ಶಿವಮೊಗ್ಗ : ಕೇಂದ್ರ ಸಚಿವ ಅಮಿತ್ ಶಾ ಆಹ್ವಾನದ ಮೇರೆಗೆ ಅವರ ಭೇಟಿಗಾಗಿ ಶಿವಮೊಗ್ಗದಲ್ಲಿ ಬಂಡಾಯ ಎದ್ದಿರುವ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ದೆಹಲಿಗೆ ತೆರಳಿದ್ದಾರೆ.
ಇದನ್ನೂ ಓದಿ : ವೀರೇಶ್ವರ ಸ್ವಾಮೀಜಿ ಲೋಕಸಭೆ ಚುನಾವಣಾ ಕಣಕ್ಕೆ !
ಇಂದು (ಏ.೩) ಮಧ್ಯಾಹ್ನ ಆಪ್ತ, ಮಾಜಿ ಕಾರ್ಪೋರೇಟರ್ ಇ.ವಿಶ್ವಾಸ ಅವರೊಂದಿಗೆ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದ ಈಶ್ವರಪ್ಪ ಸಂಜೆ ಅಮಿತ್ ಶಾ ಅವರನ್ನು ಮನೆಯಲ್ಲಿ ಭೇಟಿ ಮಾಡಲಿದ್ದಾರೆ. ದೆಹಲಿ ತೆರಳುವ ಮುನ್ನ ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಶಿವಮೊಗ್ಗದಲ್ಲಿ ಈಶ್ವರಪ್ಪ ಸ್ಪರ್ಧೆ ಮಾಡಿದರೆ ರಾಘವೇಂದ್ರ ಸೋಲುತ್ತಾನೆ. ಹೀಗಾಗಿ ಈಶ್ವರಪ್ಪ ಬಳಿ ಮಾತನಾಡಿ ಎಂದು ಅಮಿತ್ ಶಾ ಅವರಿಗೆ ರಾಘವೇಂದ್ರ ಒತ್ತಡ ಹಾಕಿರಬಹುದು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸಂಶಯ ವ್ಯಕ್ತಪಡಿಸಿದರು.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಅವರೇಕೆ ನನ್ನನ್ನು ದೆಹಲಿಗೆ ಕರೆದಿದ್ದಾರೋ ನನಗೆ ಗೊತ್ತಿಲ್ಲ. ಅವರು ಮನೆಗೆ ಬಾ ಎಂದು ಕರೆದಾಗ ದೊಡ್ಡವರಿಗೆ ಗೌರವ ಕೊಡುವುದು ನಮ್ಮ ಸಂಸ್ಕೃತಿ. ಇದಕ್ಕಾಗಿ ನಾನು ದೆಹಲಿಗೆ ಹೋಗುತ್ತಿದ್ದೇನೆ. ಅವರೊಂದಿಗೆ ಕೂತು ಚರ್ಚೆ ಮಾಡಿ, ಎಲ್ಲವನ್ನು ತಿಳಿಸುತ್ತೇನೆ. ನನ್ನ ನಿರ್ಧಾರದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯಲ್ಲ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಟ್ಟು ಒಪ್ಪಿಸುತ್ತೇನೆ ಎಂದರು.
ಇದನ್ನೂ ಓದಿ : ಹಿರಿಯ ಪತ್ರಕರ್ತ ಎಂ.ಕೆ.ಭಾಸ್ಕರ್ ರಾವ್ ನಿಧನ : ಹರಿಪ್ರಕಾಶ ಕೋಣೆಮನೆ ಸಂತಾಪ
ಅಮಿತ್ ಶಾ ಅವರು ಮನವೊಲಿಸಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ನಾನೂ ಕೂಡ ನನ್ನ ಸ್ಪರ್ಧೆ ಯಾವ ಉದ್ದೇಶಕ್ಕಾಗಿ ಎಂಬುದನ್ನು ತಿಳಿಸಿ ಅವರನ್ನು ಒಪ್ಪಿಸುವ ಪ್ರಯತ್ನ ಮಾಡುತ್ತೇನೆ. ನಿಮ್ಮ ಸ್ಪರ್ಧೆಯ ಉದ್ದೇಶ ಸರಿಯಾಗಿದೆ. ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯಬೇಡಿ, ನಾವು ನಿಮ್ಮ ಬೆಂಬಲಕ್ಕೆ ಇದ್ದೇವೆ ಎಂದು ಬಿಜೆಪಿಯವರು ಅಷ್ಟೇ ಅಲ್ಲ ಕಾಂಗ್ರೆಸ್, ಜೆಡಿಎಸ್‌ನವರೂ ಹೇಳುತ್ತಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ : ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವು
ಬೇರೆ ಕಡೆ ಬಂಡಾಯ ಅಭ್ಯರ್ಥಿಗಳ ಮನವೊಲಿಸುವುದಕ್ಕೂ ಶಿವಮೊಗ್ಗಕ್ಕೂ ವ್ಯತ್ಯಾಸ ಇದೆ. ನನ್ನ ಉದ್ದೇಶವೇ ಬೇರೆ. ಅವರೆಲ್ಲ ಟಿಕೆಟ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ಸ್ಪರ್ಧೆ ಮಾಡುತ್ತಿದ್ದಾರೆ. ಆದರೆ ನಾನು ಮೋದಿಯನ್ನು ಪ್ರಧಾನಿಯನ್ನಾಗಿ ಮಾಡಲೇ ಬೇಕು ಎಂದು ಉದ್ದೇಶ ಇಟ್ಟುಕೊಂಡು ಸ್ಪರ್ಧೆ ಮಾಡುತ್ತಿದ್ದೇನೆ. ಈ ಚುನಾವಣೆಯಲ್ಲಿ ಗೆಲ್ಲುತ್ತೇನೆ. ಮೋದಿಗೆ ಹೋಗಿ ಕೈ ಎತ್ತುತ್ತೇನೆ. ಈ ನಿಟ್ಟಿನಲ್ಲೇ ಎಲ್ಲ ಕಡೆಯಿಂದಲೂ ನಿರೀಕ್ಷೆಗೂ ಮೀರಿ ಬೆಂಬಲ ಸಿಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉತ್ತರ ಕನ್ನಡ ಕ್ಷೇತ್ರದವರಾ? ಈ ವರದಿ ಓದಿ…
ನನ್ನ ಸ್ಪರ್ಧೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪ್ರಮುಖ ಕಾರ್ಯಕರ್ತರಿಗೆ ಸ್ಪಷ್ಟ ಮಾಡಿದ್ದೇನೆ. ಇನ್ನೂ ಕೆಲವರಿಗೆ ಗೊಂದಲ ಇದ್ದರೆ ನಾನು ದೆಹಲಿಗೆ ಹೋಗಿ ಬಂದ ನಂತರ ಅವರಿಗೂ ಸ್ಪಷ್ಟವಾಗುತ್ತದೆ ಎಂದರು.