ಬೆಂಗಳೂರು : ಪಬ್ಲಿಕ್ ಪವರ್ ಜಾಗೃತಿ ನ್ಯೂಸ್ ವಾರ್ಷಿಕೋತ್ಸವ ಹಾಗೂ ಸಂಸ್ಥಾಪಕ ನಾರಾಯಣ ರಾವ್ ಅವರ ಜನ್ಮ ದಿನದ ಸಂದರ್ಭದಲ್ಲಿ ಗೋಕರ್ಣ ಸಿದ್ಧೇಶ್ವರದ ಪ್ರವೀಣಬಾಬು ಮಹಾಲೆಯವರ ‘ಅಮ್ಮನ ನೆರಳಿನಲ್ಲಿ’ ಕಥಾ ಸಂಕಲನ ಬಿಡುಗಡೆಗೊಂಡಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಮುಖ್ಯ ಅತಿಥಿ, ಸಾಹಿತಿ ನವೀನ ಕಲ್ಗುಂಡಿ ಕಥಾಸಂಕಲನ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡುತ್ತಾ, ಅಮ್ಮನ ವೈಶಿಷ್ಟವನ್ನು ಹಲವು ಉದಾಹರಣೆಗಳನ್ನು ನೀಡಿ  ಪ್ರಸ್ತುತ ಪಡಿದರು. ಈ ಕಥಾ ಸಂಕಲನದಲ್ಲಿ ಕೋಮು ಸಾಮರಸ್ಯವನ್ನು ಸಾರಿದ್ದಾರೆ. ದೇಶ ವಿಭಜನೆ ದೂರಲಾಗಿದೆ. ಸಮಾಜಕ್ಕೆ ಕೊಡುಗೆಯಾಗುವ ಹಲವು ಉತ್ತಮ ಸಂದೇಶವನ್ನು ಹೊತ್ತ ವಿಭಿನ್ನ ಕತೆಗಳು ಮಹಾಲೆಯವರು ಮನ ಬಿಂಬಿಸುವ ಹಾಗೆ ಬರೆದಿದ್ದಾರೆ ಎಂದರು.

ಇದನ್ನೂ ಓದಿ : ಚಟುವಟಿಕೆಯ ಕೇಂದ್ರ ಬಿಂದು ಸಚಿನ್ ಮಹಾಲೆ : ವಿಶ್ವೇಶ್ವರ ಹೆಗಡೆ ಕಾಗೇರಿ

ಡಾ.ಕೆ.ವಿ ರಾಮಚಂದ್ರ ಮಾತನಾಡಿ, ಮನುಷ್ಯ ಜೀವವಿರುವಾಗಲೇ ಅಪ್ಪ-ಅಮ್ಮನನ್ನು ಚೆನ್ನಾಗಿ ನೋಡಬೇಕು. ಸತ್ತ ನಂತರ ಯಾವ ವೈಭವೀಕರಣಕ್ಕೆ ಅರ್ಥವಿಲ್ಲ. ಈ ಕಥಾ ಸಂಕಲನದಲ್ಲಿ ಅಮ್ಮನ ವೈಶಿಷ್ಟ್ಯವನ್ನು ಎತ್ತಿ ತೋರಿಸಿದ್ದಾರೆ ಎಂದರು.

ಇದನ್ನೂ ಓದಿ : ಜುಲೈ ೯ರಂದು ರಾಜ್ಯದ ವಿವಿಧೆಡೆ ಅಡಿಕೆ ಧಾರಣೆ

ಶ್ರೀನಿಧಿ ಪಬ್ಲಿಕೇಶನ್ಸ ವ್ಯವಸ್ಥಾಪಕ ನವೀನ ಪುರುಷೋತ್ತಮ ಮಾತನಾಡಿ, ಪುಸ್ತಕ ಪ್ರಕಾಶನ ನಡೆಸಿಕೊಂಡು ಈಗ ನಾವು ನಾಲ್ಕನೇ ತಲೆಮಾರಿನಲ್ಲಿ ಇದ್ದೇವೆ. ಈ ಕಥಾ ಸಂಕಲನದಲ್ಲಿ ಸಮಾಜದಲ್ಲಿ ನಡೆಯುವ ನೋವು ನಲಿವುಗಳ ಮನ ಮಿಡಿಯುವ ಕತೆಗಳು ಸೇರಿವೆ. ಮಹಾಲೆಯವರು ಸರಳ ಸಾಹಿತ್ಯದಿಂದ ಹೃದಯಕ್ಕೆ ಸ್ಪರ್ಷಿಸುವ ಹಾಗೆ ಬರೆದಿದ್ದಾರೆ ಎಂದರು.

ಇದನ್ನೂ ಓದಿ : ಪಕ್ಷ ವಿರೋಧಿ ಮಾಡಿದವರನ್ನು ದೂರವಿಡಿ : ಮಾಜಿ ಶಾಸಕ ಸುನೀಲ ನಾಯ್ಕ

ಸಿದ್ದಲಿಂಗಶ್ರೀ ಪ್ರಶಸ್ತಿ ಭಾಜನ ಕವಿ- ಲೇಖಕ ಪ್ರವೀಣಬಾಬು ಮಹಾಲೆಯವರು ಕಥಾ ಸಂಕಲನ ಉದ್ದೇಶಿಸಿ ಮಾತನಾಡುತ್ತ, ಈ ಕಥಾ ಸಂಕಲನಕ್ಕೆ ಬಾಲ್ಯದಲ್ಲಿ ಕಳಕೊಂಡ ತಮ್ಮಅಮ್ಮನೇ ಪ್ರೇರಣೆಯಾಗಿದ್ದಾಳೆ. ಈ  ಕಥಾ ಸಂಕಲನದಲ್ಲಿ ಎಷ್ಟೋ ಕತೆಗಳು ನೈಜವಾಗಿದೆ. ನವೀನ ಪುರುಷೋತ್ತಮರವರ ಸಹಕಾರದಿಂದ ಈ ಕಥಾ ಸಂಕಲನ ಪುಸ್ತಕ ರೂಪ ಇಂದು ಪಡೆದಿದೆ. ನನ್ನ ಈ ಸಾಹಿತ್ಯ ಕೃಷಿಗೆ ನವೀನ ಪುರುಷೋತ್ತಮ, ಪ್ರವೀಣರಾವ ಶಿರಸಿ, ಸುಜಯ ಶೆಟ್ಟಿ ಗೋಕರ್ಣ, ಶ್ರೀಪಾದ ಕುಲಕರ್ಣಿ ನೆರವಾಗಿದ್ದಾರೆ ಎಂದರು.

ಇದನ್ನೂ ಓದಿ : ತುಂಬಿ ತುಳುಕುತ್ತಿದೆ ಭಟ್ಕಳದ ಭೀಮಾನದಿಯ ಕಡವಿನಕಟ್ಟೆ ಜಲಾಶಯ

ಸಭಾದ್ಯಕ್ಷ ನಾರಾಯಣ ರಾವ್ ಶಿರಸಿ ಮಾತನಾಡಿ, ಮಹಾಲೆಯವರ ಈ ಕಥಾ ಸಂಕಲನ ಜನರ ಮನದಲ್ಲಿ ಸೇರಲಿ ಎಂದರು. ವೇದಬ್ರಹ್ಮ ವೈ. ಹರೀಶ ಆಶೀರ್ವಚನ ಮಾಡಿದರು.

ಕಥಾ ಸಂಕಲನದ ಕಥೆಗಾರ ಪ್ರವೀಣಬಾಬು ಮಹಾಲೆ ದಂಪತಿಯನ್ನು ಸನ್ಮಾನಿಸಲಾಯಿತು.

ಪ್ರವೀಣಬಾಬು ಮಹಾಲೆ ದಂಪತಿ, ನವೀನ ಪುರುಷೋತ್ತಮ, ನವೀನ ಕಲ್ಗುಂಡಿ, ಸುದೀಂಧ್ರ ಆಚಾರ್ಯ, ಇನ್ನಿತರ ಅತಿಥಿಗಳಿಗೆ ಪಬ್ಲಿಕ್ ಪವರ್ ಸಂಸ್ಥಾಪಕರು ಸನ್ಮಾನಿಸಿ, ಗೌರವ ಸೂಚಿಸಿದರು.
ಸುದೀಂಧ್ರ ಆಚಾರ್ಯ, ಶ್ವೇತಾ ಸಿದ್ಧೇಶ್ವರ ಹಿತ್ಲಲಮಕ್ಕಿ, ಸುಜಯ ಶೆಟ್ಟಿ ಗೋಕರ್ಣ ಉಪಸ್ಥಿತರಿದ್ದರು.
ರೂಪಾ ಪ್ರವೀಣರಾವ್ ಪಾರ್ಥಿಸಿದರು.  ಮೀರಾ ಪ್ರಸಾದ ನಿರೂಪಣೆಗೈದರು. ಶ್ವೇತಾ ಕುಮಾರಿ ವಂದಿಸಿದರು.