ಭಟ್ಕಳ (Bhatkal) : ಚಲಿಸುತ್ತಿದ್ದ ರೈಲಿಗೆ (train) ಸಿಲುಕಿ ಯುವಕನೋರ್ವ ಸಾವನ್ನಪ್ಪಿದ (youth died) ಘಟನೆ ಯಲ್ವಡಿಕವೂರ ಗ್ರಾಪಂ ವ್ಯಾಪ್ತಿಯ ಸೋಡಿಗದ್ದೆ ಕ್ರಾಸ್ ರೈಲ್ವೆ ಹಳಿ (railway track) ಸಮೀಪ ನಡೆದಿದೆ. ಇಂದು ಮಂಗಳವಾರ ಬೆಳಿಗ್ಗೆ ಯುವಕನ ಮೃತ ದೇಹ ಪತ್ತೆಯಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮೃತ ಯುವಕನ್ನು ಭಟ್ಕಳ ತಾಲೂಕಿನ ಆಶಿಕಾನ್‌ ನಿವಾಸಿ ಗಿರೀಶ ಪಾಂಡು ಜೋಗಿ ಎಂದು ಗುರುತಿಸಲಾಗಿದೆ. ರೈಲು ಡಿಕ್ಕಿ ಯಾದ ರಭಸಕ್ಕೆ ಯುವಕನ ಎರಡೂ ಕಾಲುಗಳು ತುಂಡಾಗಿವೆ. ಸ್ಥಳಕ್ಕೆ ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹವನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಭಟ್ಕಳ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (case registered). ಯುವಕನ ಸಾವಿಗೆ (youth died) ನಿಖರವಾದ ಕಾರಣ ಪೊಲೀಸ್‌ ತನಿಖೆಯಿಂದ ತಿಳಿದು ಬರಬೇಕಿದೆ.

ಇದನ್ನೂ ಓದಿ : fisherman injured/ ಅಡ್ಡಾದಿಡ್ಡಿ ಬೋಟ್‌ ಚಾಲನೆ; ಓರ್ವಗೆ ಗಾಯ