ಕುಮಟಾ: ಇಲ್ಲಿನ ಯುವಾ ಬ್ರಿಗೇಡ್(Yuva Brigade) ವತಿಯಿಂದ ಕಾರ್ಗೀಲ್ ವಿಜಯ ದಿವಸದ ಅಂಗವಾಗಿ Target POK Run ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ನಿವೃತ್ತ ಸೈನಿಕ ವಿಂಗ್ ಕಮಾಂಡರ್ ಗಣೇಶ್ ಶಾಸ್ತ್ರಿ ಉಪಸ್ಥಿತಿಯಲ್ಲಿ ಹವಾಲ್ದಾರ ನಾರಾಯಣ ಗಾವಡಿ, ಹವಾಲ್ದಾರ ವಿನಾಯಕ ಬಿ. ನಾಯ್ಕ, ಹವಾಲ್ದಾರ ಜೈವಂತ್, ಹವಾಲ್ದಾರ ಮಹೇಶ್ ಹರಿಕಾಂತ, ಸುಬೇದಾರ ಮಂಜುನಾಥ್ ಜಿ ಪಟಗಾರ, ಹವಾಲ್ದಾರ ನಾಗರಾಜ್ ಜಿ ನಾಯ್ಕ, ಸುಬೇದಾರ ವಿನಾಯಕ ನಾಯ್ಕ, ಹವಾಲ್ದಾರ ಗಣೇಶ ಎಲ್. ನಾಯ್ಕ ಮಿರ್ಜಾನ್ ಉಪಸ್ಥಿತರಿದ್ದರು. ಈ ನಿವೃತ್ತ ಯೋಧರು ಎಲ್ಲರ ಜೊತೆಯಲ್ಲಿ ಓಡುವ ಮೂಲಕ ಕಾರ್ಗಿಲ್ ವಿಜಯ ದಿವಸದ ಸಂಭ್ರಮವನ್ನು ಇನ್ನಷ್ಟು ಹೆಚ್ಚು ಸುಂದರವಾಗಿಸಿದರು.

ಇದನ್ನೂ ಓದಿ : ಪದವಿ ಪೂರ್ವ ಉಪನಿರ್ದೇಶಕರಿಗೆ ಸನ್ಮಾನ

ಕಾರ್ಯಕ್ರಮದ ಮುಖ್ಯ ಅತಿಥಿ ವಿಂಗ್ ಕಮಾಂಡರ್ ಗಣೇಶ ಶಾಸ್ತ್ರಿ ಅವರು ಕಾರ್ಗಿಲ್ ಯುದ್ಧದ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು. ಇತ್ತೀಚಿನ ದಿನದಲ್ಲಿ ಭಾರತಿಯ ಸೈನ್ಯದಲ್ಲಿ ಆಧುನಿಕ ಶಸ್ತ್ರಾಸ್ತ್ರಗಳಿವೆ. ಇದು ದೇಶ ರಕ್ಷಣೆಗೆ ಸಹಾಯಕವಾಗಿದೆ. ಯುವಕರು ಯುವತಿಯರು ಹೆಚ್ಚೆಚ್ಚು ಸಂಖ್ಯೆಯಲ್ಲಿ ಸೈನ್ಯಕ್ಕೆ ಸೇರಿ ದೇಶದ ರಕ್ಷಣೆಯಲ್ಲಿ ಪಾಲ್ಗೊಳ್ಳಬೇಕಾಗಿದೆ ಎಂದರು. ಇಂತಹ ಕಾರ್ಯಕ್ರಮ ಮಾಡುತ್ತಾ ಇರುವ ಕುಮಟಾದ ಯುವಾ ಬ್ರಿಗೇಡ್(Yuva Brigade) ತಂಡದ ಕಾರ್ಯವನ್ನು ಶ್ಲಾಘಿಸಿದರು.

ಇದನ್ನೂ ಓದಿ : ಜುಲೈ ೨೬ರಂದು ವಿವಿಧೆಡೆಯ ಅಡಿಕೆ ಧಾರಣೆ

ಸುಮಾರು ೧೩೦ಕ್ಕೂ ಹೆಚ್ಚು ಜನ ಈ ಮ್ಯಾರಥಾನ್ ರನ್ ನಲ್ಲಿ ಭಾಗವಹಿಸಿದ್ದರು. ಮಾರ್ಗದ ಉದ್ದಕ್ಕೂ ಭಾರತಮಾತೆಯ ಘೋಷಣೆ ಕೂಗುತ್ತಾ ಸಾಗಿದರು. ಭಾಗವಹಿಸಿದವರಿಗೆ ಕೊನೆಯಲ್ಲಿ ತಮ್ಮ ಹಸ್ತಾಕ್ಷರ ಇರುವ ಪ್ರಮಾಣ ಪತ್ರವನ್ನು ನಿವೃತ್ತ ಸೈನಿಕರು ವಿತರಣೆ ಮಾಡಿದರು.

ಇದನ್ನೂ ಓದಿ :  ವಿದೇಶಿ ವಿದ್ಯಾಭ್ಯಾಸಕ್ಕೆ ಸಿಗಲಿದೆ ಸಾಲ

ಓಟದಲ್ಲಿ ಭಾಗವಹಿಸಿದ ಎಲ್ಲರಿಗೂ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಬಳಸಿದ ನೀರಿನ ಬಾಟಲ್ ಎಲ್ಲೆಂದರಲ್ಲಿ ಎಸೆಯದಂತೆ ಯುವಾ ಬ್ರಿಗೇಡ್ ತಂಡದ ಸದಸ್ಯರು ನೋಡಿಕೊಂಡರು. ಸ್ವಚ್ಚತೆಯ ಅರಿವಿನ ಜೊತೆಗೆ ಪರಿಸರ ಕಾಳಜಿ ಮೆರೆಯುವ ಮೂಲಕ ವಿಭಿನ್ನ ಕಾರ್ಯಕ್ರಮ ಆಚರಣೆ ಮಾಡಿದರು.