ಭಟ್ಕಳ (Bhatkal) : ಗಾಂಜಾ ಸೇವಿಸಿದ ಕಾರವಾರದ (Karwar) ಯುವಕನನ್ನು ಮುರ್ಡೇಶ್ವರ (Murudeshwar) ಪೊಲೀಸರು ವಶಕ್ಕೆ ಪಡೆದು (Youth arrest) ಕ್ರಮಕೈಗೊಂಡಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕಾರವಾರ ತಾಲೂಕಿನ ಸದಾಶಿವಗಡದ ಸೀಬರ್ಡ್ ಕಾಲೋನಿಯ ದಾವುದ್ ನಜೀರ್ ಶೇಖ (೩೪) ಆರೋಪಿ. ನಿನ್ನೆ ಸೆ. ೨೮ರಂದು ಸಂಜೆ ೭ರ ಸುಮಾರಿಗೆ ಮುರ್ಡೇಶ್ವರದ (Murudeshwar) ಬೀಚ್ ಬಳಿ ಗಾಂಜಾ ಸೇವನೆ ಮಾಡಿದ ಅನುಮಾನದ ಮೇಲೆ ಪೊಲೀಸರು ವಶಕ್ಕೆ ಪಡೆದಿದ್ದರು (youth arrest). ಮುರ್ಡೇಶ್ವರ ಠಾಣೆ ಪಿಎಸ್ಐ ಹಣಮಂತ ಬಿರಾದರ ಅವರು ಪಂಚರ ಸಮಕ್ಷಮ ಸಿಬ್ಬಂದಿ ಜೊತೆಯಲ್ಲಿ ವಶಕ್ಕೆ ಪಡೆದಿದ್ದರು.

ಇದನ್ನೂ ಓದಿ : ಕಾರು ಡಿಕ್ಕಿಯಾಗಿ ಸೈಕಲ್‌ ಸವಾರಗೆ ಗಾಯ

ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಿದಾಗ ಆರೋಪಿ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಆರೋಪಿ ವಿರುದ್ಧ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (case registered).

ವಿಡಿಯೋ ಸಹಿತ ಇದನ್ನೂ ಓದಿ :  ಕಾಡಾನೆ ದಾಳಿಗೆ ಬಾಳೆ ತೋಟ, ಅಡಿಕೆ ಮರ ಹಾನಿ