ಭಟ್ಕಳ: ಅತ್ಯಾಚಾರ ಆರೋಪ ಎದುರಿಸುತ್ತಿರುವ ಮುರುಡೇಶ್ವರದ ಗಣೇಶ ಹರಿಕಾಂತ ಬಂಧನವಾಗಿದೆ. ಮುರ್ಡೇಶ್ವರ ಪೊಲೀಸರು ಮಹಾರಾಷ್ಟ್ರದ ಪಂಢರಾಪುರದಲ್ಲಿ ವಶಕ್ಕೆ ಪಡೆದಿದ್ದರು. ಅವರನ್ನು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ನ್ಯಾಯಾಲಯಕ್ಕೆ ಕರೆದೊಯ್ದಿದ್ದಾರೆ.

ಇದನ್ನೂ ಓದಿ : ಮುರುಡೇಶ್ವರ ಠಾಣೆಯಲ್ಲಿ ಅತ್ಯಾಚಾರ ದೂರು ದಾಖಲು

ಮುರ್ಡೇಶ್ವರದ ಸೋನಾರಕೇರಿ, ಪಟ್ರಗದ್ದೆ ನಿವಾಸಿ ಗಣೇಶ ಮಂಜುನಾಥ ಹರಿಕಾಂತ ಮುರ್ಡೇಶ್ವರದ ನೇತ್ರಾಣಿ ಎಡ್ವಂಚರ್ಸ್ ಮಾಲೀಕ. ಇವರ ವಿರುದ್ಧ ಮನೆಕೆಲಸ ಮಾಡುವ ಯುವತಿ ಅತ್ಯಾಚಾರ ಆರೋಪ ಹೊರಿಸಿ ಮುರ್ಡೇಶ್ವರ ಠಾಣೆಯಲ್ಲಿ ದೂರು ನೀಡಿದ್ದಳು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿ ಪತ್ತೆಗಾಗಿ ತಂಡ ರಚನೆ ಮಾಡಿದ್ದರು. ಒಂದು ವಾರದ ಸತತ ತನಿಖೆಯ ಪರಿಣಾಮ ಆರೋಪಿಯನ್ನು ಮಹಾರಾಷ್ಟ್ರದ ಪಂಢರಾಪುರದಲ್ಲಿ ಪತ್ತೆಹಚ್ಚಲಾಗಿದೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.