ಯುವಕ ಆತ್ಮಹತ್ಯೆಗೆ ಯತ್ನಿಸಿ ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸುತ್ತಿದ್ದಾನೆ. ಇದನ್ನು ಅರಿತ ಯಂಗ್ಒನ್ ಇಂಡಿಯಾದ ಸಂಸ್ಥಾಪಕ ಮಾಸ್ತಪ್ಪ ನಾಯ್ಕ ಬಲ್ಸೆ ತಮ್ಮ ಅಭಿಮಾನಿಗಳ ಮುಖಾಂತರ ೫೦೦೦ ರೂಪಾಯಿ ಹಣವನ್ನು ಅವರ ಮನೆಗೆ ತಲುಪಿಸಿದ್ದಾರೆ.
ಇದನ್ನೂ ಓದಿ : ನಗರ ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆ ಘೋಷಣೆ