ಭಟ್ಕಳ (Bhatkal): ಧಾರವಾಡದ (Dharwad) ಕರ್ನಾಟಕ ವಿಶ್ವವಿದ್ಯಾಲಯದ (Karnataka University) ಯುವಜನೋತ್ಸವ (Yuvajanotsav) ತಂಡಕ್ಕೆ ಭಟ್ಕಳದ ಶ್ರೀ ಗುರು ಸುಧೀಂದ್ರ (Guru Sudhindra) ಪದವಿ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬಿ.ಕಾಂ. ವಿದ್ಯಾರ್ಥಿಗಳಾದ ಮೇಘಾ ನಾಯ್ಕ ಮೆಹಂದಿ ಸ್ಪರ್ಧೆಗೆ ಹಾಗೂ ಲೋಕೇಶ ಮೊಗೇರ ಕೊಲಾಜ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಇಬ್ಬರೂ ವಿದ್ಯಾರ್ಥಿಗಳು ಕರ್ನಾಟಕ ವಿಶ್ವವಿದ್ಯಾಲಯ ಆಯೋಜಿಸಿದ ವಲಯ ಮಟ್ಟದ ಯುವಜನೋತ್ಸವ (Yuvajanotsav) ಕಾರ್ಯಕ್ರಮದಲ್ಲಿ ಉತ್ತರ ಕನ್ನಡ (Uttara Kannada) ವಿಭಾಗದಿಂದ ಆಯ್ಕೆಯಾಗಿದ್ದರು.

ಇದನ್ನೂ ಓದಿ : CCTV/ ಕದ್ದ ಸ್ಥಳದಲ್ಲೇ ಬೈಕ್‌ ಬಿಟ್ಟು ಹೋದ…. !

ಇವರು ಬೆಂಗಳೂರಿನ (Bengaluru) ಕ್ರೈಸ್ಟ್ ಯುನಿವರ್ಸಿಟಿಯಲ್ಲಿ (christ University) ಜರುಗುವ ರಾಜ್ಯ ಮಟ್ಟದ ಸ್ಪರ್ಧೆಗೆ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಲಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆ ಭಟ್ಕಳ ತಾಲೂಕು ಹೆಮ್ಮೆಪಡುವಂತೆ ಮಾಡಿದೆ ಎಂದು ಪ್ರಾಂಶುಪಾಲ ಶ್ರೀನಾಥ ಪೈ, ಆಡಳಿತ ಮಂಡಳಿ, ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ವೀಡಿಯೋ ಸಹಿತ ಇದನ್ನೂ ಓದಿ : Marikambe/ ಭಟ್ಕಳದಲ್ಲಿ ದೇವಿಯ ೨ ಗೊಂಬೆ ನಾಪತ್ತೆ